ಮದ್ಯಮಾಫೀಯಾ ದರೋಡೆ ನಿಲ್ಲಿಸಲು ಕ್ರಮ.

ಗಂಗಾವತಿ-11- ತಾಲೂಕಿನಲ್ಲಿ ಮಧ್ಯಮಾಫಿಯಾ ಬಡವರನ್ನು ಲೂಟಿ ಮಾಡುತ್ತಾ ಕೋಟ್ಯಾಂತರ ರೂಪಾಯಿ ಅಕ್ರಮವಾಗಿ ಸಂಪಾದನೆ ಮಾಡುತ್ತಾ ಬಂದಿವೆ. ಮಧ್ಯಮಾಫಿಯಾದ ಈ ದರೋಡೆಯನ್ನು ತಡೆಯಲು ಸರಕಾರ ಎಂ.ಎಸ್.ಐ.ಎಲ್. ಸಂಸ್ಥೆಯಿಂದ ಸಿ.ಎಲ್.-೨ ಅಂಗಡಿಗಳನ್ನು ತೆರೆದು ನಿಗದಿತ ಮಾರಾಟ ಬೆಲೆಗೆ ಮದ್ಯವನ್ನು ಗ್ರಾಹಕರಿಗೆ ಮಾರಲು ಅನುಕೂಲ ಮಾಡಿದೆ. ದುರಂತವೆನೆಂದರೆ ಮದ್ಯಮಾಫಿಯಾದ ಕುತಂತ್ರದಿಂದ ತಾಲೂಕಿಗೆ ಹೊಸ ಸರ್ಕಾರಿ ಮಧ್ಯದಂಗಡಿಗಳು ಬರದಂತೆ ನೋಡಿಕೊಳ್ಳುತ್ತಾ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಎಂ.ಎಸ್.ಐ.ಎಲ್. ಅಂಗಡಿಗಳನ್ನು ಒಂದೊಂದಾಗಿ ಮುಚ್ಚುತ್ತಾ ಬಂದಿದ್ದಾರೆ. ಇದರಿಂದಾಗಿ ಬಡ ಕಾರ್ಮಿಕರು ಒಂದು ಬಾಟಲಿ ಮದ್ಯಕ್ಕೆ ೩೦ ರಿಂದ ೫೦ ರೂಪಾಯಿ ಹೆಚ್ಚಿನ ದರ ಭರಿಸಬೇಕಾಗುತ್ತದೆ. ಇದು ಬಡವರನ್ನು ನೇರವಾಗಿ ಲೂಟಿ ಮಾಡುವುದಾಗಿದೆ. ಮದ್ಯದ ದೊರೆಗಳ ಕಾನೂನುಬಾಹಿರ ಲೂಟಿಯಿಂದ ಗ್ರಾಮಗಳಲ್ಲಿ ಕೃಷಿ ಕಾರ್ಮಿಕರು, ನಗರಗಳಲ್ಲಿ ಹಮಾಲರು, ಸಣ್ಣ ವ್ಯಾಪಾರಿಗಳು ಇನ್ನೀತರ ಕಾರ್ಮಿಕರು ದಿನನಿತ್ಯ ತಮ್ಮ ದಣಿವನ್ನು  ಮರೆಯುವುದಕ್ಕಾಗಿ ಮಧ್ಯ ಸೇವಿಸುವ ಎಲ್ಲಾ ಕಾರ್ಮಿಕರು ಶೋಷಣೆಗೊಳಗಾಗಿದ್ದಾರೆ. ಬಡವರು ಮದ್ಯಕ್ಕೆ ಹೆಚ್ಚಿನ ಬೆಲೆ ಕೊಟ್ಟು ಮನೆಯಲ್ಲಿ ಹೆಂಡತಿ ಮಕ್ಕಳನ್ನು ಉಪವಾಸಕ್ಕಿಡು ಮಾಡುತ್ತಿದ್ದಾರೆ. ಬಡವರು ನಕಲಿ ಮದ್ಯ ಸೇವನೆಯಿಂದ ಆರೋಗ್ಯ ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದಾರೆ. ಸರಕಾರ ಕೂಡಲೇ ಗಂಗಾವತಿ ತಾಲ್ಲೂಕಿನಲ್ಲಿ ೨೦ ಸರ್ಕಾರಿ ಮದ್ಯದಂಗಡಿಗಳನ್ನು ಪ್ರಾರಂಭಿಸಬೇಕು. ಈಗ ಚಾಲ್ತಿಯಲ್ಲಿರುವ ಸನ್ನದುಗಳಾದ ಸಿ.ಎಲ್-೨, ಸಿ.ಎಲ್-೭ ಮತ್ತು ಸಿ.ಎಲ್.-೯ ಗಳಲ್ಲಿ ಸರಕಾರಿ ನಿಗದಿಪಡಿಸಿದ ಬೆಲೆಗೆ (ಎಂ.ಆರ್.ಪಿ) ಮಾರಬೇಕು. ಪರವಾನಿಗೆ ಇಲ್ಲದ ಅನಧಿಕೃತ ಅಂಗಡಿಗಳನ್ನು ಮುಚ್ಚಿಸಬೇಕು. ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಇದ್ದು ಇಲ್ಲದಂತಾಗಿರುವುದರಿಂದ ಇಲಾಖೆಯ ಅಕ್ರಮಗಳನ್ನು ತನಿಖೆಗೊಳಪಡಿಸಿ, ಪ್ರಕರಣ ದಾಖಲಿಸಬೇಕು. ನಿಗದಿತ ಬೆಲೆಗಿಂತ ಹೆ

ಹಕ್ಕೊತ್ತಾಯಗಳು :
೧.    ಗಂಗಾವತಿಯ ಹೊಸಳ್ಳಿ ರಸ್ತೆಯಲ್ಲಿ ಮುಚ್ಚಿದ ಎಂ.ಎಸ್.ಐ.ಎಲ್. ಸಿ.ಎಲ್-೨ ಸನ್ನದ್ದನ್ನು ಕೂಡಲೇ ಅದೇ ಸ್ಥಳದಲ್ಲಿ ಪ್ರಾರಂಭಿಸಬೇಕು.
೨.    ಗಂಗಾವತಿ ತಾಲ್ಲೂಕಿಗೆ ೨೦ ಸರ್ಕಾರಿ ಮದ್ಯದಂಗಡಿಗಳಿಗೆ ಅನುಮತಿ ಕೊಡಬೇಕು.
೩.    ನಿಗದಿತ ಬೆಲೆಗಿಂತಲೂ ಹೆಚ್ಚಿನ ದರಕ್ಕೆ ಮದ್ಯಮಾರುತ್ತಿರುವ ಎಲ್ಲಾ ಸನ್ನದುಗಳ ಪರವಾನಿಗೆ ರದ್ದುಗೊಳಿಸಬೇಕು.
೪.    ಕೊಪ್ಪಳ ಜಿಲ್ಲೆಯಾದ್ಯಂತ ಹರಡಿರುವ ಕಲಬೆರಕೆ, ಹಾಗೂ ನಕಲಿ ಮದ್ಯದ ಮಾರಾಟವನ್ನು ತಡೆಯಬೇಕು.
೫.    ಜಿಲ್ಲೆಯಲ್ಲಿ ಗಲ್ಲಿಗಲ್ಲಿಯಲ್ಲಿರುವ ಅನಧಿಕೃತ ಮದ್ಯದಂಗಡಿಗಳನ್ನು ಮುಚ್ಚಿಸಬೇಕು. ಎಲ್ಲಾ ಕಾನೂನುಬದ್ಧ ಒತ್ತಾಯಗಳಿಗೆ ಸರ್ಕಾರ ಮಾನ್ಯತೆ ನೀಡಿ ಕ್ರಮ ಜರುಗಿಸಿ ಕಾನೂನಿಗೆ ಗೌರವ ಕೊಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಈ ಧರಣಿ ಸತ್ಯಾಗ್ರಹದಲ್ಲಿ ಭಾರಧ್ವಾಜ್, ಬಸವರಾಜ ಸುಳೇಕಲ್, ಸಿದ್ದಪ್ಪ ಕುರಿ, ಮಾಬುಸಾಬ್, ಶಿವಯೋಗಿ ಅಂಗಡಿ ಜೊತೆಗೆ ಇನ್ನೀತರ ಕೃಷಿ ಕಾರ್ಮಿಕ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಚ್ಚಾಗಿ ಮಾರುತ್ತಿರುವ ಸನ್ನದು ಮಾಲೀಕರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು.

Leave a Reply