ಗಣೇಶನ ಮುಂದೆ ಜನರನ್ನು ಆಕರ್ಷಸುತ್ತಿರುವ ವಾಮನ ವಿದೂಷಕ.

ಕೊಪ್ಪಳ,ಸೆ,೨೧  ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಳೆದ ಮೂರುದಿನಗಳ ಹಿಂದೆ ಗಣೇಶ ಚತುರ್ಥಿಯ ಅಂಗವಾಗಿ ನಗರದ ಶ್ರೀವಿನಾಯಕ ಮಿತ್ರ ಮಂಡಳಿ, ಕೋಟೆ ರಸ್ತ ಕೊಪ್ಪಳವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶನ ಮೂರ್ತಿಮುಂದೆ ವಾಮನ ವಿದೂಷಕ ವ್ಯಕ್ತಿಯೊಬ್ಬ ಜನರ ಆಕರ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ.
   ಈ ವಾಮನ ವಿದೂಷಕ ವ್ಯಕ್ತಿ ಕಲಬುರ್ಗಿಯ ಗುರುಸಿದ್ದಯ್ಯ ಹಿರೇಮಠ(೬೫)ವರ್ಷದ ಗಿಡ್ಡ ಮನುಷ್ಯನಾಗಿದ್ದು ಮುಖವಾಡ ಧರಿಸಿಕೊಂಡು ಎಲ್ಲರನ್ನು ಗಣೇಶನಮುಂದೆ ಬರುವಂತೆ ಆಕರ್ಷಣೆ ಮಾಡಿ ಜನಮ

ನ ರಂಜಿಸುತ್ತಿದ್ದಾನೆ ಈ ವ್ಯಕ್ತಿ ಕಳೆದ ೨೦ ವರ್ಷಗಳಿಂದ ಪ್ರತಿವರ್ಷ ಗಣೇಶ ಚತುರ್ಥಿಯಂದು ಕೊಪ್ಪಳಕ್ಕೆ ಆಗಮಿಸಿ ಶ್ರೀ ವಿನಾಯಕ ಮಿತ್ರಮಂಡಳಿಯವರು ಪ್ರತಿಷ್ಠಾಪಿಸುವ ಗಣೇಶನ ಮೂರ್ತಿ ಮುಂದೆ ಮುಖವಾಡ ಧರಿಸಿಕೊಂಡು ಜನರನ್ನು ಆಕರ್ಷಿಸುವ ಕೆಲಸ ಮಾಡುತ್ತಾ ಬಂದಿದ್ದಾನೆ. ಕೊಪ್ಪಳದ ಜನರು ತಂಡೋಪ ತಂಡವಾಗಿ ಭೇಟಿ ನೀಡಿ ತಮ್ಮ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ ಹಾಗೂ ಶ್ರೀ ವಿನಾಯಕ ಮಿತ್ರ ಮಂಡಳಿ ಕೋಟೆ ರಸ್ತೆ ಯವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Please follow and like us:
error