ಯುವ ಬರಹಗಾರ ಕವಿಗಳಿಗೆ ಅವಕಾಶ ನೀಡಿಲ್ಲ : ಆರೋಪ

ಯಲಬುರ್ಗಾ ತಾಲೂಕ ಹತ್ತನೇಯ ಕನ್ನಡ ಸಾಹಿತ್ಯ ಸಮೇಳನ
ಯಲಬುರ್ಗಾ: ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ರವಿವಾರ ನಡೆದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಯುವ ಬರಹಗಾರರನ್ನು ಅವಮಾನಿಸಲಾಗಿದೆ ಎಂದು ಯುವ ಬರಹಗಾರರು ಆರೋಪಿಸಿ ಖಂಡನೆ ವ್ಯಕ್ತಪಡಿಸಿದ್ದಾರೆ.
        ಸಮ್ಮೇಳನದ ಕವಿಗೋಷ್ಠಿಯ ನಡೆಯುವ ಸಂದರ್ಬದಲ್ಲಿ ಸಭೆಯಲ್ಲಿ ಕುಳಿತಿದ್ದ ಬರಹಗಾರರನ್ನು ಸಭೆಯಿಂದ ಹೊರ ನಡೆಯುವಂತೆ ಮಾಡಿ ತಿರ್ವವಾಗಿ ಅವಮಾನಿಸಲಾಗಿದ್ದು ಈ ಸಮ್ಮೇಳನವು ಕವಿಗಳಿಗೆ ಆದ್ಯತೆ ನಿಡದೆ ಇರುವ ಸಮ್ಮೇಳನವು ಯಾತಕ್ಕಾಗಿ ಬೇಕು ಕಾವ್ಯ ವಾಚನ ಮಾಡಲು ಉತ್ಸುಕತೆಯಿಂದ ಆಗಮಿಸಿದ ಬರಹಗಾರರು ಅವಕಾಶ ವಂಚಿತರಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ತೆರಳಲು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಕಾರಣವಾಗಿದೆ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಆಸಕ್ತಿಯಿರುವ ಎಲ್ಲಾ ಸಾಹಿತ್ಯ ಆಸಕ್ತರು ಬಂದರು ತರಾತುರಿಯಲ್ಲಿ ಸಮ್ಮೇಳನ ಮುಗಿಸಿ ಕೈತೊಳೆದುಕೊಂಡಿದ್ದಾರೆ ಎಂದು ಬರಹಗಾರರಾದ ಮಾರುತೇಶ ಹಟ್ಟಿ, ಮಲ್ಲೇಶ ಗಂಗಣ್ಣವರ, ಕನಕರಾಯ, ಅಕ್ಕಮಹಾದೇವಿ ಮನ್ನಾಪುರ, ಬಸವರಾಜ ಮ್ಯಾಗೇರಿ, ಶರಣು ಎ ಎಂ ಅವರು ಆರೋಪಿಸಿದ್ದಾರೆ. 
Please follow and like us:
error