You are here
Home > Koppal News > ಕೊಪ್ಪಳದಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಪೋಲಿಯೋ ಮುಕ್ತ ಭಾರತ ಸಂಭ್ರಮಾಚರಣೆ

ಕೊಪ್ಪಳದಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಪೋಲಿಯೋ ಮುಕ್ತ ಭಾರತ ಸಂಭ್ರಮಾಚರಣೆ

 ಕೊಪ್ಪಳ: ನಗರದ ರೋಟರಿ ಕ್ಲಬ್ ಆಶ್ರಯದಲ್ಲಿ ಗುರುವಾರ ಪೋಲಿಯೋ ಮುಕ್ತ ಭಾರತ ಸಂಭ್ರಮಾಚರಣೆ ಆಚರಿಸಲಾಯಿತು. 
ಈ ಕಾರ್ಯಕ್ರಮದಲ್ಲಿ  ಕೇಂದ್ರಬಿಂದುವಾಗಿದ್ದ  ರೋಟರಿ ಸಂಸ್ಥೆಯ ಜಿಲ್ಲಾ ಗರ್ವನರ್ ಆರ್. ಗೋಪಿನಾಥ ಕಾರ್ಯಕ್ರಮ ಉದೇಶಿಸಿ ಮಾತನಾಡಿ, ಭಾರತದಲ್ಲಿ ಹೆಚ್ಚು ಅನಕ್ಷರತೆ ತಾಂಡವವಾಡುತ್ತಿದೆ. ಅದನ್ನು ಹೋಗಲಾಡಿಸಲು ರೋಟರಿ ಸದಸ್ಯರು ಕಾರ್ಯೋನ್ಮುಕರಾಗಬೇಕು. ಪ್ರತಿಯೊಬ್ಬರಿಗೂ ಶಿಕ್ಷಣದ ಅರಿವನ್ನು ಮೂಡಿಸುವಲ್ಲಿ ಬದ್ದರಾಗಬೇಕು. ಸಂಸ್ಥೆಗೆ ಹೆಚ್ಚು ಜನರನ್ನು ಸದಸ್ಯರನ್ನಾಗಿ ನೊಂದಾಯಿಸಬೇಕು ಎಂದು ಕರೆ ನೀಡಿದರು. 
ಈ ಸಂದರ್ಭದಲ್ಲಿ ಜಿಲ್ಲಾ ಸೆ

ಷನ್ಸ ನ್ಯಾಯಾದೀಶ ಶ್ರೀಕಾಂತ ದಾ. ಬಲಾದಿ, ರೋಟರಿ ಕ್ಲಬ್ ಅಧ್ಯಕ್ಷೆ ಇಂದಿರಾ ಬಾವಿಕಟ್ಟಿ, ಕಾರ್ಯದರ್ಶಿ ಎ.ಜಿ. ಶರಣಪ್ಪ, ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಮುಂತಾದವರು  ಉಪಸ್ಥಿತರಿದ್ದರು.

ಬೊಮ್ಮಣ್ಣ ಅಕ್ಕಸಾಲಿ ಕಾರ್ಯಕ್ರಮ ನಿರೂಪಿಸಿದರು, ಡಾ.ಮಹಾಂತೇಶ ಮಲ್ಲನಗೌಡರ ಸ್ವಾಗತಿಸಿದರು. 

Leave a Reply

Top