ಸಮಾಜ ಸಂಘಟನೆಯ ಜೋತೆ ಸಾಮರಸ್ಯ ಅತ್ಯಗತ್ಯ – ಬಂಡಿ

ಕೊಪ್ಪಳ : ಸಮಾಜ ಸಂಘಟನೆಯ ಜೊತೆ ಇನ್ನುಳಿದ ಸಮಾಜದವರ ಜೊತೆ ಸಾಮರಸ್ಯ ಮನೋಭಾವನೆ ರೂಡಿಸಿಕೊಂಡಾಗ ಮಾತ್ರ ಸಂಘಟನೆಗೆ ತೂಕ ಹೆಚ್ಚಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಬಂಡಿ ಅಬಿಪ್ರಾಯ ಪಟ್ಟರು. ಅವರು ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ವೀರಸೈವ ಜಾಗೃತ ಸಮೀತಿ ವತಿಯಿಂದ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರ ಚೆನ್ನಮ್ಮರ ೧೮೯ ನೆ ವೀಜಯೋತ್ಸವ ಹಾಗೂ ವೀರಶೈವ ಯುವ ಘಟಕ ಉದ್ಘಾಟಿಸಿ ಮಾತನಾಡಿದ ವೀರಶೈವ  ಧರ್ಮ ಸಂವಿಧಾನದ ಆಶೆಯಗಳಿಗೆ ತಕ್ಕುದಾಗಿ ತನ್ನ ಕಾರ್ಯನಿರ್ವಹಿಸುತ್ತಿದ್ದು ಇದಕ್ಕೆ ಶತಮಾನಗಳ ಇತಿಹಾಸವಿದೆ ಎಂದರು. ಗ್ರಾಮ ಘಟಕ ಉದ್ಘಾಟಿಸಿದ ಜಿ. ಪಂ ಮಾಜಿ ಸದಸ್ಯ ಸಿ.ಹೆಚ್. ಪೋಲಿಸಪಾಟೀಲ ಮಾತನಾಡಿ ೧೨ ನೇ ಶತಮಾನದಲ್ಲಿ ಶರಣರು ನಡೆಸಿದ ಸಮಾಜಿಕ ಕ್ರಾಂತಿ ಪ್ರತಿಪಲದಿಂದಾಗಿ ಇಂದು ದೇಶದಲ್ಲಿ ಸಹೋದರತ್ವ ಮನೋಭಾವೆ ಮನೆ ಮಾಡಿದ್ದು ಈ ನಿಟ್ಟಿನಲ್ಲಿ ವೀರಶವ ಸಮಾಜದ ಬಾಂದವರು ಸಮಾಜ ಸಂಘಟನೆಯಲ್ಲಿ ಮಾದರಿಯಾಗಬೇಕೆಂದು ಕರೆ ನೀಡಿದರು. ಬಿಜೆಪಿ ಯುವ ಮುಖಂಡರಾದ ನವೀನ ಗುಳಗಣ್ಣವರ ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀಪಾದಪ್ಪ ಅಧಿಕಾರಿ ಮಾತನಾಡಿದರು. ಅತಿಥಿಗಳಾಗಿ ಕೆ.ಪಿ.ಸಿ.ಸಿ ಸದಸ್ಯ ಬಸವರಾಜ ಉಳ್ಳಾಗಡ್ಡಿ ನ್ಯಾಯವಾಧಿ ಎಸ್.ಎಂ ಶ್ಯಾಗೋಟಿ, ತಾ.ಪಂ. ಮಾಜಿ ಸದಸ್ಯ ನಾಗಪ್ಪ ವಡ್ಡರ, ಕಾಂಗ್ರೇಸ ಪಕ್ಷದ ಮುಖಂಡರಾದ ವೀರನಗೌಡ ಪೋಲಿಸಪಾಟೀಲ, ಹರಸೈನ್ಯ ತಾಲೂಕಾ ಅಧ್ಯಕ್ಷ ರುದ್ರಗೌಡ ಸೊಲಬನಗೌಡ, ಶೇSರಗೌಡ ಪಾಟೀಲ, ಸಂಗಪ್ಪ ಕರೆಬಿನಾಳ ಇನ್ನಿತರರು ಉಪಸ್ಥಿತರಿದ್ದರು. ವೀರಬದ್ರಪ್ಪ ಬಮ್ಮಸಾಗರ  ಪ್ರಾಸ್ತಾವಿಕವಾಗಿ ಮಾತನಾಡಿದರು. 
ಕುಮಾರಿ ಬಸಮ್ಮ ಧರಣೆಪ್ಪಗೌಡರ ಪ್ರಾರ್ಥಿಸಿದರು, ವೀರಣ್ಣ ಬನ್ನಿಗೋಳ ಸ್ವಾಗತಿಸಿದರು, ಶಿದ್ದಯ್ಯ ಹಿರೇಮಠ ನಿರೂಪಿಸಿ ವಂದಿಸಿದರು.  
Please follow and like us:
error