ಅಧಿಕಾರ ಕಬ್ಬಿಣದ ಕಡಲೆ-ಅಧ್ಯಕ್ಷೆ ಶ್ರೀಮತಿ ಬಸಮ್ಮ ಹಳ್ಳಗುಡಿ

ಕೊಪ್ಪಳ,೨೭:ಫೆ ನಗರಸಭೆಯ ೨ನೇ ಅವದಿಯ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಹಳ್ಳಿಗುಡಿ ರವರು ಮಾತನಾಡಿ ನಗರಸಭೆ ಅದ್ಯಕ್ಷ ಸ್ಥಾನವು ಕಬ್ಬಿಣದ ಕಡಲೆಇದ್ದಂತೆ ನಗರದ ಜನತೆ ನಮ್ಮ ಮೇಲೆ ಅನೇಕ ನೀರಿಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕೊಪ್ಪಳ ನಗರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಹಾಗೂ ನಗರಸಭೆ ಎಲ್ಲಾ ಸದಸ್ಯರಜೋತೆಗೆ ಕೈಜೋಡಿಸಿ ನಗರದ ಎಲ್ಲಾ ಕಾರ್ಯಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೇನು. ನಮಗೆ ಲಭಿಸಿರುವ ಅವದಿಯಲ್ಲಿ ನೀರು,ರಸ್ತೆ, ಚರಂಡಿ, ಹಾಗೂ ಉಧ್ಯಾನವನಗಳ ಅಭಿವೃದ್ಧಿಮಾಡುವೇನು. ನಗರಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಿ ತಕ್ಷಣವೆ ಅಧಿಕಾರಿಗಳ ಜೋತೆಗೆ ಚರ್ಚಿಸಿ ಶ್ರೀಸಾಮಾನ್ಯರ ಸಮಸ್ಯೆ ಬಗೆಹರಿಸಲಾಗುವುದು. ನಗರಸಭೆಯಿಂದ ಬರುವ ಯೋಜನೆಗಳು ವಿವಿಧ ವರ್ಗಗಳ ಸಾಮಾನ್ಯ ಜನತೆಗೆ ತಲುಪಿಸಲು ಶ್ರಮಿಸುವೇನು. ಎಲ್ಲಾ ವಾರ್ಡಗಳ ಸದಸ್ಯರ ಸಲಹೆಗಳನ್ನು ಪರಿಗಣಿಸಿ ಅವರನ್ನು ವಿಸ್ವಾಸಕ್ಕೆ ತಗೆದುಕೊಂಡು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಮಾಡಿ ನಗರದ ಸೌಂದರ್ಯಕರಣಕ್ಕೆ ಹೆಚ್ಚಿನ ಒತ್ತು ಕೊಡುವೇನೆಂದು ಹಾಗೂ ಅನುದಾನದ ಸದ್ಬಳಕೆ ಎಲ್ಲಾ ವಾರ್ಡಗಳಿಗೆ ಸರಿಸಮಾನವಾಗಿ ಹಂಚುವೆನೆಂದು ಹೇಳಿದರು. 
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಬಾಳಪ್ಪ ಬಾರಕೇರ, ನಗರಸಭೆ ಸದಸ್ಯರಾದ ಸಲೀಂಸಾಬ್, ಮುತ್ತುರಾಜ ಕುಷ್ಠಗಿ, ಮೌಲಾಹುಸ್ಸೇನ್ ಜಮೇದಾರ, ಶ್ರೀಮತಿ ರೇಣುಕಾ ಪೂಜಾರ, ಶ್ರೀಮತಿ ಸರಿತಾ ಸುಧಾಕರ, ಪ್ರಾಣೇಶ ಮಾದಿನೂರು, ಅಪ್ಪಣ್ಣ ಪದಕಿ, ಶರಣಪ್ಪ ಚಂದನಕಟ್ಟಿ, ಚನ್ನಪ್ಪ, ಗುತ್ತಿಗೆದಾರರಾದ ಕೃಷ್ಣ ಇಟ್ಟಂಗಿ, ನಗರಸಭೆ ಅಧಿಕಾರಿಗಳು ಇನ್ನೂ ಅನೇಕ ನಗರಸಭೆ ಸದಸ್ಯರು ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error