ನವ ತಂತ್ರಜ್ಞರಿಗೆ ವೃತ್ತಿ ತರಬೇತಿ ಕಾರ್ಯಕ್ರಮ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿ/ನಿ ಇಂಜಿನಿಯರುಗಳಿಗೆ ಈ ಅವಕಾಶ ಉಪಯೋಗಿಸಿಕೊಳ್ಳಲು ರಾಮನ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಹಾಗೂ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಸಹ ಭಾಗಿತ್ವದೊಂದಿಗೆ ಒಂದು ವಿನೂತನ ವೃತ್ತಿ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ರೂಪಿಸಿದ್ದು ಆ ಯೋಜನೆಯನ್ನು ಇದೀಗ ಕಾರ್ಯರೂಪಕ್ಕೆ ತರುತ್ತಿದೆ.
ಅನೇಕ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೂಕ್ತ ತರಬೇತಿ, ಮಾರ್ಗದರ್ಶನ ಕೊರತೆ ಎದುರಿಸುತ್ತಿದ್ದು ಅದೇ ವೇಳೆ ಉದ್ದಿಮೆಗಳು ಸೂಕ್ತ ಕೌಶಲ್ಯ ಹೊಂದಿದ ವ್ಯಕ್ತಿಗಳ ಕೊರತೆ ಎದುರಿಸುತ್ತಿದೆ. ಈ ಎರಡೂ ವಿಭಿನ್ನ ಪಾತಳಿಗಳ ನಡುವೆ ಸೇತುವೆ ರೂಪಿಸಿರುವ ರಾಮನ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ಈ ಯೋಜನೆಯ ಮೂಲಕ ಇಂಜಿನಿಯರಿಂಗ್ ಪದವೀಧರರಾಗುತ್ತಿರುವವರಿಗೆ ಉದ್ದಿಮೆಗೆ ಅಗತ್ಯವಾದ ತರಬೇತಿ ನೀಡಿ ಉದ್ದಿಮೆ ಹಾಗೂ ಮಾನವ ಸಂಪನ್ಮೂಲಗಳೆರಡಕ್ಕೂ ಸೂಕ್ತ ಸದಾವಕಾಶ ಒದಗಿಸಲಿದೆ.
ಪ್ರಸ್ತುತ ವಿಶ್ವದ ಆರ್ಥಿಕ ಹಿನ್ನಡೆ ಯಿಂದಾಗಿ ಇಂಜಿನಿಯರುಗಳಿಗೆ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಲ್ಲಿ ತೀವ್ರತೊಂದರೆ ಎದುರಾಗಿದೆ. ಕೈಗಾರಿಕೆಗಳು ಉದ್ಯೋಗದ ಮೊದಲದಿನದಿಂದಲೇ ಕೌಶಲ ಹೊಂದಿದ ಅಭ್ಯರ್ಥಿಗಳನ್ನೇ ಹೊಂದಲು ಬಯಸುತ್ತಿದ್ದು ಹೊಸಬರಿಗೆ ಅವಕಾಶಗಳ ಕೊರತೆ ಎದ್ದು ಕಾಣುತ್ತಿದೆ. ವಿಶೇಷವಾಗಿ ಎರಡು ಮತ್ತು ಮೂರನೇಹಂತದ ನಗರ ಪ್ರದೇಶಗಳಲ್ಲಿ ಹೊಸ ಇಂಜಿನಿಯರಿಂಗ್ ಪದವೀಧರರಿಗೆ ಅವಕಾಶಗಳೇ ಇಲ್ಲವಾಗಿದೆ. ತಜ್ಞರ ಅಭಿಪ್ರಾಯದಂತೆ ನೇರ ಕಾರ್ಪೊರೇಟ್ ಪರಿಸರದಲ್ಲಿ ಇಂಟರ್ನ್‌ಶಿಪ್ ನೀಡುವುದರಿಂದ ಕೇವಲ ಕೌಶಲವೇ ಅಲ್ಲದೇ ಕಾರ್ಪೊರೇಟ್ ಸಂಸ್ಕೃತಿ, ಉದ್ದಿಮೆಯ ಅನುಭವ ಲಭಿಸಬಹುದಾಗಿದೆ. ಸೂಕ್ತ ಸಮಯದಲ್ಲಿ ಅಭ್ಯರ್ಥಿಗಳನ್ನು ಒದಗಿಸುವುದಾದಲ್ಲಿ ಉದ್ದಿಮೆಯು ಅವರ ಪ್ರಾಡಕ್ಟ್ ಗಳನ್ನು ಅವರ ಕಲಿಯುವ ಸಂದರ್ಭದಲ್ಲೇ ಶಿಕ್ಷಣಕ್ಷೇತ್ರದಲ್ಲೇ ಒಳಗೊಳ್ಳಲು ತಯಾರಿದೆ. ಈ ಬಗೆಂi ಇಂಟರ್ನ್‌ಶಿಪ್‌ನಿಂದಾಗಿ ನವ ಪದವೀಧರರಿಗೆ ಉದ್ದಿಮೆಯ ಬಾಗಿಲು ತೆರೆಯಲಿದೆ.
ವಿಭಿನ್ನ ಪರಿಸರ ಮತ್ತು ಹಂತಗಳಲ್ಲಿಅವರಿಗೆ ಪ್ರಾಥಮಿಕ ಕೌಶಲಗಳನ್ನು ನೀಡಲು ಕಾಲೇಜುಗಳು ತುಡಿಯುತ್ತಿದ್ದರೂ ಉದ್ದಿಮೆಯು ಅನುಭವವನ್ನು ಬಯಸುತ್ತದೆ. ಉತ್ತಮ ಅಂಕ ಗಳಿಸಿರುವ ಅಭ್ಯರ್ಥಿಗಳು ಕೂಡಾ ಈ ಬಗೆಯ ಅನುಭವದ ಕೊರತೆಎದುರಿಸುತ್ತಿದ್ದಾರೆ.ಹಾಗಾಗಿ ಉದ್ದಿಮೆಗೆ ಅವರನ್ನು ತಯಾರಾಗಿಸುವುದು ಅತಿ ಅಗತ್ಯ.
ಹೊಸಬರಿಗೆ ಅವಕಾಶನೀಡಲು ಉದ್ದಿಮೆಗಿರುವ ಸವಾಲುಗಳು:
ಮಾರುಕಟ್ಟೆಯು ವ್ಯತ್ಯಸ್ತವಾಗಿರುವ ವ್ರಸ್ತುತ ಸಂದರ್ಭದಲ್ಲಿ ಕೈಗಾರಿಕೆಗಳು ಸೂಕ್ತಸಮಯದಲ್ಲಿ ಅಭ್ಯರ್ಥಿಗಳನ್ನು ಪಡೆಯುವಲ್ಲಿ ಕೆಳಕಂಡ ಯೋಚನೆ ಅನುಸರಿಸುತಿದೆ.
ಅಭ್ಯರ್ಥಿಗಳ ಉದ್ಯೋಗ ತರಬೇತಿಯ ಸಮಯ ಮತ್ತು  ವೆಚ್ಚದಲ್ಲಿ ಉಳಿತಾಯ
ತರಬೇತಿಗೆ ವ್ಯಯಿಸುವ ಇತರ ಖರ್ಚುಗಳ ಉಳಿತಾಯ
ಮೂಲಭೂತ ತರಬೇತಿಯ ಸಮಯ ಉಳಿತಾಯ
ಕಾರ್ಪೊರೇಟ್ ಅನುಭವದ , ಕೌಶಲ ಹೊಂದಿದ ಅಭ್ಯರ್ಥಿಗಳು
ಅನುಭವೀ ನವ ಪದವೀಧರ 
ಅತಿ ಕಡಿಮೆ ತರಬೇತಿ ನೀಡಿ ಹೆಚ್ಚುಕೌಶಲ ಬಯಸುವುದು
ಈ ಹಿನ್ನೆಲೆಯಲ್ಲಿ ಕೈಗಾರಿಕೆ ಮತ್ತು ಪದವೀಧರರಿಬ್ಬರಿಗೂ ಅನುಕೂಲವಾಗುವಂತೆ ಈ ಇಂಟರ್ನ್‌ಶಿಪ್ ರೂಪಿಸಲಾಗಿದೆ. ಇದರಿಂದಾಗಿ ಕೈಗಾರಿಕೆಗಳಿಗೆ ಕೋಶಾವಸ್ಥೆಯಲ್ಲೇ ತಮಗೆ ಬೇಕಾದಂತೆ ಅಭ್ಯರ್ಥಿಗಳನ್ನು ರೂಪಿಸಲು ಸಾಧ್ಯವಿದ್ದು ಅಭ್ಯರ್ಥಿಗಳಿಗೆ ಅಗತ್ಯವಾದ ಆತ್ಮವಿಶ್ವಾಸ, ವೃತ್ತಿಪರತೆಗಳಿಂದ ಅವg ಸಮಗ್ರ ವ್ಯಕ್ತಿತ್ವದಲ್ಲೇ ಬದಲಾವಣೆ ತರಬಹುದಾಗಿದೆ.
ಆರ್ ಐ ಐ ಟಿಯು ೨೦೧೩ರಲ್ಲಿ ಅನೇಕ ಕಂಪನಿಗಳೊಡನೆ ಎಂ ಒ ಯು ಹೊಂದಿದ್ದು  ಅಭ್ಯರ್ಥಿಗಳಿಗೆ ಇದೊಂದು ಅಪೂ ಅವಕಾಶವಾಗಿದೆ.ನೂತನ ಪದವೀಧರರಿಗೆ ಈ ಅವಕಾಶದಿಂದಾಗಿ ಉದ್ಯಮದ ಹೆಬ್ಬಾಗಿಲು ತೆರೆಯಲಿದ್ದು ಅವರಿಗೆ ಕ್ರಿಯಾತ್ಮಕ ಪರಿಸರದಲ್ಲಿ ತರಬೇತಿ ನೀಡಲಾಗುತ್ತದೆ.
ಈ ಯೋಜನೆಯು ಇಂಜಿನಿಯರುಗಳಾಗಿ ಹೊರಬರುತ್ತಿರುವ ಪದವೀದರರಿಗೆ ವೃತ್ತಿ ಕೌಶಲ ಒದಗಿಸಲಿದ್ದು ಅವರನ್ನು ನೇರ ಕಾರ್ಯಕ್ಷೇತ್ರದಲ್ಲಿ ಉತ್ಪಾದಕ ವ್ಯಕ್ತಿಗಳಾಗಿ ರೂಪಿಸಲಿದೆ. ಇದರಿಂದಾಗಿ ಉದ್ದಿಮೆಗಳಿಗೆ ತರಬೇತಾದ ಅಭ್ಯರ್ಥಿಗಳೇ ದೊರಕಲಿದ್ದು ಉದ್ದಿಮೆಗೆ ಅಗತ್ಯವಾದ ಕೌಶಲ್ಯ ಅನುಭವಗಳನ್ನು ಈ ನವ ಇಂಜಿನಿಯರುಗಳಿಗೆ ರಾಮನ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ಒದಗಿಸಲಿದೆ. ಇದರಿಂದಾಗಿ ಉದ್ದಿಮೆ ಹಾಗೂ ಅಭ್ಯರ್ಥಿಗಳಿಬ್ಬರ ಸಮಯವೂ ಉಳಿತಾಯವಾಗಲಿದೆ.
ಈ ಯೋಜನೆಯಿಂದಾಗಿ ಉದ್ದಿಮೆಗಳಿಗೆ ಅಭ್ಯರ್ಥಿಗಳನ್ನು ಯೋಜಿಸುವಲ್ಲಿನ ವೆಚ್ಚ ಉಳಿತಾಯ, ತರಬೇತಿಯ ವೆಚ್ಚ, ಮಯಗಳ ಉಳಿತಾಯ, ಆಗಲಿದ್ದು ಅನುಭವ, ಕೌಶಲ್ಯಗಳಿರುವ ಅಭ್ಯರ್ಥಿಗಳೇ ದೊರಕಲಿದ್ದಾರೆ. ನವ ಪದವೀಧರರಿಗೆ ಅವರ ಜ್ಞಾನವನ್ನು ಕೌಶಲವಾಗಿ ಪರಿವರ್ತಿಸುವ ತರಬೇತಿ, ಕಾರ್ಪೊರೇಟ್ ಸಂಸ್ಕೃತಿಯ ಅನುಭವ ಯೋಜನೆ, ಸಮಯಪ್ರಜ್ಞೆ, ಮೌಲ್ಯಮಾಪನಗಳ ಎಚ್ಚರ ಕಲಿಸಿ ವೃತ್ತಿಪರ ಅವಕಾಶ ಹೆಚ್ಚಿಸಲಿದೆ.
ಇಂಜಿನಿಯರಿಂಗ್ ಪದವೀಧರರ ಇಂಟರ್ನ್‌ಶಿಪ್ :
ನವ ಪದವೀಧರರಿಗೆ ಈ ಇಂಟರ್ನ್‌ಶಿಪ್ ಹೊಸ ದಾರಿಗಳನ್ನು ತೆರೆಯಲಿದ್ದು ಅವರನ್ನು ಉದ್ದಿಮೆಗೆ ಸೂಕ್ತವಾಗಿ ತಯಾರಾಗುವಂತೆ ಅವರ ವೃತ್ತಿಪರತೆ ಹೆಚ್ಚಿಸುವ ಮೂಲಕ ಉದ್ದಿಮೆಗಳಿಗೆ ಅನುವಾಗುವಂತೆ ಈ ಯೋಜನೆ ರೂಪಿಸಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿ/ನಿ ಇಂಜಿನಿಯರುಗಳಿಗೆ ಈ ಅವಕಾಶ ಉಪಯೋಗಿಸಿಕೊಳ್ಳಲು -ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಹಾಗೂ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಸಹ ಭಾಗಿತ್ವದೊಂದಿಗೆ ರಾಮನ್ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ಕರೆ ನೀಡುತ್ತಿದೆ.
ಈ ಇಂಟರ್ನ್‌ಶಿಪ್ ೬ ತಿಂಗಳುಗಳ ಕಾಲ ಇಂಜಿನಿಯರಿಂಗ್ ಪದವೀಧರರಿಗೆ ತಂತ್ರಜ್ಞನದ ಕೌಶಲ್ಯಗಳನ್ನು ಹಾಗೂ ಎಲ್ಲ  ಕೌಶಲ್ಯಗಳ ತರಬೇತಿಗಳು ಮೈಸೂರಿನಲ್ಲಿ  ನಡೆಯಲಿದೆ. 
ತರಬೇತಿ ಮತ್ತು ಇಂಟರ್ನ್‌ಶಿಪ್ ಯೋಜನೆ: 
೨೦೧೩ ನೇ ಸಾಲಿನ ಯಾವುದೇ ಪದವೀಧದರಿಗೆ ತಂತ್ರಜ್ಙಾನ ಕೌಶಲ್ಯ, ವಿಶ್ಲೇಷಣಾತ್ಮಕ ಕೌಶಲ್ಯ, ಇಂಗ್ಲೀಷ್ ಕೌಶಲ್ಯಗಳ ತರಬೇತಿಗಳನ್ನು ಮೈಸೂರಿನಲ್ಲಿ ನಡೆಸಲಾಗುತ್ತದೆ.
ಅರ್ಹತೆ -೨೦೧೨ –  ೨೦೧೩ ನೇ ಸಾಲಿನ ಯಾವುದೇ ಪದವೀಧರರು ೧೨ ತಿಂಗಳಗಳು ಕಾಲ ತೀವ್ರ ಕೌಶಲ್ಯ ಅಭಿವೃದ್ಧಿ ಮತ್ತು ಇಂಟರ್ನ್‌ಶಿಪ್‌ಗೆ ಒಳಗಾಗಬೇಕಾಗುತ್ತದೆ.
ಆಸಕ್ತ ಅಭ್ಯರ್ಥಿಗಳು www.riiit.com ನಲ್ಲಿ ಅರ್ಜಿಗಳನ್ನು ಡೌನ್‌ಲೋಡ್ ಮಾಡಬಹುದು ಹಾಗೂ ಇತರೆ ವಿವರಗಳಿಗಾಗಿ ಮೊಬೈಲ್ ಸಂಖ್ಯೆ: ೯೫೩೫೬೧೪೩೨೩, ೭೪೧೧೯೧೦೦೬೯ ಕ್ಕೆ ಸಂಪರ್ಕಿಸಬಹುದಾಗಿದೆ.
Please follow and like us:
error