ಪೌರ ಕಾರ್ಮಿಕರು ವೇತನ ಪಾವತಿಗಾಗಿ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ದಿ  ೧೨  ರಂದು ಗಂಗಾವತಿ ನಗರಸಭೆಯ ೧೦೦ ಜನ ಪೌರ ಕಾರ್ಮಿಕರು ಉದ್ಯೋಗ ಭದ್ರತೆ ಮತ್ತು ಆರು ತಿಂಗಳ ಬಾಕಿ ವೇತನ  ಪಾವತಿಗಾಗಿ ಗಂಗಾವತಿ ನಗರದ ಬಸ್‌ನಿಲ್ದಾಣದ ಮುಂದಿರುವ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು  
        ದಿ ೦೪  ರಂದು ನಗರಸಭೆ ಅಧಿಕಾರಿಗಳು ಮುನ್ಸೂಚನೆ ಇಲ್ಲದೇ ೪೨ ಜನ ದಲಿತ ಮಹಿಳಾ ಪೌರ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿ, ಆರು ತಿಂಗಳಿನಿಂದ ವೇತನ ಕೊಡದೇ ಇರುವುದನ್ನು ಪ್ರತಿಭಟಿಸಿ ಪೌರ ಕಾರ್ಮಿಕರು ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. 
       ಪ್ರತಿಭಟನೆಯಲ್ಲಿ ಕೆಜಿಎಲ್‌ಯು ತಾಲೂಕ ಅಧ್ಯಕ್ಷರ ಕೆ. ಖಾದರಭಾಷಾ, ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿಗಳಾದ ಭಾರಧ್ವಾಜ್, ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘದ ತಾಲೂಕ ಅಧ್ಯಕ್ಷರಾದ ಎಂ.ಏಸಪ್ಪ ಮತ್ತೀತರ ಕರ್ನಾಟಕ ಸಾಮಾನ್ಯ ಕಾರ್ಮಿಕ ಸಂಘದ ಮುಖಂಡರು ಪಾಲ್ಗೊಂಡಿದ್ದರು .
Please follow and like us:
error