ರಾಷ್ಟ್ರ ಧ್ವಜ ನೀತಿ ಸಂಹಿತೆ ಮತ್ತು ರಾಷ್ಟ್ರಗೀತೆ ಮಾಹಿತಿ ತರಬೇತಿ.

ಕೊಪ್ಪಳ-14-  ರಾಜೀವಗಾಂಧಿ ಬಿಇಡಿ ಕಾಲೇಜು ಕೊಪ್ಪಳದಲ್ಲಿ ಭಾರತ ಸೇವಾದಳದಿಂದ ರಾಷ್ಟ್ರ ದ್ವಜನೀತಿ ಸಂಹಿತೆ ಹಾಗೂ ರಾಷ್ಟ್ರಗೀತೆ ಕುರಿತು. ತರಬೇತಿಯನ್ನು ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ನೀಡಲಾಯಿತು.
    ಅಧ್ಯಕ್ಷತೆಯನ್ನು ವಿನೋದ ಹೂಲಿ ಪ್ರಾಂಶುಪಾಲರು ವಹಿಸಿದ್ದರು. ಸೋಮ ಶೇಖರ ಚ ಹರ್ತಿ ಭಾರತ ಸೇವಾಲಾಲ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷರು ಕೊಪ್ಪಳ ರವರು ಭಾರತದ ರಾಷ್ಟ್ರ ಧ್ವಜ ಇತಿಹಾಸ ಕುರಿತು ಉಪನ್ಯಾಸ ನೀಡಿದರು. ಎಚ್. ಅಬ್ದುಲ್ ಅಜೀಜ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಭಾರತ ಸೇವಾದಳ ರವರು ರಾಷ್ಟ್ರಧ್ವಜ ನೀತಿ ಸಂಹಿತೆ ಕುರಿತು ಉಪನ್ಯಾಸ ನೀಡಿದರು ಸಿ. ಗಾದಿಲಿಂಗಪ್ಪ  ಜಿಲ್ಲಾ ಸಂಘಟಿಕರು ರಾಷ್ಟ್ರದ್ವಜ ಆರೋಹಣ ಅವರೋಹಣ ಕುರಿತು ಪ್ರತ್ಯಕ್ಷ ಶಿಕ್ಷಣ ನಿಡಿದರು. ಸುಮಾರು ೧೦೦ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
    ಇದೇ ಸಂಧರ್ಭದಲ್ಲಿ  ಮಹೇಶ ಪೂಜಾರ ಶ್ರೀಮತಿ ರಾಚಮ್ಮ ಶ್ರೀಮತಿ ಶೋಭಾ ಸಜ್ಜನ, ಮಲ್ಲಪ್ಪ ಅಂಬಿಗ, ಉಪನ್ಯಾಸರಕು ಉಪಸ್ಥಿತರಿದ್ದರು.

Leave a Reply