ಗಿಣಿಗೇರಿಯಲ್ಲಿ ನಾಲ್ವರು ಆರೋಪಿಗಳಿಂದ ಎರಡು ಬೈಕ್ ಮತ್ತು ಕಬ್ಬಿಣದ ಸ್ಕ್ರ್ಯಾಪ್ ವಶ

  ಕೊಪ್ಪಳ ತಾಲೂಕಿನ ಗಿಣಗೇರಿಯಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಅಕ್ರಮವಾಗಿ ಇರಿಸಿಕೊಂಡಿದ್ದ ಅಂದಾಜು ೩೫೦೦೦ ರೂ. ಬೆಲೆ ಬಾಳುವ ಕಬ್ಬಿಣದ ಸ್ಕ್ರ್ಯಾಪ್ ಹಾಗೂ ಎರಡು ಮೋಟಾರ್‌ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
  ಕೊಪ್ಪಳ ಗ್ರಾಮೀಣ ಠಾಣೆಯ ಪಿ.ಎಸ್.ಐ. ಮಹಾಂತೇಶ ಸಜ್ಜನ್ ಹಾಗೂ ಸಿಬ್ಬಂದಿ ತಿಪ್ಪೆಸ್ವಾಮಿ ಎ.ಎಸ್.ಐ., ರಾಜಮಹ್ಮದ್, ಪರಶುರಾಮ, ಶಿವಪ್ಪ ಮಡಿವಾಳ ಪೊಲೀಸರು ಕಳೆದ ಫೆ. ೨೨ ರಂದು ರಾತ್ರಿ ಗಸ್ತು ಚಕಿಂಗ್ ಕರ್ತವ್ಯದಲ್ಲಿದ್ದಾಗ ಗಿಣಿಗೇರಾ ಗ್ರಾಮದ ಹಿರೇಬಗನಾಳ ಕ್ರಾಸ್ ಬಳಿ ಸಂಶಯಾಸ್ಪದವಾಗಿ ಕಬ್ಬಿಣದ ಸ್ಕ್ರ್ಯಾಪ್ ತುಂಡುಗಳನ್ನು ಇರಿಸಿಕೊಂಡಿದ್ದ ನಾಲ್ಕು ಆರೋಪಿಗಳನ್ನು ಬಂಧಿಸಿ ಅವರಲ್ಲಿದ್ದ ೩೫೦೦೦ ಅಂದಾಜು ಬೆಲೆಯ ಕಬ್ಬಿಣದ ಸ್ಸ್ರ್ಯಾಪ್ ತುಂಡುಗಳು ಹಾಗೂ ೦೧ ಬಜಾಜ್ ಡಿಸ್ಕವರ್ ಬೈಕ್ (ಕೆ.ಎ. ೩೭ಎಸ್-೬೭೬೩) ಮತ್ತು ೦೧ ಸುಜುಕಿ ಪೆರೋ ಬೈಕ್ (ಕೆ.ಎ. ೦೧ ವಿ-೧೭೧೭) ವಶಪಡಿಸಿಕೊಳ್ಳಲಾಗಿದೆ.  ಬಂಧಿತರನ್ನು ಗಿಣಗೇರಿ ಗ್ರಾಮದ ಶೇಖಪ್ಪ ತಂದೆ ಮಲ್ಲಪ್ಪ ಕೋಲ್ಕಾರ, ರವಿ ತಾಯಿ ಮಜ್ರಮ್ಮ ಹುಲ್ಲಪ್ಪನವರ್, ಶಾಂತಕುಮಾರ ತಾಯಿ ಸುಂಕ್ಲೆಮ್ಮ ಅಳ್ಳಮ್ಮನವರ್, ಯಮನೂರ ತಂದೆ ಯಂಕಪ್ಪ ದಾಸರ್ ಎಂದು ಗುರುತಿಸಲಾಗಿದೆ.  ಜಿಲ್ಲಾ ಎಸ್.ಪಿ ಹಾಗೂ ಡಿವೈಎಸ್‌ಪಿ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಈ ದಾಳಿ ನಡೆಸಲಾಗಿತ್ತು.  ಪೊಲೀಸರಿಂದ ವಶಪಡಿಸಿಕೊಳ್ಳಲಾಗಿರುವ ಇಂತಹ ಯಾವುದೇ ವಸ್ತುಗಳು, ಬೈಕ್‌ಗಳು ಇತ್ಯಾದಿ ಕಳುವಾಗಿರುವ ಬಗ್ಗೆ ಯಾವುದಾದರೂ ದೂರು ಅಥವಾ ಇತರೆ ರೀತಿಯ ಮಾಹಿತಿ ಇದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ. ೦೮೫೩೯-೨೨೧೩೩೩, ಮೊ.೯೪೮೦೮೦೩೭೪೬ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.
Please follow and like us:
error

Related posts

Leave a Comment