ಎಪ್ರಿಲ್ ೨೦ ರ ವರೆಗೆ ಕಾಲುವೆಗಳಿಗೆ ನೀರು ಬಿಡಲು ಆಗ್ರಹ

ಚುನಾವಣೆಯ ಹಿನ್ನೆಲೆಯಲ್ಲಿ ಈ ಭಾಗದ ರೈತರನ್ನು ಮರೆತ ಸರ್ಕಾರ: ಶಿವರಾಮಗೌಡ
ಎಪ್ರಿಲ್ ೨೦ರ ವರೆಗೆ ತುಂಗಭದ್ರಾ ಕಾಲುವೆಗಳಿಗೆ ನೀರು ಹರಿಸಲು ತುರ್ತು ಕ್ರಮಕೈಗೊಳ್ಳಬೇಕು ಎಂದು ಮಾಜಿ ಲೋಕಸಭಾ ಸದಸ್ಯರಾದ ಶಿವರಾಮಗೌಡರವರು ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲ ಹಾಗೂ ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರನ್ನು ಒತ್ತಾಯಿಸಿರುತ್ತಾರೆ.
ರಾಜ್ಯ ಸರ್ಕಾರವು ಗ್ರಾಮ ಪಂಚಾಯತ ಚುನಾವಣೆಗೆ ಮಹತ್ವ ನೀಡಿ ರೈತರ ಹಿತ ಕಡೆಗಣಿಸಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗೆ ಮಾರ್ಚ ೩೧ ರ ವರೆಗೆ ಮಾತ್ರ ನೀರು ಬಿಡುವುದರಿಂದ, ಭತ್ತದ ಬೆಳೆಯು ಮಾರ್ಚ ತಿಂಗಳಾಂತ್ಯದ ಸಮಯದಲ್ಲಿ ಹಾಲು ತುಂಬುವ ಹಂತದಲ್ಲಿರುತ್ತದೆ. ಏಪ್ರಿಲ್ ೨೦ ರವರೆಗೆ ನೀರು ಬಿಟ್ಟರೆ ಮಾತ್ರ ಭತ್ತದ ಬೆಳೆಯು ಸಂಪೂರ್ಣವಾಗಿ ರೈತರ ಕೈ ಸೇರುತ್ತದೆ. ಇಲ್ಲದಿದ್ದಲ್ಲಿ ಭತ್ತದ ಬೆಳೆಯು ಸಂಪೂರ್ಣ ಜೊಳ್ಳಾಗಿ ರೈತರಿಗೆ ನಷ್ಟವಾಗುತ್ತದೆ.
ಈಗಾಗಲೇ ಪ್ರತಿ ಎಕರೆಗೆ ೨೫ ರಿಂದ ೩೦ ಸಾವಿರ ರೂಪಾಯಿವರೆಗೆ ರೈತರು ಸಾಲ ಮಾಡಿ ಭತ್ತದ ನಾಟಿ ಮಾಡಿದ್ದು, ಐಸಿಸಿ ನಿರ್ಣಯದಂತೆ ಕೇವಲ ಮಾರ್ಚ್ ೩೧ ರವರೆಗೆ ನೀರು ಹರಿಸುವುದರಿಂದ ಶೇಕಡಾ ೪೦ ರಷ್ಟು ಮಾತ್ರ ಬೆಳೆಯು ರೈತರ ಕೈಸೇರಲಿದ್ದು, ಎಪ್ರಿಲ್ ೨೦ ರ ವರೆಗೆ ನೀರು ಬಿಡದಿದ್ದರೆ ಇನ್ನುಳಿದ ಶೇ. ೬೦ ರಷ್ಟು ಭತ್ತದ ಬೆಳೆ ನಷ್ಟವಾಗಲಿದೆ ಎನ್ನುವ ಅಂಶವನ್ನು ದೂರವಾಣಿ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಒಂದು ವಾರ ಮಾತ್ರ ವಿಸ್ತರಿಸುವ ಭರವಸೆ ನೀಡಿದ್ದಾರೆ.
ತುಂಗಭದ್ರಾ ನಾಲೆಗಳಿಗೆ ಎಪ್ರಿಲ್ ೨೦ ರ ವರೆಗೆ ನೀರು ಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮಾಜಿ ಸಂಸದರಾದ ಶಿವರಾಮಗೌಡರು ಒತ್ತಾಯಿಸಿದ್ದಾರೆ.
Please follow and like us:
error

Related posts

Leave a Comment

ಸಾವಿನಲ್ಲೂ ಮಾನವತೆ ಮೆರೆದ ಕವಿತಾ ಕರ್ಕರೆ

ಉಗ್ರಗಾಮಿಗಳ ದಾಳಿಗೆ ಬಲಿಯಾದ ಹೇಮಂತ ಕರ್ಕರೆ ಪತ್ನಿ ಕವಿತಾ ಕರ್ಕರೆ ತಮ್ಮ ಸಾವಿನಲ್ಲೂ ಮಾನವತೆ ಮೆರೆದಿದ್ದಾರೆ. ಮೂವರಿಗೆ ಜೀವ ದಾನ ಮಾಡಿದ್ದಾರೆ. ಬ್ರೈನ್ ಹ್ಯಾಮರೇಜ್ ನಿಂದ ಸಾವನ್ನಪ್ಪಿದ ಕವಿತಾ ಕರ್ಕರೆ ಮೂವರು ಮಕ್ಕಳನ್ನು ಅಗಲಿದ್ದಾರೆ.  ಮೆದುಳಿನ ರಕ್ತಸ್ರಾವಕ್ಕೆ  ಬಲಿಯಾದ ಕವಿತಾ ಶನಿವಾರದಂದು ಆಸ್ಪತ್ರೆಗೆ ದಾಖಲಾಗಿದ್ದರು.  ಅವರ ಮೆದುಳು ಸಂಪೂರ್ಣವಾಗಿ ನಿಷ್ಕ್ರೀಯಗೊಂಡಿತ್ತು.  ಅವರ ಅಂಗಾಗಳ ದಾನಕ್ಕೆ  ಮಕ್ಕಳು ನಿರ್ದರಿಸಿದರು. ಕಳೆದ ಒಂದು ದಶಕದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ  48 ವರ್ಷ ವಯಸ್ಸಿನ ವ್ಯಕ್ತಿಗೆ ಹಾಗೂ ಕಳೆದ 7 ವರ್ಷಗಳಿಂದ ಕಿಡ್ನಿ
Please follow and like us:
error

Related posts

Leave a Comment