ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ

ಕೊಪ್ಪಳ ; ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರಕಾರದ ವಿರುದ್ದ ಇಂದು ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸೈಕಲ್ ಜಾಥಾದ ಮೂಲಕ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಗಡಿಯಾರ ಕಂಬದಿಂದ ಹೊರಟ ಪ್ರತಿಭಟನಾಕಾರರು ಬಸವೇಶ್ವರ ಸರ್ಕಲ್ ತನಕ ಮೆರವಣಿಗೆ ನಡೆಸಿದರು. ಅಲ್ಲಿಯೇ ರಸ್ತೆ ಮೇಲೆ ಭಾಷಣ ಪ್ರಾರಂಭಿಸಿದರು.
ಸೈಕಲ್ ಜಾಥಾದಲ್ಲಿ ಕೃಷಿ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ, ಸಂಸದ ಶಿವರಾಮಗೌಡ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಸೇರಿದಂತೆ ಹಲವಾರು ನಾಯಕರು ಸೈಕಲ್ ತುಳಿದರು. ಕೇಂದ್ರ ಸರಕಾರದ ವಿರುದ್ದ ಹರಿಹಾಯ್ದ ನಾಯಕರು ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ಕಷ್ಟಕ್ಕೀಡಾಗಿದೆ. ಇದರ ಬಗ್ಗೆ ಕೇಂದ್ರ ಸರಕಾರ ನಿರ್ಲಕ್ಷ್ಯ ದೋರಣೆ ತೋರುತ್ತಿದೆ. ಸಾಮಾನ್ಯ ಮನುಷ್ಯ ಸಾಲಗಾರನಾಗುತ್ತಿದ್ದಾನೆ ಇದಕ್ಕೆ ಕೇಂದ್ರ ಸರಕಾರವೇ ಹೊಣೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕೊಲ್ಲ ಶೇಷಗಿರಿರಾವ್, ಕಳಕಪ್ಪ ಜಾಧವ, ಅಪ್ಪಣ್ಣ ಪದಕಿ, ಅಂದಾನಪ್ಪ ಅಗಡಿ,ಸುರೇಶ ದೇಸಾಯಿ, ವೀರಣ್ಣ ಹಂಚಿನಾಳ ಸೇರಿದಂತೆ ಹಲವ ಾರುನಾಯಕರುಭಾಗವಹಿಸಿದ್ದರು.

Leave a Reply