ಅಭಿನವ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳೇ ನಿಜವಾದ ಪವಾಡಪುರುಷರು

 ಭಕ್ತಿ, ಶ್ರದ್ಧೆ, ನಿಷ್ಠೆ  ಹಾಗೂ ಹೃದಯ ವೈಶಾಲ್ಯತೆಯನ್ನು ನೋಡಬೇಕಾದರೆ ಬಯಲು ಸಿಮೆಗೆ ಬರಲೇಬೇಕು. ಇಲ್ಲಿಯವರ ಮನಸ್ಸು ಅಷ್ಟೇ  ವಿಶಾಲ.  ಅದ್ದೂರಿ ಜಾತ್ರೆ ,  ಮಹಾದಾಸೋಹ ಹಾಗೂ ನಿಮ್ಮೆಲ್ಲರ ಮಹಾಭಕ್ತಿಗೆ ನಾನು ಬೆರಗಾಗಿದ್ಧೇನೆ ಎಂದು ಸಂಸ್ಥಾನ  ಗೋಕರ್ಣ, ಶ್ರೀ ರಾಮಚಂದ್ರಾಪುರಮಠ, ಹೊಸನಗರದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು. ಅವರು ಗವಿಮಠದ ಜಾತ್ರಾಮಹೋತ್ಸವದ ೨ ನೇ ದಿನದಲ್ಲಿ ಕೈಲಾಸಮಂಟಪದಲ್ಲಿ ಸಾಯಂಕಾಲ ೬.೩೦ ಕ್ಕೆ ಜರುಗಿದ ಭಕ್ತ ಹಿತ ಚಿಂತನ ಸಭೆಯಲ್ಲಿ ಮಾತನಾಡಿದರು.

ಮುಂದುವರೆದು  ಕೊಪ್ಪಳದ ಗವಿಸಿದ್ಧೇಶ್ವರ ಜೀವಂತ ಸಮಾಧಿಯಾಗಿದ್ದಾರೆ. ಆದರೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಭಕ್ತರ ಹೃದಯ ಎಂಬ ಗುಹೆಯೊಳಗೆ ಶಾಶ್ವತವಾಗಿ ಮನೆಮಾಡಿದ್ದಾರೆ. ಶೂನ್ಯ ವೇಳೆಯಲ್ಲಿ ಉಂಗುರ ಹಾಗೂ ಬೂದಿ ಸೃಷ್ಟಿಸುವಂತವರು ಪವಾಡ ಪುರುಷರಲ್ಲ. ಲಕ್ಷ ಲಕ್ಷ ಭಕ್ತರನ್ನು ಒಂದೆಡೆಗೆ ಸೇರಿಸುವ ಇಂತಹ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳೇ ನಿಜವಾದ ಪವಾಡಪುರುಷರು. ಅನ್ನ, ಅರಿವು ಹಾಗೂ ಆಧ್ಯಾತ್ಮಕ್ಕೆ ಒತ್ತು ಕೊಟ್ಟು ಆ ದಿಸೆಯಲ್ಲಿ ಕಾರ್ಯೋನ್ಮುಖರಾಗಿರುವ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಭಕ್ತರ ಪರ ಕಾಳಜಿ ಮೆಚ್ಚುವಂತಹದ್ದಾಗಿದೆ ಎಂದರು. ರಾಮಕೃಷ್ಣ ವಿವೇಕಾನಂದ ಆಶ್ರಮ, ಗದಗ-ವಿಜಾಪುರದ ಶ್ರೀ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು, ಮುಚಳಾಂಬ ಶ್ರೀ ಶೋ.ಬ್ರ.  ಪ್ರಣವಾನಂದ ಮಹಾಸ್ವಾಮಿಗಳು, ಖಜ್ಜಿಡೋಣಿ ಶ್ರೀಕೃಷ್ಣಾನಂದ ಶಾಸ್ತ್ರಿಗಳು, ಬಳಗಾನೂರಿನ ಶಿವಶಾಂತವೀರ ಶರಣರು ಮಾತನಾಡಿದರು. ವೇದಿಕೆಯ ಮೇಲೆ ಶ್ರೀ ಷ.ಬ್ರ. ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠಬೆದವಟ್ಟಿ , ಶ್ರೀ. ಷ.ಬ್ರ. ನಾಗಭೂಷಣ ಶಿವಾಚಾರ್ಯರ ಮಹಾಸ್ವಾಮಿಗಳು ಹೆಬ್ಬಾಳ, ಶ್ರೀಮ.ನಿ.ಪ್ರ. ಹಿರಿಶಾಂತವೀರ ಮಹಾಸ್ವಾಮಿಗಳು ಹೂವಿನಹಡಗಲಿ  ಶ್ರೀ.ಮ.ನಿ.ಪ್ರ.ಜ ಶಿವಶಂಕರ ಮಹಾಸ್ವಾಮಿಗಳುತಮದಡ್ಡಿ ಹಾಗೂ ನಾಡಿನ ಹರಗುರುಚರಮೂರ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. . ಕೊನೆಗೆ ಕೊಪ್ಪಳದ ಶ್ರೀಗವಿಸಿದ್ಧಶ್ವರ ಮಹಾಸ್ವಾಮಿಗಳಿಂದ ಆಶಿರ್ವಚನ ಜರುಗಿತು. ನಿರೂಪಣೆ ಶ್ರೀ ಚನ್ನಮಲ್ಲ ದೇವರು ಕುಕುನೂರ ನೆರವೇರಿಸಿದರು.

Leave a Reply