fbpx

ಆ.೨೨ ರಂದು ಜಿಲ್ಲಾ ಉತ್ಸವಕ್ಕೆ ಚಾಲನೆ.

ಕೊಪ್ಪಳ – ಜಿಲ್ಲಾ ನಾಗರಿಕರ ಸಾಂಸ್ಕೃತಿಕ ವೇದಿಕೆ, ತಿರುಳ್ಗನ್ನಡ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಕೊಪ್ಪಳ ಜಿಲ್ಲೆ ರಚನೆಯಾದ ಸವಿನೆನಪಿಗಾಗಿ ಸತತ ೯ನೇ ಬಾರಿಗೆ ಕೊಪ್ಪಳ ಜಿಲ್ಲಾ ಉತ್ಸವ ಆ.೨೨ ರಿಂದ ೨೪ ರವರೆಗೆ ನಗರದ ಸಾಹಿತ್ಯ ಭವನದಲ್ಲಿ ಜರುಗಲಿದೆ ಎಂದು ನಾಗರಿಕರ ವೇದಿಕೆ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಅವರು ತಿಳಿಸಿದ್ದಾರೆ. ಆ.೨೨ ರಂದು ಮಧ್ಯಾಹ್ನ ೧೨.೩೦ ಕ್ಕೆ ಕಾವ್ಯಾನಂದ ಪಾರ್ಕ್‌ನಲ್ಲಿ ಸಿದ್ದಯ್ಯ ಪುರಾಣಿಕ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ಜರುಗಲಿದ್ದು, ಇಟಗಿಯ ಭೂ ಕೈಲಾಸ ಮೇಲುಗದ್ದಿಗೆ ಹಿರೇಮಠದ ಶ್ರೀ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ನಗರಸಭೆ ಸದಸ್ಯರಾದ ವಿಜಯಾ ಎಸ್.ಹಿರೇಮಠ, ಹಿರಿಯ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ.  ಮಧ್ಯಾಹ್ನ ೪ ಗಂಟೆಗೆ ಜಿಲ್ಲಾ ಉತ್ಸವದ ಮೆರವಣಿಗೆ ನಗರದ ಬನ್ನಿಕಟ್ಟಿಯಿಂದ ಬಸ್ ನಿಲ್ದಾಣ ಮೂಲಕ ಸಾಹಿತ್ಯ ಭವನದವರೆಗೆ ಜಿಲ್ಲಾ ಉತ್ಸವಕ್ಕೆ ಮುಖಂಡ ಕೆ.ಎಂ.ಸಯ್ಯದ್ ಅವರು ಚಾಲನೆ ನೀಡುವರು. ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ ಅವರು ನೆರವೇರಿಸುವರು. ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು, ಕರವೇ ಅಧ್ಯಕ್ಷ ವಿಜಯಕುಮಾರ, ಕರವೇ (ಸ್ವಾಭಿಮಾನಿ ಬಣ) ಯ ರಾಜಶೇಖರ ಅಂಗಡಿ, ಸಿಂಧನೂರು ಕರವೇ ಅಧ್ಯಕ್ಷ ಅಜಿತ್ ಓಸ್ತುವಾಲ್, ವೀರಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು ಅವರ ಉಪಸ್ಥಿತಿಯಲ್ಲಿ ಜರುಗಲಿದೆ. ಮೆರವಣಿಗೆಯ ನೇತೃತ್ವವನ್ನು ಡಿ.ದೇವರಾಜ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ನಾಮ ನಿರ್ದೇಶಿತ ಸದಸ್ಯರಾದ ಗುಡದಪ್ಪ ಬಸಪ್ಪ ಬನಪ್ಪನವರ ವಹಿಸುವರು.  ಸಂಜೆ ೬ ಗಂಟೆಗೆ ೯ನೇ ಜಿಲ್ಲಾ ಉತ್ಸವದ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯವನ್ನು ಯಲಬುರ್ಗಾ ಸಂಸ್ಥಾನ ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಡೊಳ್ಳು ಭಾರಿಸುವುದರ ಮೂಲಕ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಹಾಗೂ ಶಿವರಾಜ ಎಸ್.ತಂಗಡಗಿ ಅವರು ಚಾಲನೆ ನೀಡುವರು. ಉದ್ಘಾಟನೆಯನ್ನು ಸಂಸದ ಸಂಗಣ್ಣ ಕರಡಿ ಅವರು ನೆರವೇರಿಸುವರು. ದಿ|| ಜೆ.ಎಚ್.ಪಟೇಲ್‌ರಿಗೆ ಪುಷ್ಪಾಂಜಲಿಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಅರ್ಪಿಸುವರು. ದಿ|| ಸಿದ್ಧಯ್ಯ ಪುರಾಣಿಕರಿಗೆ ಪುಷ್ಪಾಂಜಲಿಯನ್ನು ಶಾಸಕ ದೊಡ್ಡನಗೌಡ ಪಾಟೀಲ್ ಅವರು ಅರ್ಪಿಸುವರು. ಜಿಲ್ಲಾ ಉತ್ಸವದ ಲಾಂಛನಕ್ಕೆ ಜಿಲ್ಲಾಧಿಕಾರಿ ರಮಣದೀಪ್ ಚೌದ್ರಿ ಅವರು ಚಾಲನೆ ನೀಡುವರು. ಗೌರವ ಪ್ರಶಸ್ತಿ ಪ್ರಧಾನವನ್ನು ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಅವರು ನೆರವೇರಿಸುವರು. ಜಿಲ್ಲಾ ಉತ್ಸವದ ರಾಜಕೀಯ ಸ್ಪೋಟ ವಿಶೇಷ ಸಂಚಿಕೆ ಬಿಡುಗಡೆಯನ್ನು ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ ಅವರು ಬಿಡುಗಡೆಗೊಳಿಸುವರು. ಜಿಲ್ಲಾ ನಾಗರಿಕರ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮಾರುತಿರಾವ್ ಸುರ್ವೆ ಅವರು ಅಧ್ಯಕ್ಷತೆವಹಿಸುವರು. ವಿಶೇಷ ಆಹ್ವಾನಿತರಾಗಿ ಜಿ.ಪಂ.ಸಿಇಓ ಕೃಷ್ಣ ಡಿ.ಉದಪುಡಿ, ಕಿರ್ಲೋಸ್ಕರ್ ಫೆರಸ್ ಎಂಡಿ ಆರ್.ವಿ.ಗುಮಾಸ್ತೆ, ಜಿ.ಪಂ.ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತ್ಯಾಗರಾಜ, ಸಹಾಯಕ ಆಯುಕ್ತ ಪಿ.ಎಸ್.ಮಂಜುನಾಥ ಅವರು ಆಗಮಿಸುವರು. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ, ತಾ.ಪಂಅಧ್ಯಕ್ಷೆ ಬಾನುಚಾಂದ್ ಸಾಬ್, ರಾಜಕೀಯ ಮುಖಂಡರಾದ ಲಲಿತಾರಾಣಿ ಶ್ರೀರಂಗದೇವರಾಯಲು, ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ, ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ ಸೇರಿದಂತೆ ನಗರಸಭೆ ಸರ್ವ ಸದಸ್ಯರು ಪಾಲ್ಗೊಳ್ಳುವರು. ರಾತ್ರಿ ೯ ಕ್ಕೆ ಕಾಮಿಡಿ ಕಿಲಾಡಿಯ ಹಾಸ್ಯಗಾರರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ವೈಸಂಪಾಯನ ಇವರಿಂದ ಹಾಸ್ಯೋತ್ಸವ ಜರುಗಲಿದೆ. ೯.೩೦ ಕ್ಕೆ ಉತ್ತರ ಕರ್ನಾಟಕದ ಹಾಸ್ಯವನ್ನು ಗದಗ ಜಿಲ್ಲೆಯ ಅರುಣ ಕುಲಕರ್ಣಿ ಇವರಿಂದ ಜರುಗಲಿದೆ.
Please follow and like us:
error

Leave a Reply

error: Content is protected !!