ಯಲಬುರ್ಗಾ ತಾಲೂಕಿನ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಯಕ್ಷರಾದ ಈರಪ್ಪ ಎಂ. ಕಂಬಳಿಯವರ ಕಿರು ಪರಿಚಯ


ಯಲಬುರ್ಗಾ ತಾಲೂಕಿನ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಯಕ್ಷರಾದ ಈರಪ್ಪ ಎಂ. ಕಂಬಳಿಯವರ ಕಿರು ಪರಿಚಯ –ಮಲ್ಲಿಕಾರ್ಜುನ .ಎಮ್.ಹಡಪದ

ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ  ೫ನೇ ಆಗಸ್ಟ್ ೧೯೫೮ ಹುಟ್ಟಿದ ಕಂಬಳಿಯವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಯಲಬುರ್ಗಾ ತಾಲೂಕಿನಲ್ಲಿ ಮುಗಿಸಿ ನಂತರ  ನರೇಗಲ್ಲಿನಲ್ಲಿ ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಹಾಗೂ ಭಾಷಾಂತರದಲ್ಲಿ ಡಿಪ್ಲೊಮಾ ಮಾಡಿಕೊಂಡು ೧೯೮೩ರಲ್ಲಿ ಬೆಂಗಳೂರಿನ ಭಾಷಾಂತರ ನಿರ್ದೇಶನಾಲಯದಲ್ಲಿ ಕನ್ನಡ ಭಾಷಾಂತರಕಾರನಾಗಿ ರಾಜ್ಯ ಸರ್ಕಾರಿ ಸೇವೆಗೆ ಸೇರಿ, ಈಗ ಅಲ್ಲಿಯೇ ನಿರ್ದೇಶಕ ಹುದ್ದೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 
ವಿದ್ಯಾರ್ಥಿದೆಸೆಯಲ್ಲಿಯೇ ಸಮಾನ ಮನಸ್ಕ ಗೆಳೆಯರೊಂದಿಗೆ ’ಸಮಕಾಲೀನ ವಿಚಾರ ವೇದಿಕೆ’ ಕಟ್ಟಿ, ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ತೊಡಗಿಸಿಕೊಂಡು; ಪ್ರಗತಿಪರ ವಿಚಾರಧಾರೆಯ ಉಪನ್ಯಾಸ, ಚರ್ಚಾಗೋಷ್ಠಿ, ಕವಿಗೋಷ್ಠಿಗಳನ್ನು ಆಯೋಜಿಸಿದ; ಪತ್ರಿಕಾ ವರದಿಗಾರನಾಗಿ, ಫ್ರೀಲಾನ್ಸ್ ಬರಹಗಾರನಾಗಿ; ನಾಡಿನ ನಿಯತಕಾಲಿಕೆಗಳಲ್ಲಿ ಕವನ, ಲೇಖನ ಪ್ರಕಟಿಸಿದ ಅನುಭವ ಕಂಬಳಿಯವರಗಿದೆ. ೧೯೮೨ರಲ್ಲಿ ಕನ್ನಡ ಅಧ್ಯಯನ ಪೀಠದ ಕರ್ನಾಟಕ ಸಂಘದಿಂದ ಕವನಕ್ಕೆ ಪ್ರಥಮ ಬಹುಮಾನ, ಪ್ರಾಧ್ಯಾಪಕರಿಂದ ಮೆಚ್ಚುಗೆ, ಕಲೆ-ಸಾಹಿತ್ಯ-ಸಾಂಸ್ಕೃತಿಕ ಸಂಘಟನೆಗಳೊಂದಿಗೆ ಅವಿರತ ಒಡನಾಟ. ಅಲೆಮಾರಿ ಮನಸ್ಸಿನ ಚಾರಣಕೂಡ ಅವರ  ಹವ್ಯಾಸ.
೧೯೯೨ರಲ್ಲಿ ಮೊದಲ ಕೃತಿಯಾಗಿ‘ಅರೆಸತ್ತ ಬದುಕು’ (ಪದ್ಯಗಳು) ಪ್ರಕಟಣೆ, ರಾಜ್ಯಮಟ್ಟದಲ್ಲಿ ಪ್ರಕಟಿತ ಕಾವ್ಯಕೃತಿಗೆ ನೀಡುತ್ತಿದ್ದ ಮೈಸೂರಿನ ಮಂಗಳಾ ಕಲಾ-ಸಾಹಿತ್ಯ ವೇದಿಕೆಯಿಂದಅದಕ್ಕೆ‘ರಾಷ್ಟ್ರಕವಿ ಕುವೆಂಪು ಸಾಹಿತ್ಯ ಪ್ರಶಸ್ತಿ’,‘ಹೆದ್ದಾರಿಗುಂಟ’ ಲಲಿತ ಪ್ರಬಂಧ ಸಂಕಲನಕ್ಕೆ ೧೯೯೨ರ ಸಾಲಿನ ಪಡುಕೋಣೆರಮಾನಂದರಾಯರ ಸ್ಮರಣಾರ್ಥ ನೀಡಲಾಗುವ‘ಪರಮಾನಂದ’ ಪ್ರಶಸ್ತಿ; ವಿಶ್ವೇಶ್ವರಯ್ಯ ಪ್ರತಿಷ್ಠಾನದಿಂದ ಲಲಿತ ಪ್ರಬಂಧ ಪ್ರಕಾರದಲ್ಲಿ ದಶವಾರ್ಷಿಕ ಶ್ರೇಷ್ಠ ಕೃತಿ ಪುರಸ್ಕಾರವೂಅದಕ್ಕೆ (೧೯೯೭) ಲಭಿಸಿವೆ.
ಎರಡನೆಯ ಪ್ರಬಂಧ ಸಂಕಲನವಾದ‘ಹೀಗೊಂದುಟಾಪ್ ಪ್ರಯಾಣ’ಕನ್ನಡ ಸಾಹಿತ್ಯ ಪರಿಷತ್ತಿನ ೨೦೦೩ನೇ ಸಾಲಿನ ‘ಕುಂಬಾಸ ದತ್ತಿ ಬಹುಮಾನ ಸಂದಿದೆ.ಹಾಗೆಯೇಕರ್ನಾಟಕ ಸಾಹಿತ್ಯಅಕಾಡೆಮಿಯ ಪುಸ್ತಕ ಬಹುಮಾನವು ೨೦೦೩ನೇ ಸಾಲಿನಲ್ಲಿ ಸದರಿ ಪುಸ್ತಕಕ್ಕೆ ದಕ್ಕಿದೆ.೨೦೦೬ರಲ್ಲಿ ಪ್ರಕಟಿಸಿದ ‘ಚಾಚಾನೆಹರು ಮತ್ತು ಈಚಲು ಮರ’ ಲಲಿತ ಪ್ರಬಂಧಗಳ ಪುಸ್ತಕಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ‘ಪುಸ್ತಕ ಸೊಗಸು’ ಬಹುಮಾನ ಬಂದಿದೆ.‘ಹುರುಳೀ ಕಟ್ಟು’ (೨೦೧೦) ಇವರಆಯ್ದ ಲಲಿತ ಪ್ರಬಂಧಗಳ ಸಂಕಲನವಾಗಿದೆ.‘ಕರಾವಳಿಗುಂಟ ಆರುದಿನ’ (೨೦೧೧) (ಪ್ರವಾಸಕಥನ), ‘ಕಳ್ಳೀ ಹಾಲು’ (೨೦೧೧) (ಲಲಿತ ಪ್ರಬಂಧ), ‘ಯಲಬುರಗಿಯಿಂದ ಹಿಮಗಿರಿಗೆ’(೨೦೧೪) (ಚಾರಣ ಪ್ರಬಂಧಗಳು).‘ಕಳ್ಳೀ ಹಾಲು’ಕೃತಿಗೆ ಈಗ ಕರ್ನಾಟಕ ಸಾಹಿತ್ಯಅಕಾಡೆಮಿ ಬಹುಮಾನ (ಎರಡನೆ ಬಾರಿ).
ಹೀಗೊಂದುಟಾಪ್ ಪ್ರಯಾಣ, ಅಕ್ಷರ ಮತ್ತು ನಾನು, ಯಾಕಾಗಿ ಮಳಿ ಹ್ವಾದವೋ, ಹುಡ್ತೀತಿಆಟದ ಹುದ್ದರಿಗಳು, ಮೊಬೈಲ್ ಫೋಬಿಯಾ, ಹಿಮಕಂದರಗಳ ಹಾದಿ, ಶ್ವಾನ ಪ್ರೇಮದ ಪರಿ ಮೊದಲಾದ ಲಲಿತ ಪ್ರಬಂಧಗಳು ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಿ ಗಮನ ಸೆಳೆದಿವೆ. ಕನ್ನಡದ ಲಲಿತಪ್ರಬಂಧ ಬರವಣಿಗೆಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸುವ ಸನ್ನಾಹ. ಸ್ವಲ್ಪವೇ ಬರೆದರೂ ಗಟ್ಟಿಯಾದ ಬರವಣಿಗೆ ಮಾಡಬೇಕೆನ್ನುವ ಹಪಾಹಪಿ.
ಬದುಕಿನರಸವತ್ತಾದ ಅನುಭವಗಳನ್ನು ಪೂರ್ವಗ್ರಹಗಳಿಲ್ಲದೆ ಧ್ಯಾನಿಸುತ್ತ ಸವಿಸ್ತಾರವಾದಅಭಿವ್ಯಕ್ತಿಗೆ ‘ಲಲಿತ ಪ್ರಬಂಧ’ವೇ ಸೂಕ್ತ ಮಾಧ್ಯಮವೆಂದು ಬಗೆದು, ಈಗ ಪ್ರಬಂಧ ಪ್ರಕಾರವೊಂದರಲ್ಲಿಯೇ ತಮ್ಮನ್ನು ವಿಶೇಷವಾಗಿ ತೊಡಗಿಸಿಕೊಂಡವರು.ಗ್ರಾಮೀಣ ಬದುಕನ್ನು ಸಾಂಸ್ಕೃತಿಕ ನೆಲೆಯಲ್ಲಿಅವಲೋಕಿಸುತ್ತಲೇ ಹಾಸ್ಯದ ಸಿಂಚನದೊಂದಿಗೆ ಇವರ ಪ್ರಬಂಧಗಳು ಕಚಗುಳಿಯಿಡುತ್ತವೆ. ಗ್ರಾಮೀಣ ಹಾಗೂ ನಗರ ಬದುಕಿನ ಸಂಕೀರ್ಣತೆಯನ್ನೂ, ಅದರ ವಿರಾಟ್‌ರೂಪವನ್ನೂ ಏಕಕಾಲಕ್ಕೆ ಕಟ್ಟಿಕೊಡುತ್ತಲೇ ವೈಚಾರಿಕ ಲೇಪನದೊಂದಿಗೆ ವಾಚಕರ ಗಮನ ಸೆಳೆಯುತ್ತವೆ. ಜೊತೆಗೆ ವೈಜ್ಞಾನಿಕ ಮನೋಧರ್ಮದ ಹಿನ್ನೆಲೆಯಲ್ಲಿ ಮಾನವೀಯತೆಎತ್ತಿ ಹಿಡಿದಂತೆಚಿಂತನೆಗೆ ಹಚ್ಚುತ್ತವೆ. ಅಷ್ಟೇ ಅಲ್ಲ. ಇವರ ಬರವಣಿಗೆ ಓದಿಸಿಕೊಳ್ಳುವ ಆಪ್ತತೆಯನ್ನುತುಸುಗಂಭೀರ ವಿಶ್ಲೇಷಣೆಯ ಸೃಜನಶೀಲ ಆಯಾಮವನ್ನು ಪಡೆದುಕೊಂಡಿರುವುದೇಒಂದು ಹೆಗ್ಗಳಿಕೆಎಂಬುದು ಸಹೃದಯ ಗೆಳೆಯರ (’ಹೆದ್ದಾರಿಗುಂಟ’ ಪುಸ್ತಕಕ್ಕೆ ಬರೆದಟಿಪ್ಪಣಿ) ಅಭಿಪ್ರಾಯವಾಗಿದೆ.
Please follow and like us:
error