ಚಿಣ್ಣರಿಂದ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ

  ಕೊಪ್ಪಳ ನಗರದ   ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ  ಇಂದು   ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ  ಚಿಣ್ಣರಿಂದ ಚಾಲನೆ ನೀಡಲಾಯಿತು .
                         ನವಂಬರ ೧೪ ರಿಂದ ೨೦ ರ ವರೆಗೆ ನೆಡೆಯುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮಕ್ಕೆ ಭಾರತೀಯ ಗ್ರಂಥಾಲಯ ಪಿತಾಮಹ ಡಾ ಎಸ್.ಆರ್. ರಂಗನಾಥನ್ , ಸರಸ್ವತಿ ದೇವಿ ಭಾವಚಿತ್ರಕ್ಕೆ ಚಿಣ್ಣರಾದ ಕಾವ್ಯ ದಿಂಡೂರ ಪೂಜೆ ಮಾಡಿದರೆ , ಪುಟಾಣಿ ರುಕೀಯಾ ಬಿಳಿಕುದ್ರಿ ದೀಪ ಬೆಳಗಿಸಿದರು . ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಎರ್ಪಡಿಸಲಾದ ಪುಸ್ತಕ ಪ್ರದರ್ಶನಕ್ಕೆ ಇನ್ನೋರ್ವ ಪುಟಾಣಿ  ಯಶವಂತ ಕಡಬೂರ ಅವರಿಂದ ಚಾಲನೆ ನೀಡಲಾಯಿತು  ಇ ದಿನವೇ. ಮಕ್ಕಳ ದಿನಾಚರಣೆಯು ಇರುವುದರಿಂದ ಮಕ್ಕಳಿಂದಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಲ್ಲದೆ ಮಕ್ಕಳಿಗೆ ಸಿಹಿ ಹಂಚಲಾಯಿತು .  
                       ಭಾರತೀಯ

ಗ್ರಂಥಾಲಯ ಪಿತಾಮಹ ಡಾ ಎಸ್.ಆರ್.  ರಂಗನಾಥನ್   ತಮ್ಮ ಪಂಚಸೂತ್ರಗಳಲ್ಲಿ   ಹೇಳಿರುವಂತೆ . ಗ್ರಂಥಾಲಯ ಬೆಳೆಯುತ್ತಿರುವ ಸಂಸ್ಥೆ ,  ಪ್ರತಿಯೊಬ್ಬ   ಓದುಗನು  ತನ್ನ ದೇ ಆದ ಪುಸ್ತಕವನ್ನು  ಬಯಸುತ್ತಾನೆ , ಹಾಗೆ ಪ್ರತಿಯೊಂದು ಪುಸ್ತಕವು ಅದರದೇ ಆದ  ಓದುಗನನ್ನು ಬಯಸುತ್ತದೆ .  ಪುಸ್ತಕ ಪ್ರದರ್ಶನಗಳಿಂದ ಅದು ಸಾಧ್ಯವಾಗುತ್ತದೆ . ನವಂಬರ ೨೦ ರ ವರೆಗೆ ಪುಸ್ತಕ ಪ್ರದರ್ಶನ ಜರುಗಲಿದೆ .

  ಇದೇ ಸಂದರ್ಭದಲ್ಲಿ  ಗ್ರಂಥಾಲಯ ಸಹಾಯಕ ಶಿವನಗೌಡ ಪಾಟೀಲ , ಇನ್ನೋರ್ವ ಗ್ರಂಥಾಲಯ ಸಹಾಯಕ ನಾಗರಾಜನಾಯಕ ಡಿ ಡೊಳ್ಳಿನ . ಸಿಬ್ಬಂದಿಗಳಾದ ಗಂಗಮ್ಮ ಡೊಳ್ಳಿನ ,  ಹುಲಿಗೆಮ್ಮ ಬಣಕಾರ . ಮಕ್ಕಳಾದ ಮಹೇಶಕುಮಾರ , ಶ್ರವಣ ,ಆನಂದ ಹಾಗೂ ಓದುಗರಾದ ಶರಣಪ್ಪ , ರುದ್ರೇಶ , ಮಹೇಶ ಗಂಗಾಧರ  ಹಾಜರಿದ್ದರು . 
Please follow and like us:
error