ಬಿಜೆಪಿ ಗೆಲುವಿಗೆ ಕಾರ್ಯಕರ್ತರ ಸಮರ್ಪಣಾ ಭಾವದ ಸೇವೆಯೇ ಮೂಲಾದಾರ – ಸಂಗಣ್ಣ ಕರಡಿ

 ರಾಜ್ಯದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಕೋಟಿ ಕೋಟಿ ಸುರಿದು ಮತ ಯಾಚಿಸಿದರೆ, ನರೇಂದ್ರ ಮೋದಿಯನ್ನು ಪ್ರಾಧಾನಿ ಪಟ್ಟಕ್ಕೇರಿಸಲು ಬಿಜೆಪಿ ಕಾರ್ಯಕರ್ತರು ನಿಸ್ವಾರ್ಥದಿಂದ ಕೆಲಸ ಮಾಡಿದ್ದಾರೆ ಎಂದು ಅಭ್ಯರ್ಥಿ ಸಂಗಣ್ಣ ಕರಡಿ ಶ್ಲಾಘಿಸಿದರು.
ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಕೊಪ್ಪಳ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತ

ರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಜನರಿಗೆ ತಲುಪಿಸಿದ ಚಾಯ್ ಪೇ ಚರ್ಚಾ, ಮನೆ ಮನೆಗೆ ಬಿಜೆಪಿ ಸೇರಿ ವಿವಿಧ ಕಾರ್ಯಕ್ರಮದಿಂದ ಮತದಾರರು ಮೋದಿ ಸಾಧನೆ ತಿಳಿಯುವಂತಾಯಿತು. ಅಲ್ಲದೇ, ಮುಖಂಡರು ಮತ್ತು ಕಾರ್ಯಕರ್ತರು ಯಾವುದೇ ಪ್ರತಿಫಲ ನಿರೀಕ್ಷಿಸದೇ ಬೂತ್ ಮಟ್ಟದಿಂದ ಮಾಡಿದ ಕೆಲಸದಿಂದ ಕೊಪ್ಪಳ ಸೇರಿ ರಾಜ್ಯದಲ್ಲಿ ೧೯ ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯ ಎತ್ತಿ ತೋರಿಸುವಲ್ಲಿ ರಾಷ್ಟ್ರೀಯ ನಾಯಕರು ಯಶಸ್ವಿಯಾದರು. ಈ ಹಿನ್ನೆಲೆಯಲ್ಲಿ ಮತದಾರರು ಬಿಜೆಪಿಗೆ ನಿರೀಕ್ಷೆಗೂ ಮೀರಿ ಒಲವು ತೋರಿದ್ದಾರೆ. ಇದರಿಂದ ನನ್ನ ಗೆಲುವು ಖಚಿತವಾಗಿದ್ದು, ಕಾರ್ಯಕರ್ತರು ಮತ್ತು ನಾಯಕರ ಋಣ ತೀರಿಸುವುದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸ್ವ ಕ್ಷೇತ್ರ ಕನಕಗಿರಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು ಎಂದು ಬಿಜೆಪಿ ಮುಖಂಡ ಮುಕುಂದರಾವ್ ಭವಾನಿಮಠ ಹೇಳಿದರು
ಕನಕಗಿರಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಈ ಭಾರಿಯ ಲೋಕಸಭಾ ಚುನಾವಣೆಯನ್ನು  ಸಂಕಷ್ಟದಲ್ಲಿ ಎದುರಿಸಿದ್ದಾರೆ. ಕೆಲ ಕಾಂಗ್ರೆಸ್ ಗುಂಡಾಗಳು ಮತ್ತು ಕಾಂಗ್ರೆಸ್ ಏಜಂಟರಂತೆ ವರ್ತಿಸಿದ ಪೊಲೀಸರಿಂದ ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲಘಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಕಾಂಗ್ರೆಸ್ ಮುಖಂಡರು ಮದ್ಯಪಾನ ಸಂಗ್ರಹಿಸಿದ್ದರ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ಕಾರ್ಯಕರ್ತರ ಮೇಲೆಯೇ ಹುಲಿಹೈದರದಲ್ಲಿ ಹಲ್ಲೆ ನಡೆಸಲಾಯಿತು. ಹಲ್ಲೆ ವೇಳೆ ಸಿಎಂ ಸಿದ್ದರಾಮಯ್ಯನವರೇ ಮದ್ಯ ಹಂಚಲು ಹೇಳಿದ್ದಾರೆ ಎಂದು ಕಾರ್ಯಕರ್ತರು ಸಮರ್ಥಿಸಿಕೊಂಡರು. ಇದರ ವಿರುದ್ಧ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರ ಮೇಲೆಯೇ ಪೊಲೀಸರು ಲಾಟಿ ಚಾರ್ಜ್‌ಗೆ ಮುಂದಾಗಿದ್ದುಘಿ ವಿಷಾಧನಿಯ. ಆಗ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಕನಕಗಿರಿಗೆ ಆಗಮಿಸಿ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಿದರು ಎಂದರು. ಈ ಮೊದಲು ೨ ಲಕ್ಷ ಅಂತದಲ್ಲಿ ಗೆಲುವುದಾಗಿ ಹೇಳುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಸವರಾಜ ಹಿಟ್ನಾಳ ನಂತರ ೫೦ ಸಾವಿರ ಎಂದಿದ್ದರು. ಈಗ ೨ ಸಾವಿರ ಮತದಿಂದ ಕಾಂಗ್ರೆಸ್ ಗೆಲುವುದಾಗಿ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಆದರೆ, ೮ ಕ್ಷೇತ್ರದಲ್ಲಿ ಬಿಜೆಪಿಗೆ ಮತದಾರರು ಹೆಚ್ಚಿನ ಒಲವು ತೋರಿಸಿದ್ದುಘಿ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಎಂಎಲ್ಸಿ ಹಾಲಪ್ಪ ಆಚಾರಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ೮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಹೆಚ್ಚು ಶ್ರಮಿಸಿದ್ದಾರೆ. ಇದರಿಂದ ಬಿಜೆಪಿ ಗೆಲವು ಖಚಿತವಾಗಿದೆ. ಕಾರ್ಯಕರ್ತರ ಶ್ರಮ ಹೆಚ್ಚಾಗಿದ್ದುಘಿ, ಚುನಾವಣೆ ನಂತರ ಕಾರ್ಯಕರ್ತರನ್ನು ಮೆರೆಯಬಾರದು ಇದರಿಂದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. 
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ನಾಗರಾಜ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪಘಿ, ಶಾಸಕ ದೊಡ್ಡನಗೌಡ ಪಾಟೀಲ್, ಮುಖಂಡರಾದ ಬಸನಗೌಡ ಬ್ಯಾಗವಾಟ, ಸೋಮಲಿಂಗಪ್ಪ ಶಿರಗುಪ್ಪಘಿ, ರಾಜಶೇಖರ್ ಸಿಂದನೂರ, ನಾರಾಯಣ್ಣಪ್ಪಘಿ, ವಿರುಪಾಕ್ಷಪ್ಪ ಅಗಡಿ, ಶೇಷಗಿರಿರಾವ್ ಕೊಲ್ಲಿಘಿ, ಮುಕುಂದರಾವ್ ಭವಾನಿಮಠ, ಸಿದ್ರಾಮಸ್ವಾಮಿ ಆನೆಗುಂದಿ, ಮಂಜುನಾಥ ಪಾಟೀಲ, ಎಚ್.ಆರ್.ಚನ್ನಕೇಶವ್, ಸಂಗಪ್ಪ ವಕ್ಕಳದ, ಬಸವರಾಜ ದಡೇಸೂಗರ, ತಿಪ್ಪೇರುದ್ರಸ್ವಾಮಿ, ಎಚ್.ಗಿರೇಗೌಡ, ಚಂದ್ರಶೇಖರ್ ಕವಲೂರು, ಅಪ್ಪಣ್ಣ ಪದಕಿ, ರಾಜು ಬಾಕಳೆ, ನರಸಿಂಗರಾವ್ ಕುಲಕರ್ಣಿ, ಪರಮಾನಂದ ಯಾಳಗಿ, ಸಿದ್ದರಾಮಯ್ಯ ಸ್ವಾಮಿ, ವಿರುಪಾಕ್ಷಪ್ಪ ಸಿಂಗನಾಳ ಇತರರು ಇದ್ದರು.
Please follow and like us:
error