ನಗರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಂದ ೨೬ನೇ ವಾರ್ಡಿಗೆ ಭೇಟಿ

ಕೊಪ್ಪಳ. ನಗರದ ೨೬ನೇ ವಾರ್ಡಿಗೆ ಶನಿವಾರ ನಗರಸಭೆ ನೂತನ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ ಹಾಗೂ ಉಪಾಧ್ಯಕ್ಷ ಅಮ್ಜದ್ ಪಟೇಲ್ ಭೇಟಿ ನೀಡಿ, ವಾರ್ಡಿನ ಸಮಸ್ಯೆಗಳ ಬಗ್ಗೆ  ನಾಗರಿಕರಿಂದ ಅಹವಾಲು ಆಲಿಸಿದರು.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ವಾರ್ಡಿನ ಎಲ್ಲ ರಸ್ತೆಗಳು ಹಾಳಾಗಿದ್ದು ಕೂಡಲೇ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಭಾರಿ ಮಳೆಯಾದಾಗಲೆಲ್ಲ ವಾರ್ಡಿನ ಹಲವಾರು ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗುತ್ತಿದೆ. ವಾರ್ಡಿನ ಎಲ್ಲ ರಸ್ತೆಗಳ ಅಕ್ಕ-ಪಕ್ಕ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಯೂ ಸೇರಿದಂತೆ ತಮ್ಮ ವಾರ್ಡಿನ ಇನ್ನಿತರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ವಾರ್ಡಿನ ನಾಗರಿಕರು ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ ಹಾಗೂ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರನ್ನು ಒತ್ತಾಯಿಸಿದರು.
ವಾರ್ಡಿನ ಮೂಲ ಸೌಕರ್ಯಗಳ ಕುಂದು-ಕೊರತೆಯನ್ನು ಆಲಿಸಿದ ಅಧ್ಯಕ್ಷ-ಉಪಾಧ್ಯಕ್ಷರು ಸ್ಥಳದಲ್ಲಿದ್ದ ನಗರಸಭೆ ಸಿಬ್ಬಂದಿಗಳಿಗೆ ವಾರ್ಡಿನ ಮೂಲ ಸೌಕರ್ಯ ಅಭಿವೃದ್ಧಿಗೆ ಕೂಡಲೇ ಕಾರ್ಯಪ್ರವೃತ್ತರಾಗಲು ಸೂಚಿಸಿದರು.
ಈ ಸಂದರ್ಭದಲ್ಲಿ ವಾರ್ಡನ ಸದಸ್ಯ ಪ್ರಾಣೇಶ ಮಾದಿನೂರ, ಇನ್ನೋರ್ವ ನಗರಸಭೆ ಸದಸ್ಯ ಮಹೇಶ ಬಜಂತ್ರಿ, ವಾರ್ಡಿನ ಮುಖಂಡ ದುರುಗೇಶಪ್ಪ, ಸಜ್ಜಾದ ಹುಸೇನ್, ಶೇಖ್ ದಾದಾಪೀರ್, ಬಸವರಾಜ, ಸುಲ್ತಾನ ಸಾಬ್, ನಗರಸಭೆ ಸಿಬ್ಬಂದಿ ಶಿಲ್ಪಾ, ಮಹೆಬೂಬ ಕರ್ಕಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error