ಇಂದು ವಿಜ್ಞಾನ & ಗಣಿತ ವಸ್ತು ಪ್ರದರ್ಶನ ಉದ್ಘಾಟನೆ.

ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆಯ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ ವಿಜ್ಞಾನ & ಗಣಿತ ವಸ್ತು ಪ್ರದರ್ಶನವನ್ನು ಮುಂಜಾನೆ ಕೆ.ರಾಘವೇಂದ್ರ ಆಚಾರರು ನಿವೃತ್ತ ಪ್ರಾಣಿಶಾಸ್ತ್ರ ಉಪನ್ಯಾಸಕರು, ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನೆಯ ಭಾಷಣದಲ್ಲಿ ವಿವಿಧ ಮಾದರಿಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಶಾಲೆಯ
ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಮಾರ್ಗದರ್ಶನ ನೀಡಿದರೆ ರಾಜ್ಯ &
ರಾಷ್ಟ್ರಮಟ್ಟದಲ್ಲೂ ಪ್ರತಿಭೆಯನ್ನು ತೋರಿಸುತ್ತಾರೆಂದು ಮಾತನಾಡಿದರು.  ಜೊತೆಗೆ ಆಡಳಿತ
ಮಂಡಳಿಯ ಅಧ್ಯಕ್ಷರಾದ ಟಿ. ಜಿ. ಹಿರೇಮಠ  & ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ
ಗವಿಸಿದ್ಧಪ್ಪ ವಿ.ಕೊಪ್ಪಳರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Please follow and like us:
error