ಮನೆ ಫಲಾನುಭವಿಗಳ ಆಯ್ಕೆ : ಮಾ.೧೦ ರಂದು ಅರ್ಜಿದಾರರಿಗೆ ಸಭೆ

  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಐ.ಎಚ್.ಎಸ್.ಡಿ.ಪಿ. ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ೨೪೯ ಮನೆಗಳ ಹಂಚಿಕೆಗೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಮಾ.೧೦ ರ ಭಾನುವಾರ ಬೆಳಿಗ್ಗೆ ೧೧.೦೦ ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಅರ್ಜಿದಾರರ ಸಭೆ ನಡೆಯಲಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಐ.ಎಚ್.ಎಸ್.ಡಿ.ಪಿ. ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ೨೪೯ ಮನೆಗಳ ಪೈಕಿ ಈಗಾಗಲೇ ೧೪೫ ಮನೆಗಳಿಗೆ ಫಲಾನುಭವಿಗಳನ್ನು ಮೊದಲನೇ ಹಂತದಲ್ಲಿ ಆಯ್ಕೆ ಮಾಡಲಾಗಿರುತ್ತದೆ. ಬಾಕಿ ಉಳಿದಿರುವ ೧೦೪ ಮನೆಗಳನ್ನು ಹಂಚಿಕೆ ಮಾಡಲು ಎರಡನೇ ಹಂತದಲ್ಲಿ ಕಳೆದ ೨೦೧೨ ರ ನವೆಂಬರ್ ೩೦ ರಂದು ಕೊಪ್ಪಳ ನಗರ ನಿವಾಸಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಕಳೆದ ೨೦೧೨ ರ ಡಿಸೆಂಬರ್ ೦೩ ರಿಂದ ೧೮ ರವರೆಗೆ ಅರ್ಜಿಯನ್ನು ವಿತರಿಸಲಾಗಿದ್ದು,  ಜ. ೦೩ ರವರೆಗೆ  ಒಟ್ಟು ೪೦೦ ಜನರಿಂದ ಅರ್ಜಿ ಸಲ್ಲಿಕೆಯಾಗಿದೆ.  ಈ ೪೦೦ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು ಅದರಲ್ಲಿ ೩೮೮ ಜನ ಅರ್ಹತೆಯುಳ್ಳ ಅರ್ಜಿದಾರರಾಗಿರುತ್ತಾರೆ. ಹಾಗೂ ಉಳಿದ ೧೨ ಅರ್ಜಿದಾರರು ಅಪೂರ್ಣ ದಾಖಲೆಗಳನ್ನು ಸಲ್ಲಿಸಿರುವುದರಿಂದ ಅನರ್ಹತೆ ಹೊಂದಿದ್ದಾರೆ.   ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳನ್ನು ಮನೆ ಹಂಚಿಕೆಗೆ ಆಯ್ಕೆ ಮಾಡಲು ಇದೀಗ ಮಾ. ೧೦ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸಾರ್ವಜನಿಕ ಅಹವಾಲು ಏರ್ಪಡಿಸಲಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ವಹಿಸುವರು.  ಈ ಸಭೆಗೆ ಅರ್ಜಿದಾರರನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಉಪವಿಭಾಗ ಗದಗ ಇವರನ್ನು ಸಂಪರ್ಕಿಸಬಹುದಾಗಿದೆ  
Please follow and like us:
error