ಕಾರ್ಯನಿರತ ಪತ್ರಕರ್ತರ ಸಭೆ

ದಿ.೮ ರಂದು ಯಲಬುರ್ಗಾ ಮತ್ತು ಕುಷ್ಟಗಿಯಲ್ಲಿ ಹಾಗೂ 
ದಿ.೯ ರಂದು ಗಂಗಾವತಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಭೆ
ಕೊಪ್ಪಳ,ಜ.೦೫: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ೨೦೧೪-೧೫ನೇ ಸಾಲಿನ ಸದಸ್ಯತ್ವ ನವೀಕರಣ ಸೇರಿದಂತೆ ಪತ್ರಕರ್ತರ ಸಂಘಟನೆ ಬಲಪಡಿಸಲು ಜಿಲ್ಲೆಯ ತಾಲೂಕ ಘಟಕದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಸಭೆ ದಿ.೮ ರ ಬುಧವಾರ ಬೆಳಿಗ್ಗೆ ೧೧.೦೦ ಗಂಟೆಗೆ ಯಲಬುರ್ಗಾ ಪ್ರವಾಸಿ ಮಂದಿರದಲ್ಲಿ ಹಾಗೂ ಅದೇ ದಿನ ಮಧ್ಯಾಹ್ನ ೩.೦೦ ಗಂಟೆಗೆ ಕುಷ್ಟಗಿಯ ಪ್ರವಾಸಿ ಮಂದಿರದಲ್ಲಿ ಸಭೆ ಜರುಗಲಿದೆ.
ಅದರಂತೆ ದಿ.೯ ರ ಗುರುವಾರ ಬೆಳಿಗ್ಗೆ ೧೧.೦೦ ಗಂಟೆಗೆ ಗಂಗಾವತಿಯ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಪದಾಧಿಕಾರಿಗಳ ಹಾಗೂ ಸದಸ್ಯರ ಸಭೆ ಜರುಗಲಿದೆ. ಆಯಾ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಮತ್ತು ತಾಲೂಕ ಪ್ರಧಾನ ಕಾರ್ಯದರ್ಶಿಯವರು ನಿಗದಿಪಡಿಸಿದ ಸ್ಥಳಗಳಲ್ಲಿ ಸಭೆ ನಡೆಸಲು ಏರ್ಪಾಡು ಮಾಡಬೇಕು. 
ಈ ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ್‌ರವರ ನೇತೃತ್ವದ ತಂಡದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಾದಿಕ್ ಅಲಿ ಸೇರಿದಂತೆ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಕೊಟ್ರಪ್ಪ ತೋಟದ್, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಹರೀಶ ಹೆಚ್.ಎಸ್., ಉಪಾಧ್ಯಕ್ಷರಾದ ಪರಮಾನಂದ ಯಾಳಗಿ, ವೈ.ಬಿ.ಜೂಡಿ, ಜಿಲ್ಲಾ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ ಮತ್ತು ಖಜಾಂಚಿ ಹನುಮಂತ ಹಳ್ಳಿಕೇರಿ ಪಾಲ್ಗೊಳ್ಳಲಿದ್ದಾರೆ. 
ಆಯಾ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ತಪ್ಪದೇ ನಿಗದಿಪಡಿಸಿದ ಸಮಯದಲ್ಲಿ ಸಭೆಯಲ್ಲಿ ಪಾಲ್ಗೊಳ್ಳಬೇಕು ಸಭೆಗೆ ಆಗಮಿಸುವ ಮುನ್ನ ತಮ್ಮ ಎರಡು ಭಾವಚಿತ್ರ ಸಂಘದಿಂದ ಪಡೆದ ಗುರುತಿನ ಕಾರ್ಡ್‌ನ ಝರಾಕ್ಸ ಪ್ರತಿ ಸೇರಿದಂತೆ ನಿಗದಿಪಡಿಸಿದ ಶುಲ್ಕದೊಂದಿಗೆ ಸಭೆಗೆ ಆಗಮಿಸಿ ಸದಸ್ಯತ್ವ ನವೀಕರಣ ಮಾಡಿಸಿಕೊಳ್ಳಲು ಸಭೆಯಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ ಸದಸ್ಯತ್ವ ಬಯಸುವ ಇತರ ಆಸಕ್ತ ಪತ್ರಕರ್ತರು ಸಹ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಾದಿಕ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply