ಲ್ಯಾಪಟಾಪ್ ಕಳ್ಳತನ : ಆರೋಪಿ ಬಂಧನ

 ಎ.ಟಿ.ಎಮ್.ನಿಂದ ಕಳ್ಳತನ ಮಾಡಿದ ರೂ.೧,೪೪,೦೦೦/- , ಬೆಲೆ ಬಾಳುವ ವಿವಿಧ ಕಂಪನಿಯ ಒಟ್ಟು ೦೭ ಲ್ಯಾಪ್ ಟಾಪ್ ಮತ್ತು ಒಂದು ಟ್ಯಾಬನ್ನು ವಶಪಡಿಸಿಕೊಳ್ಳುವಲ್ಲಿ ಕೊಪ್ಪಳ ಪೊಲೀಸ್‌ರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಜಿಲ್ಲೆಯ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಸಂದೀಪ @ ಬನ್ನಿ @ ಆರ್ಯ ತಂದೆ ಮಲ್ಲಿಕಾರ್ಜುನ ಎಂಬ ಆರೋಪಿಯನ್ನು ಕೊಪ್ಪಳ ನಗರದ ಬಸ್ ನಿಲ್ದಾಣದ ಎದುರಿರುವ ವರ್ಣೆಕರ ಕಾಂಪ್ಲೇಕ್ಸ ಹತ್ತಿರ ಸಂಶಯಗೊಂಡ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. 
ಆರೋಪಿತನು ಹುಬ್ಬಳ್ಳಿ ವಿದ್ಯಾನಗರ ಏರಿಯಾದ ಕಾಳಿದಾಸ ನಗರದಲ್ಲಿರುವ ಒಂದು ರೂಮಿನಲ್ಲಿ ಎ.ಟಿ.ಎಮ್ ಕಾರ್ಡನ್ನು ಕಳ್ಳತನ ಮಾಡಿ ಹುಬ್ಬಳ್ಳಿಯ ರೈಲ್ವೇ ಸ್ಟೇಷನ್ ಏರಿಯಾದಲ್ಲಿ ಎ.ಟಿ.ಎಮ್. ಕಾರ್ಡನ್ನು ಉಪಯೋಗಿಸಿ ನಗದು ಹಣ ರೂ.೯೦,೦೦೦/- ಗಳನ್ನು ಡ್ರಾ ಮಾಡಿದ್ದು, ಈ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಹಾಗೂ ಡಿ.ಎಸ್.ಪಿ. ಸುರೇಶ ಬಿ.ಮಸೂತಿ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಪಿ.ಐ. ವಿಜಯ ಬಿರಾದಾರ ಹಾಗೂ ಡಿ.ಎಸ್., ಪಿ.ಎಸ್.ಐ. ಹಾಗೂ ಸಿಬ್ಬಂದಿಯವರಾದ ಸುಭಾಸ, ರೇವಣಸಿದ್ದಪ್ಪ, ಶರಣಪ್ಪ, ಭೀಮಪ್ಪ, ದೇವೇಂದ್ರ, ಚಂದ್ರಪ್ಪ ನಾಯ್ಕ ಈ ಎಲ್ಲಾ ಸಿಬ್ಬಂದಿಗಳು ಕಳ್ಳತನ ಮಾಡಿದ ರೂ.೧,೪೪,೦೦೦/- ಬೆಲೆ ಬಾಳುವ ವಿವಿಧ ಕಂಪನಿಯ ಒಟ್ಟು ೦೭ ಲ್ಯಾಪ್ ಟಾಪ್ ಮತ್ತು ಒಂದು ಟ್ಯಾಬನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾ ಅಣ್ಣಿಗೇರಿ ಅವರು ಶ್ಲಾಘಿಸಿದ್ದಾರೆ. 
Please follow and like us:
error