You are here
Home > Koppal News > ಯಶಸ್ವಿಯಾಗಿ ಜರುಗಿದ ಉಚಿತ ಖತ್ನಾ ಕಾರ್ಯಕ್ರಮ

ಯಶಸ್ವಿಯಾಗಿ ಜರುಗಿದ ಉಚಿತ ಖತ್ನಾ ಕಾರ್ಯಕ್ರಮ

ಹೊಸಪೇಟೆ: ಮಿಲಾದ್ ಕಮಿಟಿಯಿಂದ  ನಗರದ ಚಿತ್ತವಾಡ್ಗಿಯ ಶಾದಿಮಹಲ್‌ನಲ್ಲಿ ಶನಿವಾರ ೧೫ ನೇ ವರ್ಷದ  ಉಚಿತ ಖತ್ನಾ ಕಾರ್ಯಕ್ರಮ ನಡೆಯಿತು.  
ನಗರದ ಚಿತ್ತವಾಡ್ಗಿಯ ಶಾದಿಮಹಲ್‌ನಲ್ಲಿ ಮಿಲಾದ್ ಕಮಿಟಿಯಿಂದ ೧೫ ನೇ ವರ್ಷದ ಉಚಿತ ಖತ್ನ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿ  ಸಮಾಜ ಸೇವಕ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಭಾಗವಹಿಸಿ ಮಾತನಾಡಿ, ಇಸ್ಲಾಂ  ಧರ್ಮದ ಆಚರಣೆಯಂತೆ ಪ್ರತಿಯೊಬ್ಬ ಮುಸ್ಲಿಂ ಪ್ರಜೆಯು ಖತ್ನಾ ಮಾಡಿಸಿಕೊಳ್ಳುವುದು ಕಡ್ಡಾಯ ಆಚರಣೆಯಾಗಿದ್ದು, ಮಿಲಾದ ಕಮಿಟಿಯವರು ಚಿತ್ತವಾಡ್ಗಿಯ ಭಾಗದಲ್ಲಿ ಸುಮಾರು ೧೫ ವರ್ಷಗಳಿಂದ ಬಡ ಮುಸ್ಲಿಂ ಮಕ್ಕಳಿಗೆ ವಿದ್ಯಾರ್ಥಿ ವೇತನದ ಜೊತೆಗೆ ಉಚಿತ ಖತ್ನಾ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗುತ್ತಿದ್ದು,  ಈ ಬಾರಿ ೭೫ ಮಕ್ಕಳಿಗೆ ಉಚಿತ Sತ್ನಾ ಮಾಡಿಸುತ್ತಿದ್ದು ಇಂತಹ ಸೇವೆಯಿಂದ ಅನೇಕ ಬಡ ಮುಸ್ಲಿಂ ಕುಟುಂಬಗಳಿಗೆ ಅರ್ಥಿಕವಾಗಿ ನೆರವಾಗಲಿದ್ದು , ಇಂತಹ ಕಾರ್ಯಕ್ರಮಕ್ಕೆ ಸದಾವುಕಾಲ ಬೆಂಬಲಿಸುವುದಾಗಿ ಹೇಳಿದರು. 
ಮಿಲಾದ್ ಕಮಿಟಿಯ ಅಧ್ಯಕ್ಷ ಮೆಹಮೂದ್ ಮಾತನಾಡಿ,  ಪ್ರತಿ ವರ್ಷದಂತೆ ಈ ಸಲವು ಉಚಿತ ಖತ್ನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ೭೫ ಮಕ್ಕಳಿಗೆ ಖತ್ನಾ ಮಾಡಿಸುವ ಮೂಲಕ ಮಕ್ಕಳಿಗೆ ಆಹಾರ ಧಾನ್ಯಗಳಾದ ಗೋಧಿ, ಸಕ್ಕರೆ,ತುಪ್ಪ, ಮೊಟ್ಟೆಗಳನ್ನು ವಿತರಿಸಲಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಗರಸಭೆ ಸದಸ್ಯ ಅಬ್ದುಲ್ ರೌಫ್, ರೈತ ಮುಖಂಡ ಖಾಜಾ ಹುಸೇನ್ ನಿಯಾಜಿ, ಚಿತ್ತವಾಡ್ಗಿಯ ಮಿಲಾದ್ ಕಮಿಟಿಯ ಉಪಾದ್ಯಕ್ಷ ಜಿ. ಹೊನ್ನೂರ ಸಾಬ್ ನಿಯಾಜಿ, ಕಾರ್ಯದರ್ಶಿ ನಾಸೀರ್ ಅಲಿ, ಸದಸ್ಯರಾದ ಜಾಕೀರ್, ಚಂದವಲಿ, ಇಬ್ರಾಹಿಂ, ಜೈರುದ್ದಿನ್, ಇತರರು ಸಮಾಜ ಮುಂಖಡರು ಹಾಜರಿದ್ದರು. 

Leave a Reply

Top