ಕೊಪ್ಪಳ ರೀಯಲ್ ಎಸ್ಟೇಟ್ ಡೆವ್ಹಲ್ಪರ‍್ಸ್ ಅಸೂಸಿಯನ್ ರಿಂದ ಜಾಫರ್ ತಟ್ಟಿಯವರಿಗೆ ಸನ್ಮಾನ

ಕೊಪ್ಪಳ: ಇತ್ತೀಚಿಗೆ ನಗರದ T.A.P.C.M.S.  ಸಂಸ್ಥೆಗೆ ನಡೆದ ನಿರ್ಧೇ ಶಕರ ಚುನಾವಣೆಯಲ್ಲಿ ಉತ್ಸಾಹಿ ತರುಣರು, ಸಾಮಾಜಿಕ ಕಾರ್ಯಕರ್ತರಾದ ಜಾಫರ್ ತಟ್ಟಿ ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಯನ್ನು ಆತ್ಮೀಯವಾಗಿ ಸ್ವಾಗತಿಸಿ ಅವರಿಗೆ ರೀಯಲ್ ಎಸ್ಟೇಟ್ ಡೆವ್ಹಲ್ಪರ‍್ಸ್ ಅಸೂಸಿಯನ್ ರವರು ಸನ್ಮಾನ ಂಆಡಿದರು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಕರಿಯಣ್ಣ ಸಂಗಟಿ, ಹಾಗೂ ಅರ್ಜುನಸಾ ಕಾಟವಾ ರವರು ಶಾಲು ಹೊದಿಸಿ ಸನ್ಮಾನ ಮಾಡಿದರು.
        ಈ ಸಂದರ್ಭದಲ್ಲಿ ಅವರ ಆಯ್ಕೆಗೆ ಕಾರಣಿಭೂತರಾದ ಮಾಜಿ ಶಾಸಕ ಮತ್ತು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ ರವರನ್ನು ಶ್ಲಾಘಿಸಿ, ಗುಣಗಾನ ಮಾಡಿದರು ಈ ಸಂದರ್ಭದಲ್ಲಿ ಗೋನಾಳ್, ಪತ್ರಕರ್ತರು, ನಾಗರಾಜ ಬಳ್ಳಾರಿ, ರವಿ ಬುಡ್ಡೂಡಿ, ಮಹಿಬೂಬ ಮಚ್ಚಿ, ಕಾಟನ್ ಪಾಶಾ, ಆಸೀಫ್ ಪಲ್ಟನ್, ಯಂಕನಗೌಡ್ರು ಹೊರತಟ್ನಾಳ, ಶಬ್ಬೀರ್ ಶಿದ್ದಖಿ, ವೆಂಕಟೇಶ ಹಾಲವರ್ತಿ ಹಾಗೂ ಸಂಘದ ಪಧಾದಿಕಾರಿಗಳು ಹಾಗೂ ಇನ್ನಿತರರು ಹರ್ಷ ವ್ಯಕ್ತಪಡಿಸಿದರು.
Please follow and like us:
error