ಕಾರಾಗೃಹವನ್ನು ಮನಪರಿವರ್ತನಾ ಕೇಂದ್ರ ಎಂದು ಸಂಭೋದಿಸಿ

೬೭ ನೇ ಸ್ವಾತಂತ್ಸ್ಯತ್ಸೋವದ ಅಂಗವಾಗಿ ದಿ ೧೮ರಂದು ಕೊಪ್ಪಳ ನಗರದ ಜಿಲ್ಲಾ ಕಾರಾಗೃಹದಲ್ಲಿ ರಾಷ್ಟ್ರೀಯ ಬಸವದಳ ಟ್ರಸ್ಟ್ ಹಾಗೂ ಲಿಂಗಾಯತ ಧರ್ಮಮಹಾಸಭೆಯ ಸಂಯುಕ್ತ ಆಶ್ರಯದಲ್ಲಿ ಮಾನವತ್ವದಿಂದ ದೈವತ್ವದ ಕಡೆಗೆ ಎನ್ನುವ ಕಾರ್ಯಕ್ರಮವನ್ನು ನೆರವೇರಿತು.    
ಕಾರ್ಯಕ್ರಮಕ್ಕೆ ಚಾಲನೇ ನೀಡಿ ಮಾತನಾಡಿದ ಕರ್ನಾಟಕ ರಾಜ್ಯ ರಾಷ್ಟ್ರೀಯ ಬಸವದಳದ ಕೋಶಾಧ್ಯಕ್ಷರಾದ ಚಂದ್ರಮೌಳಿ ಬೆಂಗಳೂರು, ಐರೋಪ್ಯ ದೇಶಗಳಲ್ಲಿ ಕಾರಾಗೃಹಕ್ಕೆ ಮನಪರಿವರ್ತನಾ ಕೇಂದ್ರ ( Reformation Shells )  ಗಳೆಂದು ಕರೆಯುತ್ತಾರೆ ಕೈದಿಗಳ ಕಾರಗೃಹ ಎಂಬ ಶಬ್ಧವು ಕೈದಿಗಳ ಮನಸ್ಸಿಗೆ ಕಿಳರಿಮೆಯನ್ನು ಮೂಡಿಸಿ ಮುಂದೆ ಸಮಾಜದಲ್ಲಿ ಅವರು ಜೀವಿಸಲು ಜಿಗುಪ್ಸೆ ಪಡಬಹುದು ಎಂಬ ಕಾರಣಕ್ಕೆ ಭಾರತದಲ್ಲಿಯ ಕಾರಾಗೃಹಗಳಿಗೆ ಮನಪರಿವರ್ತನಾ ಕೇಂದ್ರವೆಂದು ಸಂಭೋದಿಸಲು ಮನವಿ ಮಾಡಿದರು. ರಾಜ್ಯ  ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಶರಣ ವೀರಣ್ಣ ಕೊರ್ಲಹಳ್ಳಿ ಮಾತನಾಡುತ್ತಾ ಆತ್ಮೋದ್ಧಾರ ದೇಶ ಸೇವೆ ಮಾಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ ಕೈದಿಗಳು ತಮ್ಮ ಮನಪರಿವರ್ತಿಸಿಕೊಂಡು ಬಿಡುಗಡೆಯ ನಂತರ ಶರಣರ ಸಂತರ ಸತ್ಸಂಗದಲ್ಲಿ ತೋಡಗಿಕೊಂಡು ಸರಳ  ಹಾಗೂ ಸುಂದರ ಬೆಳಕನ್ನು ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೊಪ್ಪಳ ರಾಷ್ಟ್ರೀಯ ಬಸವದಳ ಸಂಘಟನೆ ನಿಮಗಾಗಿ ಮುಕ್ತ ಅವಕಾಶವನ್ನು ಕಲ್ಪಿಸಲಿದೆ ಎಂದು ನುಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾರಗೃಹದ ಅಧೀಕ್ಷಕರಾದ ಶರಣೆ ಶಾಂತ ಶ್ರೀ ಎಮ್. ಮಾತನಾಡುತ್ತಾ ೧೨ ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಮನ ಪರಿವರ್ತನೆಯ ಉದಾಹರಣೆಯನ್ನು ಉದಾರಿಸುತ್ತಾ ಇಂದು ರಾಷ್ಟ್ರೀಯ ಬಸವದಳ ಸಂಘಟನೆ ಮಾಡುತ್ತಿರುವ ಹೃದಯ ಪರಿವರ್ತನ ಕೆಲಸವೇ ದೊಡ್ಡ ತಪಸ್ಸು ಎಂದು ಶ್ಲಾಘಿಸಿದರು. ಇಂತಹ ಮಹತ್ವ ಪೂರ್ಣ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ನಿಮ್ಮೊಂದಿಗೆ ಯಾವಾಗಲೂ ಇರುತ್ತದೆ ಎಂದು ಹೇಳಿದರು.       
ಬಸವಣ್ಣನವರ ಪೂಜೆಯೊಂದಿಗೆ ಪ್ರಾರಂಭಗೊಂಡಿತು ಚೈತ್ರಾ ವೀರಾಪೂರ, ಚೈತ್ರಾ ಲಿಂಗಾಯತ, ವಚನ ನೃತ್ಯಾಭಿನಯ ಶರಣ ಸುಂಕಪ್ಪ ಅಮರಾಪೂರ, ಪ್ರಸ್ತಾವಿಕ ನುಡಿಯನ್ನು ಸಲ್ಲಿಸಿದರು.  ಪಂಚಾಕ್ಷರಿ ನಿರೂಪಿಸಿದರು, ಶಿವಬಸವಯ್ಯ ವೀರಾಪೂರ  ವಂಧಿಸಿದರು.   ಈ ಸಂದರ್ಭದಲ್ಲಿ ಶರಣರಾದ ಸತೀಶ ಮಂಗಳೂರು, ಮಂಜುನಾಥ ಹಾದಿಮನಿ, ಈಶ್ವರಪ್ಪ ಕಡೆಮನಿ,  ಶರಣೆಯರಾದ ವೀರಮ್ಮ ಕೊಳ್ಳಿ, ರೇಣುಕಮ್ಮ ಗಾಧಾರಿ, ಇನ್ನೂ ಮುಂತಾದ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಮನಪರಿರ್ತನಾ ಪುಸ್ತಕಗಳು ಮತ್ತು ವಚನಗಳ ಸಿ.ಡಿಗಳು ನೀಡಲಾಯಿತು.      
Please follow and like us:

Related posts

Leave a Comment