fbpx

ಬಳ್ಳಾರಿ ವಿ.ವಿ ಪದವಿ ಪರೀಕ್ಷೆ ಶುಲ್ಕ ಹೆಚ್ಚಳಕ್ಕೆ ಎಸ್.ಎಫ್.ಐ ವಿರೋಧ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ಸೆಮಿಸ್ಟರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಕೊಟ್ಟು ಕೇವಲ ೧೧೦/- ರೂಪಾಯಿಗಳನ್ನು ಮಾತ್ರ ಪಡಿಯುತ್ತಿದ್ದರು ಮತ್ತು ಹೆಚ್ಚುವರಿ ಆದಾಯ ಹೊಂದಿದವರಿಗೆ ಮಾತ್ರ ಪೂರ್ಣ ಶುಲ್ಕವನ್ನು ಪಡೆಯಲಾಗುತ್ತಿತ್ತು. ಆದರೆ ಈ ಸೆಮಿಸ್ಟರಗೆ ಬಳ್ಳಾರಿ ವಿ.ವಿಯು ೨,೪,೬ನೇ ಪರೀಕ್ಷೆ ಶುಲ್ಕ ನಿಗದಿ ಮಾಡಿದ್ದು, ಜಾತಿ, ಆದಾಯ ಪ್ರಮಾಣ ಪಮಾಣ ಪತ್ರ ಹೊಂದಿದ ವಿದ್ಯಾರ್ಥಿಗಳಿಗೂ, ಹೆಚ್ಚುವರಿ ಆದಾಯ ಹೊಂದಿದವರಿಗೂ, ಆದಾಯ ಇಲ್ಲದವರಿಗೂ ಶುಲ್ಕದಲ್ಲಿ ದಿಢೀರನೇ ೮೫೦ ರೂ. ಏರಿಕೆ ಮಾಡುವುದರ ಮೂಲಕ ವಿದ್ಯಾರ್ಥಿಗಳನ್ನು ಆರ್ಥಿಕ ಸಂಕಷ್ಟಕ್ಕೆ ಗುರಿ ಮಾಡಿದೆ.
     ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದು, ಈ ಸಂದರ್ಭದಲ್ಲಿ ೧೧೦/- ದಿಂದ ೮೫೦/- ರೂಪಾಯಿಕ್ಕೆ ಹೆಚ್ಚಳ ಮಾಡಿದ್ದರಿಂದ ಹಲವಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುವ ಸಂಭವವಿದೆ. ಪ್ರವೇಶ ಶುಲ್ಕಕ್ಕಿಂತ, ಪ್ರರೀಕ್ಷೆ ಶುಲ್ಕವೇ ಅಧಿಕವಾದರೆ ಹೇಗೆ? ಹೈದರಾಬಾದ್ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಗಾಗಿ ಹೋರಾಟ ಮಾಡಿ ಮೀಸಲಾತಿ ಪಡೆದರೂ, ವಿ.ವಿ ಕುಲಪತಿಗಳು ಪರೀಕ್ಷೆ ಶುಲ್ಕ ದಿಢೀರನೇ ಹೆಚ್ಚಳ ಮಾಡಿದ್ದರಿಂದ ದಲಿತ, ಬಡ, ಹಿಂದುಳಿದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಈ ಕೂಡಲೇ ಶುಲ್ಕ ಪರಿಷ್ಕರಣೆ ಮಾಡಿ, ಮೊದಲ ಇದ್ದ ೧೧೦/- ರೂ. ಶುಲ್ಕವನ್ನು ಪಡೆಯುವುದರ ಮೂಲಕ ಹೆಚ್ಚುವರಿ ಶುಲ್ಕದ ಆದೇಶವನ್ನು ವಾಪಸ್ಸು ಪಡೆಯಬೇಕು. ಇಲ್ಲದಿದ್ದರೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಎಲ್ಲಾ ಪದವಿ ಕಾಲೇಜಗಳ ತರಗತಿ ಬಹಿಸ್ಕರಿಸಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. 
 ಅಮರೇಶ ಕಡಗದ                                               ಬಾಳಪ್ಪ ಹುಲಿಹೈದರ್ 
ಜಿಲ್ಲಾಧ್ಯಕ್ಷರು ಹಾಗೂ                                ಜಿಲ್ಲಾ ಕಾರ್ಯದರ್ಶಿ
ಬಳ್ಳಾರಿ ವಿ.ವಿ ಸಂಚಾಲಕರು     
           
ಹನುಮಂತ ಬಜೆಂತ್ರಿ, ದುರಗೇಶ ಡಗ್ಗಿ, ಗ್ಯಾನೇಶ ಕಡಗದ, ಪರಶುರಾಮ ರಾಥೋಡ, ವೀರೇಶ ಕುದರಿಮೋತಿ, ಉಮೇಶ ರಾಥೋಡ್, ಮೇಘನಾ, ಗೌರಮ್ಮ, ನೇತ್ರಾ, ಮಂಜುನಾಥ ಡಗ್ಗಿ, ಪಾರ್ವತಿ ಇತರರು 
Please follow and like us:
error

Leave a Reply

error: Content is protected !!