ಬಾಲಮಂದಿರ ಸೇರಿದ ಕುರಿ ಕಾಯುವ ಮಕ್ಕಳು.

ಮಕ್ಕಳ ರಕ್ಷಣಾ ಯೋಜನೆ ತಂಡ ದಿನಾಂಕ ೨೬-೦೭-೨೦೧೧ ರಂದು ಕೊಪ್ಪಳ ನಗರದಲ್ಲಿ ಕುರಿ ಕಾಯುತ್ತಿದ್ದ ಹೊರ ಜಿಲ್ಲೆಯ ೨ ಮಕ್ಕಳನ್ನು ರಕ್ಷಿಸಿ ಬಾಲಕರ ಬಾಲಮಂದಿರಕ್ಕೆ ಸೇರಿಸಿರುತ್ತಾರೆ. ೯ ವರ್ಷದ ಜೋಗಿ ತಂದೆ ಶೇಕಪ್ಪ ತಾಯಿ ಶಕೀಲ ಬಿಂದೂರು, ಹುಬ್ಬಳಿ ಎಂಬ ಊರಿನ ಇವನು ಮಲ್ಲಪ್ಪ ಎಂಬ ಮಾಲಿಕರ ಬಳಿ ವರ್ಷಕ್ಕೆ ೫ ಕುರಿಗಳಿಗಾಗಿ ಕೆಲಸಕ್ಕಿದ್ದನು. ಅದೇರೀತಿ ಹಜರತ್‌ಆಲಿ ತಂದೆ ಮಕದುಂಬ್ ಸಾಬ್ ಸಿಗ್ಗಾಂ, ಹಾವೇರಿ ಎಂಬ ಊರಿನ ಸುರೇಶ ಎಂಬ ಮಾಲಿಕನ ಬಳಿ ಕೆಲಸಕ್ಕಿದ್ದನು.
ಈ ಇಬ್ಬರು ಮಕ್ಕಳನ್ನು ಕೆಲಸದಿಂದ ಬಿಡಿಸಿ ಮಾಲಿಕರ ಮೇಲೆ ಬಾಲನ್ಯಾಯ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಮಕ್ಕಳನ್ನು ಹಾಜರುಪಡಿಸಲಾಯಿತು.ಯೋಜನೆಯ ತಂಡದಲ್ಲಿ ತರಬೇತಿ ಸಂಯೋಜಕರಾದ ಹರೀಶ್ ಜೋಗಿಯವರು, ಸಹಾಯಕ ತರಬೇತಿ ಸಂಯೋಜಕರಾದ ಶಿವರಾಮ ಅವರು, ಪೊಲೀಸ್ ತರಬೇತುದಾರರಾದ ಉಸ್ಮಾನ್ ಉಲ್ಲಾಖಾನ್ ಅವರು ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರಾಜಶೇಖರವರು ಉಪಸ್ಥಿತರಿದ್ದರು.

Please follow and like us:
error