ಅ. ೧೬ ರಂದು ಕೊಪ್ಪಳ ನೂತನ ಡೇರಿ ಶಂಕುಸ್ಥಾಪನಾ ಸಮಾರಂಭ

  ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ ಹಾಗೂ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಅ. ೧೬ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ತಾಲೂಕಿನ ಬೂದಗುಂಪಾ ಕ್ರಾಸ್ ಬಳಿ ಜರುಗಲಿದೆ.
  ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದು, ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ಕೊಪ್ಪಳ ನೂತನ ಡೇರಿಯ ಶಂಕುಸ್ಥಾಪನೆ ನೆರವೇರಿಸುವರು.  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇವು ಸಾಂಧ್ರೀಕರಣ ಘಟಕ ಕಟ್ಟಡಕ್ಕೆ ಶಂಕುಸ್ಥಾಪನೆ, ಜಿಲ್ಲಾ ಉಸ್ತುವಾರಿ ಸಚಿವರು  ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಎನ್.ಸಿ.ಡಿ.ಸಿ. ಆರ್ಥಿಕ ನೆರವಿನ ಸಂಘಗಳ ಕಟ್ಟಡದ ಶಂಕುಸ್ಥಾಪನೆ, ಪಶು ಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಅವರು ಜಿಲ್ಲಾ ಪಂಚಾಯತಿ ಅನುದಾನದ ಸಂಘಗಳ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸುವರು.  ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು ನೆರವೇರಿಸಲಿದ್ದು, ಕೆ.ಎಂ.ಎಫ್. ಅಧ್ಯಕ್ಷ ಜಿ. ಸೋಮಶೇಕರ ರೆಡ್ಡಿ ಅವರು ಕೆ.ಎಂ.ಎಫ್. ಅನುದಾನದ ಸಂಘಗಳ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸುವರು.  ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.  ಸಂಸದ ಶಿವರಾಮಗೌಡ ಅವರು ಗಂಗಾವತಿ ಉಪ ಕಚೇರಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸುವರು.  ಮುಖ್ಯ ಅತಿಥಿಗಳಾಗಿ ಡಾ: ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುನೀಲ್ ವಲ್ಯಾಪುರೆ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ, ಜಿ.ಪಂ. ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ, ಶಾಸಕರುಗಳಾದ ಕರಡಿ ಸಂಗಣ್ಣ, ಅಮರೇಗೌಡ ಬಯ್ಯಾಪುರ, ಈಶಣ್ಣ ಗುಳಗಣ್ಣವರ, ಶಿವರಾಜ್ ಎಸ್ ತಂಗಡಗಿ, ಹಾಲಪ್ಪ ಆಚಾರ್, ಶಶಿಲ್ ನಮೋಶಿ, ಕಾಡಾ ಅರ್ಧಯಕ್ಷ ಬಸನಗೌಡ ಬ್ಯಾಗವಾಟ, ಜಿ.ಪಂ. ಸದಸ್ಯ ಜನಾರ್ಧನ ಹುಲಗಿ, ತಾ.ಪಂ. ಅಧ್ಯಕ್ಷ ನಾಗರಾಜ ಚಲ್ಲೊಳ್ಳಿ, ತಾ.ಪಂ. ಸದಸ್ಯೆ ಭೀಮವ್ವ ಈರಪ್ಪ ತಮ್ಮರ್, ಗ್ರಾ.ಪಂ. ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷ ಬಸವರಾಜ್ ಪೆದ್ದಲ ಭಾಗವಹಿಸುವರು.  ವಿಶೇಷ ಆಹ್ವಾನಿತರಾಗಿನಗರ ಭೂಸಾರಿಗೆ ಮತ್ತು ನಗರಾಭಿವೃದ್ಧಿ ಇಲಾಖೆ ಆಯುಕ್ತರಾದ ವಿ. ಮಂಜುಳ, ಪಶುಪಾಲನೆ ಇಲಾಖೆ ಆಯುಕ್ತ ಆದೋನಿ ಸಯ್ಯದ್ ಸಲೀಂ, ಸಹಕಾರ ಸಂಘಗಳ ನಿಬಂಧಕ ಎಸ್.ಜಿ. ಹೆಗಡೆ, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಕೆ.ಎಂ.ಎಫ್. ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್, ಪಶುಪಾಲನೆ ಇಲಾಖೆ ನಿರ್ದೇಶಕ ಡಾ. ಡಿ.ಎಂ. ದಾಸ್, ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಪಾಲ್ಗೊಳ್ಳುವರು.

Please follow and like us:
error