fbpx

ವಿದ್ಯಾರ್ಥಿಗಳ ಭವಿಷ್ಯದ ಕನಸನ್ನು ಸಕಾರಗೊಳಿಸಲು ಸರ್ಕಾರ ಮುಂದಾಗಿದೆ – ರಾಘವೇಂದ್ರ ಹಿಟ್ನಾಳ.

ಕೊಪ್ಪಳ: ಆ.೨೨, ಗ್ರಾಮೀಣ ಭಾಗದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ ಸರಕಾರ, ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ, ಕಾರಣ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಸತತ ಅಧ್ಯಾಯನದ ಮೂಲಕ ಶಿಕ್ಷಕರು, ಪಾಲಕರು ಕಂಡ ಕನಸನ್ನು ಸಕಾರಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.  ಅವರು ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆ ಮತ್ತು ಆದರ್ಶ ಮಹಾವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿಗಳಿಗೆ ಸರಕಾರದ ಉಚಿತ ಸೈಕಲ್‌ಗಳನ್ನು ವಿತರಿಸಿ ಮಾತನಾಡುತ್ತಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಉಚಿತ ಸೈಕಲ್ ವಿತರಣೆ ಮಾಡುತ್ತಿದ್ದು ಪಟ್ಟಣದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಪ್ರತಿಭಾನ್ವಿತರಿದ್ದು ಪರೀಕ್ಷಾ ಪಲಿತಾಂಶದಲ್ಲೂ ಗ್ರಾಮೀಣ ವಿದ್ಯಾರ್ಥಿಗಳೇ ಮುಂದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ ಅವರು ಸಐಕಲಗಳನ್ನು ಶಿಕ್ಷಣಕ್ಕೆ ಮಾತ್ರ ಉಪಯೋಗಿಸಬೇಕೆಂದು ಪಾಲಕರಲ್ಲಿ ಮನವಿ ಮಾಡಿಕೊಂಡರು. ರಾಜ್ಯ ಶೈಕ್ಷಣಿಕ ಸೌಲಭ್ಯ ಒದಗಿಸಲು ಮಧ್ಯಮ ಮತ್ತು ಬಡ ಕುಟುಂಬದ ಮಕ್ಕಳಿಗಾಗಿ ಹಲವಾರು ಉಚಿತ ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಸದಪಯೋಗಪಡಿಸಿಕೊಳ್ಳಬೇಕೆಂದು ಅವರು ಹೈದರಾಬಾದ ಕರ್ನಾಟಕ ಭಾಗದ ಜನತೆಗಾಗಿ ಸರ್ಕಾರ ೩೭೧ ಜೆ ಕಾಲಂನ್ನು ಜಾರಿಗೆ ತಂದು ಈ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಶ್ಯಕ್ಕಾಗಿ ಶೇ. ೭೧ ರಷ್ಟು ಮೀಸಲಾತಿ ಜಾರಿಗೆ ತಂದಿದ್ದು ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದಲೇ ಉತ್ತಮ ಶಿಕ್ಷಣ ಪಡೆದು ಈ ಜಿಲ್ಲೆಯಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜು ಇಂಜಿನೀಯರ ಕಾಲೇಜು ಸ್ಥಾಪಿತಗೊಳ್ಳುವುದರೊಂದಿಗೆ ಸಾಕಷ್ಟು ಉದ್ಯೋಗವಕಾಶಗಳು ದೊರಕಲಿವೆ ಎಂದು ಹೇಳಿದ ಅವರು ಶಾಲೆಯ ಮೂಲಭೂತ ಸೌಕರ್ಯಕ್ಕಾಗಿ ಶ್ರಮವಹಿಸುವುದಾಗಿ ಭರವಸೆ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪರಮಾನಂದ  ಯಾಳಗಿ ಮಾತನಾಡಿ ಸರಕಾರವು ಶೈಕ್ಷಣಿಕ ಅಭಿವೃದ್ದಿಗಾಗಿ ಉಚಿತ ಪಟ್ಯ ಪುಸ್ತಕ, ಬಿಸಿಯೂಟ, ಸೈಕಲ್‌ಭಾಗ್ಯ, ವಿದ್ಯಾರ್ಥಿವೇತನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಕೊಟ್ಟರೂ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಸೇರಿಸಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಸಂಗತಿ ಎಂದರು. ಶೈಕ್ಷಣಿಕ ಸೌಲಭ್ಯ ಪಡೆಯುವಲ್ಲಿ ಸರ್ಕಾರದ ಸೌಲಭ್ಯಗಳನ್ನು iಕ್ಕಳಿಗೆ ಸರಿಯಾಗಿ ತಲುಪಲು ಶಿಕ್ಷಕರು, ಪಾಲಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಹೈ.ಕ. ಹಿಂದುಳಿದ ಪ್ರದೇಶವೆಂದು ಹೆಸರು ಅಳಿಸಲು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಆ ಹೆಸರನ್ನು ಹೋಗಲಾಡಿಸಬಹುದು. ಎಂದು ಹೇಳಿದರು.  ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾನತಾಡಿದರು. ವೇದಿಕೆ ಮೇಲೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸೈಯ್ಯದ ಜುಲ್ಲು ಖಾದ್ರಿ, ನಗರಸಭೆ ಸದಸ್ಯ ಪ್ರಾಣೇಶ ಮಹೇಂದ್ರಕರ, ಸಿ.ಆರ್.ಪಿಯ ವಿಜಯಲಕ್ಷ್ಮೀ, ಬಿ.ಹೆಚ್. ಕುರಿ, ವೀರಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು, ಕಾಂಗ್ರೇಸ್ ಯುವ ಮುಖಂಡ ಮುನೀರ ಅಹಮ್ಮದ ಸಿದ್ದಿಕಿ, ಮುಖ್ಯೋಪಾಧ್ಯಾಯರಾದ ಮಹಾಂತೇಶ, ಕರಿಬಸಪ್ಪ ಪಲ್ಲೇದ, ರಾಮರೆಡ್ಡೆಪ ರಡ್ಡೇರ, ತಾಹೇರ ಬೇಗಂ, ಶೈಲಜಾ ಹೆಚ್. ಪ್ರೇಮಾವತಿ ಪಾಟೀಲ, ಮಂಜುಳಾ ನಾಲ್ವಾಡ, ಶೋಭಾ ಗಡಾದ, ವೀರಯ್ಯ ಒಂಟಿಗೋಡಿ ಮಠ, ಗೋಪಾಲರಾವ್ ಗುಡಿ, ಅಂಜನಾ ಸಿದ್ದಾಪುರ, ರಂಜನಿ, ಕು.ಸೌಜನ್ಯ, ರೋಹಿಣಿ, ವೇದಾ ಎಂ.ಪಿ, ಸುನಿತಾ, ಆನಂದ ಕುಮಾರ, ಅಕ್ಪರ ಪಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕು. ಭಾಗ್ಯಶ್ರೀಯಿಂದ ಪ್ರಾರ್ಥನೆ ಜರುಗಿತು, ಕಾರ್ಯಕ್ರಮದ ನಿರೂಪಣೆಯನ್ನು ಆದರ್ಶ ಶಾಲೆಯ ರೋಹಿಣಿ ನೆರವೇರಿಸಿದರೆ, ಹಿರಿಯ ಶಿಕ್ಷಕಿ ಮಂಜುಳಾ ಎಂ. ಅರವಿಂದ ಸ್ವಾತಗ ಕೊನೆಯಲ್ಲಿ ಸುನಿತಾ ಅವರಿಂದ ವಂದನಾರ್ಪಣೆ ಜರುಗಿತು.

Please follow and like us:
error

Leave a Reply

error: Content is protected !!