ವಚನಗಳಲ್ಲಿ ಶ್ರೇಷ್ಠ ತತ್ವಜ್ಞಾನವಿದೆ-ಸಿದ್ಧರಾಮ ಶರಣರು ಬೇಲ್ದಾಳ.

ವಚನಗಳಲ್ಲಿ ಬದುಕಿಗೆ ಬೇಕಾದ ಶ್ರೇಷ್ಠ ತತ್ವಜ್ಞಾನವಿದೆ ಎಂದು ಬಸವ ಕಲ್ಯಾಣದ ಬಸವ ಮಹಾಮನೆ ಸಂಸ್ಥೆಯ ಅಧ್ಯಕ್ಷರಾದ  ಸಿದ್ಧರಾಮ ಶರಣರು ಬೇಲ್ದಾಳ ಇವರು ಹೇಳಿದರು. ನಗರದ ಕಿನ್ನಾಳ ರಸ್ತೆಯಲ್ಲಿರುವ ಗುರುಬಸವ ಮಹಾಮನೆಯಲ್ಲಿ ಜರುಗಿದ ಬಸವ ದರ್ಶನ ಪ್ರವಚನ ಮುಕ್ತಾಯ ಸಮಾರಂಭ ಮತ್ತು ೬೫ನೇ ಶರಣ ಹುಣ್ಣಿಮೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅವರು ಮೇಲಿನಂತೆ ಹೇಳಿದರು. ಮುಂದುವರಿದು ಮಾತನಾಡಿದ ಅವರು ವ್ಯಕ್ತಿ ತತ್ವಕ್ಕೆ ಬದ್ಧನಾಗಿರುವುದೇ ವ್ಯಕ್ತಿತ್ವ, ಅಂತಹ ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾದ ತತ್ವಜ್ಞಾನ ವಚನಸಾಹಿತ್ಯದಲ್ಲಿದೆ. ಅದನ್ನು ನಾವು ಅಳವಡಿಸಿಕೊಂಡು ಜಗತ್ತಿಗೆ ಮುಟ್ಟಿಸುವ ಕಾರ್ಯ ನಮ್ಮ ಮೇಲಿದೆ ಎಂದರು. ಅಂದು ೧೨ನೇ
ಶತಮಾನದಲ್ಲಿ ಶ್ರೇಷ್ಠ ತತ್ವಜ್ಞಾನವನ್ನು, ಕಾಯಕ-ದಾಸೋಹ ಮತ್ತು ಸಮಾನತೆ ಅಂಶಗಳನ್ನು
ಒಪ್ಪಿಕೊಂಡು ದೇಶ-ವಿದೇಶಗಳಿಂದ ಜನರು ತಂಡೋಪ ತಂಡವಾಗಿ ಬಸವ ಕಲ್ಯಾಣ ಕ್ಕೆ
ಬರುತ್ತಿದ್ದರು. ಈಗಲೂ ಸಹ ಲಂಡನ್ನಿನಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆಯಾಗಿದೆ.
ಅದಕ್ಕೆ ಕಾರಣ ಬಸವಣ್ಣನವರ ವಿಶ್ವ ಸಹೋದರತ್ವ. ಜಗತ್ತು ಸಮಾನತೆ ಬಗ್ಗೆ ಚರ್ಚೆಯೆ
ಪ್ರಾರಂಭಿಸಿರಲಿಲ್ಲದ ಕಾಲದಲ್ಲಿ ಬಸವಣ್ಣನವರ ಮಹಾಮನೆಯಲ್ಲಿ ಸರ್ವರಿಗೂ ಸ್ವಾತಂತ್ರ
ಲಭಿಸಿತ್ತು. ಆ ಕಾರಣದಿಂದ ಮಹಾನ್ ಸಾಧಕರು ಎಲ್ಲರೂ ಒಂದೆಡೆ ಸೇರಿ ‘ಅನುಭಾವ’ ಮಾಡಲು
‘ಅನುಭವ ಮಂಟಪ’ ನಿರ್ಮಾಣವಾಗಿತ್ತು. ವಚನಗಳನ್ನು ಜನರಿಗೆ ತಲುಪಿಸಲು, ಬಸವತತ್ವ ಪಸರಿಸಲು
ಗುರುಬಸವ ಮಹಾಮನೆ ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟ್ ಕಾರ್ಯ ಮಾಡುತ್ತಿರುವುದು
ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಡಾ.ಬಸಯ್ಯ ಸಸಿಮಠ, ಶರಣಯ್ಯ ಪುರಾಣಿಕಮಠ, ಪಂಪಾಪತಿ ಹೊನ್ನಳ್ಳಿ ನಿಂಗಪ್ಪ ಹಂದ್ರಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಭಣ್ಣ ಡೊಳ್ಳಿನ, ಬಸವರಾಜ ಪಾಟೀಲ್, ದೇವಪ್ಪ ಅರಕೇರಿ, ಕೊಟ್ರಪ್ಪ ಶೇಡದ, ಗವಿಸಿದ್ದಪ್ಪ ಪಲ್ಲೇದ, ಮಂಜುನಾಥ ಹಾದಿಮನಿ ಇನ್ನೂ ಮುಂತಾದವರು ಭಾಗವಹಿಸಿದ್ದರು. ಹನುಮೇಶ ಕಲ್ಮಂಗಿ ನಿರೂಪಿಸಿದರು, ಶಿವುಕುಮಾರ ಕುಕನೂರ ಸ್ವಾಗತಿಸಿದರು, ರಾಜೇಶ ಸಸಿಮಠ ವಂದಿಸಿದರು.

Please follow and like us:
error