ಮೇ ೧ ರಂದು ಲಡಾಯಿ ಪ್ರಕಾಶನದ ೨ ಪುಸ್ತಕಗಳ ಬಿಡುಗಡೆ ಮತ್ತು ಕಥಾ ಸಾಹಿತ್ಯದ ಸಂವಾದಗೋಷ್ಠಿ

ನಮ್ಮ ಪ್ರಕಾಶನವು ಪ್ರಕಟಿಸಿರುವ ಬಿ. ಶ್ರೀನಿವಾಸ್‌ರ ೨ ಪುಸ್ತಕಗಳ ಬಿಡುಗಡೆ ಮತ್ತು ಸಮಕಾಲೀನ ಕಥಾ ಸಾಹಿತ್ಯದ ಕುರಿತು ಸಂವಾದಗೋಷ್ಠಿಯು ಮೇ ೧ ೨೦೧೨ ರಂದು ಹಾವೇರಿಯ ಶಿವಶಕ್ತಿ ಪ್ಯಾಲೇನಲ್ಲಿ ಮುಂಜಾನೆ ೧೧ ಗಂಟೆಗೆ ನಡೆಯಲಿದೆ ಅವರ
ಕಾಣದಾಯಿತೋ ಊರುಕೇರಿ ಕಥಾ ಸಂಕಲನ ಹಾಗೂ ಉರಿವ ಒಲೆಯ ಮುಂದೆ ಕವನ ಸಂಕಲನವನ್ನು ಅಂಕಣಕಾರರು ಚಳುವಳಿಯ ಸಂಘಟಿಕರಾದ ಶಿವಸುಂದರ್ ಬಿಡುಗಡೆ ಮಾಡುವರು ಅಧ್ಯಕ್ಷತೆಯನ್ನು ಡಾ ಚಂದ್ರಶೇಖರ ನಂಗಲಿ ವಹಿಸುವರು
ಡಾ ಎಚ್ ಎಸ್ ಅನುಪಮಾ ಅವರು ಉರಿವ ಒಲೆಯ ಮುಂದೆ ಮತ್ತು ಡಾ ಕುಂಸಿ ಉಮೇಶ್ ಅವರು ಕಾಣದಾಯಿತೋ ಊರುಕೇರಿ ಕುರಿತು ಮಾತಾಡುವರು ಡಾ ಜಾಜಿ ದೇವೇಂದ್ರಪ್ಪ ಗೋಷ್ಟಿಯ ನಿರ್ವಹಣೆ ಮಾಡುವರು
ಮಧ್ಯಾಹ್ನ ೩ ಗಂಟೆಗೆ ಸಮಕಾಲೀನ ಕಥಾ ಸಾಹಿತ್ಯದ ಸಂವಾದಗೋಷ್ಠಿ ನಡೆಯಲಿದೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಡಾ ಮೊಗಳ್ಳಿ ಗಣೇಶ್ ಗೋಷ್ಠಿಗೆ ಚಾಲನೆ ನೀಡುವರು. ಟಿಪ್ಪಣಿ ಮಂಡನೆಯನ್ನು ಸರ್ಜಾಶಂಕರ ಹರಳಿಮಠ, ಮಹಾಂತೇಶ್ ನವಲಕಲ್ಲ ಮಾಡುವರು. ಡಾ ವಿನಯಾ ಅವರು ಸಮಾರೋಪ ಮಾಡಲಿದ್ದಾರೆ. ಸಂವಾದದಲ್ಲಿ ವಿರುಪಾಕ್ಷಪ್ಪ ಕೊರಗಲ್ಲ, ಸುನಂದಾ ಕಡಮೆ, ಬಸು ಬೇವಿನಗಿಡದ, ಅಬ್ಬಾಸ ಮೇಲಿನಮನಿ, ಡಾ ಆನಂದ ಋಗ್ವೇದಿ, ಡಾ ಎಂ. ಡಿ. ಒಕ್ಕುಂದ ಡಾ. ಸುಧಾ ಚಿದಾನಂದಗೌಡ, ಚಂದ್ರಕಾಂತ ವಡ್ಡು, ಡಾ . ಅನಸೂಯ ಕಾಂಬಳೆ, ಹನಮಂತ ಹಾಲಗೇರಿ, ಮಿರ್ಜಾ ಬಶೀರ್, ಗವಿಸಿದ್ದ ಹೊಸಮನಿ ಟಿ . ಎಸ್ ಗೊರವರ, ಕಲ್ಲೇಶ ಕುಂಬಾರ, ಬಸವರಾಜ ಹೂಗಾರ, ಚನ್ನಪ್ಪ ಅಂಗಡಿ, ಮೇಧೂರ ತೇಜ, ಲಕ್ಷ್ಮಣ ಬದಾಮಿ, ಡಾ ಎಸ್ ಬಿ ಜೋಗುರು, ಅರುಣ ಜೋಳದಕೂಡ್ಲಗಿ, ವಿಶಾಲಾಕ್ಷಿ ಅಕ್ಕಿ, ಉಮೇಶ ತಿಮ್ಮಾಪುರ, ಹುಲಿಕಟ್ಟಿ ಚನ್ನಬಸಪ್ಪ, ಎ. ಎಸ್. ಮಕಾನದಾರ, ಹು ಬಾ ವಡ್ಡಟ್ಟಿ ಪಾಲ್ಗೊಳ್ಳುವರು . ಈ ಸಂವಾದಗೋಷ್ಟಿಯನ್ನು ಮಲ್ಲಿಕಾರ್ಜುನಗೌಡ ತೂಲಹಳ್ಳಿ ಮಾಡಲಿದ್ದಾರೆ
ಸದಾ ನಮ್ಮೊಂದಿಗಿರುವ ಅನೇಕ ಗೆಳೆಯರು ಅಂದು ಜತೆಗಿರುವರು. ನೀವೂ ಬನ್ನಿ…. ಪುಸ್ತಕಲೋಕದ ಪಯಣದಲ್ಲಿ ಜತೆಯಾಗಿ
ಬನ್ನಿ ಗೆಳೆಯರೊಂದಿಗೆ
ಬಸೂ
ಪ್ರಕಾಶಕರು
Please follow and like us:
error