ಬೃಹತ್ ಮೆರವಣಿಗೆಯೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಗವಿಸಿದ್ದಪ್ಪ ಕರಡಿ ನಾಮಪತ್ರ ಸಲ್ಲಿಕೆ.

ಕೊಪ್ಪಳ-05- ಲೇಬಗೇರಿ ಜಿಲ್ಲಾ ಪಂಚಾಯತ ಸಾಮನ್ಯ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಗವಿಸಿದ್ದಪ್ಪ ಸಂಗಣ್ಣ ಕರಡಿ ಅವರು ಶುಕ್ರವಾರದಂದು ಕ್ಷೇತ್ರದ ಜನತೆ, ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಬಿಜೆಪಿ ಕಛೇರಿಯಿಂದ ಬೃಹತ್ ಮೆರೆವಣಿಗೆಯೊಂದಿಗೆ ತಹಶೀಲ್ ಕಛೇರಿಗೆ ಆಗಮಿಸಿ ಚುನಾವಣೆ ಅಧಿಕಾರಿಗೆ ನಾಮ ಪತ್ರ ಸಲ್ಲಿಸಿದರು.
  ಈ ಸಂದರ್ಭದಲ್ಲಿ ಅಭ್ಯರ್ಥಿ ಗವಿಸಿದ್ದಪ್ಪ ಕರಡಿ ಮಾತನಾಡಿ ಲೇಬಗೇರಿ ಜಿಲ್ಲಾ ಪಂಚಾಯತ್ ಸಮಗ್ರ ಅಭಿವೃದ್ದಿಗಾಗಿ ಈ ಬಾರಿ ಬಿಜೆಪಿ ಪಕ್ಷವನ್ನು ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
  ಈ ಸಂದರ್ಭದಲ್ಲಿ, ಬಿಜೆಪಿ ಮುಖಂಡರಾದ ಅಪ್ಪಣ್ಣ ಪದಕಿ, ಸಂಗಪ್ಪ ವಕ್ಕಳದ, ಸಿದ್ದಲಿಂಗಯ್ಯ ಹಿರೇಮಠ, ಮಹಾಂತೇಶ ಮೈನಳ್ಳಿ, ಅಮರೇಶ ಕರಡಿ, ಮಂಜುನಾಥ ಹಂದ್ರಾಳ, ಮಂಜುನಾಥ ಅಂಗಡಿ, ಸೈಯದ್ ನಾಶೀರುದ್ದೀನ್, ಗುಂಡಣ್ಣ ಕರಡಿ, ವೀರಣ್ಣ ಬಳಿಗಾರ, ದೇವಪ್ಪ ಓಜನಹಳ್ಳಿ ರಮೇಶ ಚೌಡ್ಕಿ, ಮಂಜುನಾಥ ಹಳ್ಳಿಕೇರಿ, ದೇವರಾಜ ಹಾಲಸಮುದ್ರ, ಚಂದ್ರಶೇಖರ ಹಲಗೇರಿ, ಸೇರಿದಂತೆ ಕ್ಷೇತ್ರದ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಗ್ರಾಮದ ಮುಖಂಡರು, ಕಾರ್ಯಕರ್ತರು ಮಹಿಳೆಯರು ಇನ್ನೂ ಅನೇಕರು ಹಾಜರಿದ್ದರು.

Please follow and like us:
error