
ನಾವು ೧೯೫೬ ರಿಂದ ಸರಕಾರಿ ನೌಕರಿ ಪಡೆಯುವಲ್ಲಿ ಹಾಗೂ ಶಿಕ್ಷಣ ಪಡೆಯುವಲ್ಲಿ ಅವಕಾಶದಿಂದ ವಂಚಿತರಾದೆವು. ಈಗಲೂ ಕೂಡ ಎಚ್ಚೆತ್ತ ಹೊರಗಿನವರು ಹೈ.ಕ. ಜಿಲ್ಲೆಗಳಲ್ಲಿ ನುಸಳಿಕೊಂಡು ಮತ್ತೆ ಹೆಸರು ನೋಂದಣಿ ಮಾಡಿಸಿಕೊಂಡು ಶಿಕ್ಷಣದಲ್ಲಿ, ನೌಕರದಲ್ಲಿ ಮೀಸಲಾತಿ ಪಡೆಯಲು ಹುನ್ನಾರ ನಡೆಸಿದ್ದಾರೆ. ಆದ್ದರಿಂದ ಹೈ.ಕ. ಜಿಲ್ಲೆಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಯುವಕರು ಜಾಗೃತರಾಗಿದ್ದು, ಮತ್ತೊಮ್ಮೆ ಅವಕಾಶ ವಂಚಿತರಾಗಬಾರದು. ಇತರೆ ಸಂಘಟನೆಗಳು ಈ ಕುರಿತು ಜಾಗೃತಿ ಮೂಡಿಸಲಿ ಎಂದು ಹೈ.ಕ. ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಸ್. ಎಸ್. ಪಾಟೀಲ್ ಹಾಗೂ ಕಾರ್ಯದರ್ಶಿ ಅಲ್ಲಮಪ್ರಭು ಬೆಟ್ಟದೂರು ಅವರು ಹೈ.ಕ. ಹೋರಾಟ ಸಮಿತಿ ಪರವಾಗಿ ಮನವಿ ಮಾಡಿದ್ದಾರೆ.
Please follow and like us: