ಅಂತರಾಷ್ಟ್ರೀಯ ಸಾಕ್ಷರತಾ ಸಪ್ತಾಹ ದಿನಾಚರಣೆಯ ಅಂಗವಾಗಿ ಚರ್ಚಾ ಕೂಟ

 ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ಸಪ್ತಾಹ ದಿನಾಚರಣೆ ಅಂಗವಾಗಿ ದೇಶದ ಪ್ರಗತಿಯಲ್ಲಿ ಸಾಕ್ಷರತೆಯ ಪಾತ್ರ ವಿಷಯದ ಕುರಿತು ಚರ್ಚಾ ಕೂಟವನ್ನು ಏರ್ಪಡಿಸಲಾಗಿತ್ತು. 
ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ಚರ್ಚಾ ಕೂಟದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪ್ರಥಮ ಸ್ಥಾನವನ್ನು ನಿಂಗಪ್ಪ ಎಂ. ದೊಡ್ಡಮನಿ, ದ್ವಿತೀಯ ಸ್ಥಾನವನ್ನು ಕಳಕಪ್ಪ ಬೆಟಗೇರಿ ಹಾಗೂ ತೃತೀಯ ಸ್ಥಾನವನ್ನ ಶಿವಪ್ಪ ಕುರಿಯವರು ಪಡೆದರು.
 ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಸವರಾಜ್ ಹನಸಿ, ಉಪನ್ಯಾಸಕರಾದ ಶ್ರೀಮತಿ ಉಷಾದೇವಿ ಹಿರೇಮಠ,   ಬಸವರಾಜ್ ಎಸ್.ಎಂ. ಡಾ. ಎನ್. ಮುದ್ದುರಾಜ್,   ಬಸವರಾಜ್ ಅಳ್ಳಳ್ಳಿ, ಸೇರಿದಂತೆ ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Please follow and like us:
error