fbpx

ಗುರುವಂದನಾ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿಂದು ವಾಣಿಜ್ಯ ವಿದ್ಯಾರ್ಥಿಗಳು ವಾಣಿಜ್ಯವೇದಿಕೆಯಿಂದ ಗುರುವಂದನಾ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ನೂತನ ಸಿಂಡಿಕೇಟ್ ಸದಸ್ಯರು ಹಾಗೂ ಶ್ರೀಗವಿಸಿದ್ಧೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯರಾದ  ಎಸ್.ಎಲ್.ಮಾಲಿಪಾಟೀಲ ಮಾತನಾಡಿ ಸತತ ಓದು, ಪರಿಶ್ರಮ ಮೈಗೂಡಿಸಿಕೊಂಡು ಅಧ್ಯಶೀಲನರಾಗುವ ಅಗತ್ಯವಿದೆಯೆಂದರು. ಅತಿಥಿಗಳಾದ ಸಂಡೂರಿನ ಪ್ರೊ.ಅರುಣ ಕರಮರಕರ್ ಆಗಮಿಸಿ ಮಾತನಾಡಿ ಆಧುನಿಕ ಯುಗದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಆ ದಿಸೆಯಲ್ಲಿ ಪ್ರಯತ್ನ ಶೀಲರಾಗಬೇಕೆಂದು ಮನವರಿಕೆ ಮಾಡಿದರು.

                   ಇದೇ ಸಂದರ್ಭದಲ್ಲಿ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರಾದ ಶ್ರೀಗವಿಸಿದ್ಧೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್.ಎಲ್.ಮಾಲಿಪಾಟೀಲ ಅವರಿಗೆ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯರಾದ ಶ್ರೀ ತಿಮ್ಮಾರೆಡ್ಡಿ ಮೇಟಿ ಮಾತನಾಡಿ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳಾದ ತಾವುಗಳು ಇಂದಿನಿಂದ ಶ್ರಮ ವಹಿಸಿ ಓದಿ ಉತ್ತಮ ಅಂಕಗಳನ್ನು ಪಡೆದುಕೊಳ್ಳುವಲ್ಲಿ ಪ್ರಯತ್ನ ಶೀಲರಾಗಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ವೀರಣ್ಣ ಸಜ್ಜನರ, ರವಿಹಿರೇಮಠ,ನಟರಾಜ ಪಾಟೀಲ, ದಾರುಕಾಸ್ವಾಮಿ, ಡಾ.ಡಿ.ಎಚ್.ನಾಯಕ್, ಪ್ರಭುರಾಜ ನಾಯಕ್, ಸುರೇಶಕುಮಾರ, ಮಹೇಶಮಮದಾಪುರ. ರಾಘವೇಂದ್ರಾಚಾರ್, ಗಾಯತ್ರಿ ಭಾವಿಕಟ್ಟಿ, ಶುಭಾ, ಶೋಭಾ ಕೆ.ಎಸ್, ಬೋದಕೇತರಾದ ಆದಿಬಾಬು, ಶಾರದಾ, ಸೌಮ್ಯ, ಶಾಂತಪ್ಪ, ವಿನೋದ.ಮನೋಜ ,ತಾರಾಮತಿ ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!