You are here
Home > Koppal News > ಹಂಪಿಯಲ್ಲಿ ಚಿರತೆ ಬೋನಿಗೆ

ಹಂಪಿಯಲ್ಲಿ ಚಿರತೆ ಬೋನಿಗೆ

ಹೊಸಪೇಟೆ-ಹಂಪಿಯಲ್ಲಿ ಅರಣ್ಯ ಇಲಾಖೆ ಇಟ್ಟಿರುವ ಬೋನಿಗೆ ಶುಕ್ರವಾರ ಸಂಜೆ ಚಿರತೆಯೊಂದು ಸಿಕ್ಕು ಬಿದ್ದಿದೆ.
ಕಡ್ಡಿರಾಂಪುರದಿಂದ ಹಂಪಿಗೆ ಹೋಗುವ ದಾರಿಯಲ್ಲಿ ಬರುವ ರಸ್ತೆಯಲ್ಲಿ ಹಂಪಿ ಉತ್ಸವದ ಕುಸ್ತಿ ಆಖಾಡದ ಬಳಿ ಈ ಚಿರತೆ ಸಿಕ್ಕು ಬಿದ್ದಿದೆ. ಹಂಪಿ ಉತ್ಸವ ಸಂದರ್ಭದಲ್ಲಿ ಅಲ್ಲಿಯೇ ಸಮೀಪದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದರ ಬಗ್ಗೆ ಛಾಯಚಿತ್ರದೊಂದಿಗೆ ವರದಿಗಳು ಪ್ರಸಾರವಾಗಿದ್ದವು,  ಈ ಪ್ರದೇಶದಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ  ರೈತರು, ಪ್ರವಾಸಿಗರು, ಸ್ಥಳೀಯರು ಕ್ರೂರ ಪ್ರಾಣಿಯಿಂದ ಭsಯಭೀತರಾಗಿದ್ದರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಅರಣ್ಯ ಇಲಾಖೆಯು ಹಂಪಿ ಸುತ್ತಮುತ್ತ ಚಿರತೆ ಸಂಚರಿಸುವ  ಸಂಶಯಾಸ್ಪದ ಜಾಗಗಳಲ್ಲಿ ಬೋನು ಇರಿಸಿ ಪತ್ತೆಗೆ ಕಾದಿದ್ದರು. ಚಿರತೆ ಪತ್ತೆಯಾಗುವ ಮೂಲಕ ಈ ಪ್ರದೇಶ ಮಾಗಾಣಿಯಲ್ಲಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಪ್ರವಾಸಿಗರು ಕೂಡಾ ಈಗ ನೆಮ್ಮದಿಯಿಂದ ಹಂಪಿ ವೀಕ್ಷಣೆ ನಡೆಸುವಂತಾಗಿದೆ.

Leave a Reply

Top