ದಸರಾ ಕ್ರೀಡಾಕೂಟಗಳಿಗೆ ಆಯ್ಕೆ

ಕೊಪ್ಪಳ-20- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ  ಮಾರುತಿ , ಕಾರ್ತಿಕ್ , ಮಂಜುನಾಥ, ಭರತ್, ಸಂತೋಷ, ಮಹೇಶ ಹಾಗೂ ಮೋಹಿತಾ ಬೇಗಂ ಇವರುಗಳು  ಇತ್ತೀಚಿಗೆ  ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ತಾಲೂಕಾ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳಿಗೆ ಆಯ್ಕೆಯಾಗಿದ್ದಾರೆ. ಮೋಹಿತಾ ಬೇಗಂ  ಲಾಂಗ್ ಜಂಪ್ ನಲ್ಲಿ ಪ್ರಥಮ, ತ್ರಿಫಲ್ ಜಂಪ್‌ನಲ್ಲಿ ಪ್ರಥಮ,೨೦೦  ಮೀಟರ್ ರಿಲೆ ಓಟದಲ್ಲಿ ದ್ವೀತಿಯ ಸ್ಥಾನಗಳನ್ನು ಪಡೆದು ವೀರಾಗ್ರಣಿಯಾಗಿ ಹೊರಹೊಮ್ಮಿರುತ್ತಾರೆ. ದೈಹಿಕ ನಿದೇರ್ಶಕಿ ಶೋಭಾ ಕೆ.ಎಸ್ ತರಬೇತಿ ನೀಡಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ  ಹಾಗೂ ಸಿಬ್ಭಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
Please follow and like us:
error