ಅ.೨೪ ರಂದು ಮೋರನಾಳದಲ್ಲಿ ಸ್ಟೇಶನ್ ಮಾಸ್ತರ ಮೂಡಲಪಾಯದ ಸಣ್ಣಾಟ

 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ತಾಯಮ್ಮದೇವಿ ಸಣ್ಣಾಟ ಸಂಘದಿಂದ ಅ.೨೪ ರಂದು ಮೋರನಾಳ ಗ್ರಾಮದ ಬಯಲು ಜಾಗೆಯಲ್ಲಿ ಸ್ಟೇಶನ್ ಮಾಸ್ತರ ಎಂಬ ಐತಿಹಾಸಿಕ ಮೂಡಲಪಾಯದ ಸಣ್ಣಾಟವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ನೆರವೇರಿಸಲಿದ್ದಾರೆ. ಕೊಪ್ಪಳ ತಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ವಿಜಯಕುಮಾರ ಹಾಗೂ ಉಪಾಧ್ಯಕ್ಷೆ ಮುದ್ದಮ್ಮ ರಂಗಪ್ಪ ಕರಡಿ ಅವರು ಜ್ಯೋತಿ ಬೆಳಗಿಸುವರು. ಬೆಟಗೇರಿ ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಅಡಿವೆಪ್ಪ ಕಲ್ಲಳ್ಳಿ ಅವರು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಸರ್ವ ಸದಸ್ಯರು, ಹಿರಿಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು.

Leave a Reply