You are here
Home > Koppal News > ೨೫ನೇ ಬೆಳಕಿನೆಡೆಗೆ ಕಾರ್ಯಕ್ರಮ ಹಾಗೂ ನೂತನ ಹರಕೆ ತೇರಿನ ಉದ್ಘಾಟನೆ

೨೫ನೇ ಬೆಳಕಿನೆಡೆಗೆ ಕಾರ್ಯಕ್ರಮ ಹಾಗೂ ನೂತನ ಹರಕೆ ತೇರಿನ ಉದ್ಘಾಟನೆ

ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದಲ್ಲಿ ಶ್ರೀ ಮ. ನಿ. ಪ್ರ. ಲಿಂ. ಜ|| ಶ್ರೀ ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಪ್ರತಿ ಅಮವಾಸ್ಯೆಯ ದಿನ ಜರುಗುವ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ಹಾಗೂ ನೂತನ ಹರಕೆ ತೇರಿನ ಉದ್ಘಾಟನೆ ಕಾರ್ಯಕ್ರಮವು  ದಿನಾಂಕ ೨೫.೧೧.೨೦೧೧ರ ಶುಕ್ರವಾರ ಶ್ರೀ ಮಠದ ಕೆರೆಯ ದಡದಲ್ಲಿ ಸಾಯಂಕಾಲ ೬:೩೦ ಗಂಟೆಗೆ ಜರಗುವುದು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಹಿರಿಯ ವಿದ್ವಾಂಸರಾದ   ಕೋ. ಚನ್ನಬಸಪ್ಪನವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನ   ಅಲ್ಲಂ ಗುರುಬಸವರಾಜ ಅಧ್ಯಕ್ಷರು ವೀರಶೈವ ವಿದ್ಯಾವರ್ಧಕ ಸಂಸ್ಥೆ ಬಳ್ಳಾರಿ ವಹಿಸುವರು. ಇದೇ ಸಮಯದಲ್ಲಿ   ಬಾಪು ಪದ್ಮನಾಭ ಹಾಗೂ   ಯಾನ್‌ಕ್ಲೀನ್ ಯುರೋಪ ಹಾಗೂ ಸಂಗಡಿಗರಿಂದ ಅಂತರಾಷ್ಟ್ರೀಯ ಸಂಗೀತ ಸಮಾಗಮ ಕಾರ್ಯಕ್ರಮ ನೆಡೆಯಲಿದೆ. ಇದೇ ವೇದಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದರು ಕನಕಗಿರಿಯ   ಶಂಕರ ಬಿನ್ನಾಳ ಅವರನ್ನು ಸನ್ಮಾನಿಸಲಿದೆ. ಈ ಕಾರ್ಯಕ್ರಮಕ್ಕೆ ಶ್ರೀ ಗುರುಶಾಂತಪ್ಪ ವೀರಣ್ಣ ಅಗಡಿ ಇವರ ಸ್ಮರಣಾರ್ಥ ಅವರ ಪುತ್ರರಾದ ಭಾ.ಜ.ಪ ಮುಖಂಡರು ಆದ  ಅಂದಣ್ಣ ಅಗಡಿ,  ಇವರು ಭಕ್ತಿ ಸೇವೆಯನ್ನ ಗೈಯಲಿದ್ದಾರೆ. ಸದ್ಭಕ್ತರು ಇ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Leave a Reply

Top