ಕಿನ್ನಾಳ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ

ಕೊಪ್ಪಳ : ತಾಲೂಕಿನ ಕಿನ್ನಾಳ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಯಿತು. 
ಕಿನ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಇರ್ಫಾನ್ ಅಂಜುಮ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಏಡ್ಸ್ ಮತ್ತು ಹೆಚ್.ಐ.ವಿ ತಡೆಗಟ್ಟುವ ಕುರಿತು ಮಾಹಿತಿ ನೀಡಿದರು. ಮತ್ತೋರ್ವ ವೈದ್ಯಾಧಿಕಾರಿಗಳಾದ ಡಾ. ರಾಜೇಶ್ವರಿ ಅವರು ವಿಶ್ವ ಏಡ್ಸ್ ದಿನಾಚರಣೆ ಮಹತ್ವ ಕುರಿತು ವಿವರಿಸಿದರು. 
ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಎಸ್.ಜಿ. ಹೊಸಬಾವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಹೆಚ್. ಎಸ್. ತಿಮ್ಮಾರಡ್ಡಿ , ಉಪನ್ಯಾಸಕರಾದ ಅಹ್ಮದ್ ಮೋಹಿದ್ದಿನ್, ಅಡವಿರಾವ ಕಸಬೆ, ರತ್ನಾ ಬಾಯಿ ವಾಯ್, ಹೇಮಾ ಜೋಶಿ, ವಾಸುದೇವ ಅಡವಿಬಾವಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕುಮಾರಿ ಅಕ್ಕಮಹಾದೇವಿ ಪ್ರಾರ್ಥಿಸಿದರು. ಉಪನ್ಯಾಸಕರಾದ ಎಸ್.ಪಿ.ಕುಲಕರ್ಣಿ ನಿರೂಪಿಸಿದರು. ಶಿವಕುಮಾರ ಪಾಗಿ  ಸ್ವಾಗತಿಸಿದರು. ಖಾಜಾವಲಿ ಬೆಣಕಲ್ ವಂದಿಸಿದರು.
Please follow and like us:
error