ಕ್ರೀಡೆ ಯಿಂದ ಆರೋಗ್ಯ ವೃದ್ದಿ ಸಂಸದ -ಕರಡಿ.

ಕೊಪ್ಪಳ-28- ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಆಸಕ್ತಿ ಕಡಿಮೆಯಾಗುತ್ತಿರುವದು ವಿಷಾದನೀಯದ ಆದರೆ  ಕ್ರೀಡಾ ಮನೋಭಾವನೆಯನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ಆರೋಗ್ಯ ವೃದ್ದಿ ಯಾಗುತ್ತದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ ಅವರು.
ಅವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಾಹವಿದ್ಯಾಲಯದ ನೆಡದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳಿಯ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ವಿದ್ಯಾರ್ಥಿಗಳು ಜೀವನದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ಕಾನೂನು ಮಾಹವಿದ್ಯಾಲಯದಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗಳನ್ನು ಏರ್ಪಡಿಸಿರುವದು ಶ್ಲಾಘನೀಯ ಎಂದ ಅವರು ಕಬಡ್ಡಿ ನಮ್ಮ ದೇಶದ ಗ್ರಾಮೀಣ ಕ್ರೀಡೆಯಾಗಿದ್ದು  ಈ ಕ್ರೀಡೆಯಿಂದ ಮನಸ್ಸು ಮತ್ತು ಆರೋಗ್ಯ ವಾಗಿರಲು ಇಂತಹ ಕ್ರೀಡೆ ಅವಶ್ಯ ಆದ್ದರಿಂದ ಇಂತಹ ಕ್ರೀಡೆಯನ್ನು ಉಳಿಸಿ ಬೇಳಸಬೇಕು ಎಂದರು.
ನಂತರ ಮಾತನಾಡಿದ ಮಾಜಿ ಸಚಿವ ಅಮರೇಗೌಡ ಯ್ಯಾಪೂರ ಮಾತನಾಡಿ ಕಾನೂನು ವಿದ್ಯಾರ್ಥಿಗಳು ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಆಯೋಜನೆ ಮಾಡಿರುವದು ಹೆಮ್ಮೇಯ ವಿಷಯ ಎಂದ ಅವರು ಇಂತಹ ಕ್ರೀಡಾ ಚಟುವಟಿಕೆಗಳನ್ನು ಆಯೋಜನೆ ಮಾಡುವದರಿಂದ ಗ್ರಾಮೀಣ ಕ್ರೀಡೆ ಉಳಿಯುತ್ತದೆ ಎಂದರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಕೆ.ಬಿ.ಬ್ಯಾಳಿ ವಹಿಸಿಕೊಂಡಿದ್ದರು,ಸ್ವಾಗತವನ್ನು ಕಾಲೇಜಿನ ಪ್ರಾಚರ್ಯರರು ಆದ ಡಾ:ಬಿ.ಎಸ್.ಹನಸಿ ವಹಿಸಿಕೊಂಡಿದ್ದರು..ದೈಹಿಕ ಉಪನ್ಯಾಸಕರು ಆದ ಬಸವರಾಜ ಅಳೋಳ್ಳಿ, ಪ್ರಸ್ತಾವಿಕವಾಗಿ ಕಾಲೇಜಿನ ಉಪನ್ಯಾಸಕ ಎಸ್,ಎಂ ಪಾಟೀಲ ಮಾತನಾಡಿದರು ಕಾರ್ಯಕ್ರಮದಲ್ಲಿ ಮುಖ್ಯಅಥಿಯಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಖಾಲಿದಖಾನ್ ,ಕೆ.ನಾಗಬಸಯ್ಯ ,ಮಾಜಿ ನಗರ ಸಭೆ ಸ್ಥಾಯಿ ಸಮೀತಿ ಅಧ್ಯಕ್ಷರು ಆದ ಸಿದ್ದು ಮ್ಯಾಗೇರಿ. ಉಪನ್ಯಾಸಕ ಬಸವರಾಜ ಎಸ್.ಎಂ,ಉಪನ್ಯಾಸಕಿ ಉಷಾದೇವಿ ಹಿರೇಮಠ, ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರ್ಥನೆ ಗೀತೆಯನ್ನು ಕಾ

ಲೇಜಿನ ವಿದ್ಯಾರ್ಥಿನಿ ಗಿರೀಜಾ ಸಂಗಡಿಗರು, ಮಾಲಾರ್ಪಣೆ ಕಾರ್ಯಕ್ರಮವನ್ನು ಕವಿತಾ ಮಡಿವಾಳರ,ಕಾರ್ಯಕ್ರಮದ ನಿರೂಪಣೆಯನ್ನು ವೈ,ಜಿ.ಕಬ್ಬಣ್ಣವರ್ ಹಾಗೂ ರೇಖಾ ನೀಲಪ್ಪನ್ನವರ, ಮಾಡಿದರು ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ ಉಪಸ್ಥಿತರಿದ್ದರು. ಕಾನೂನು ಕಾಲೇಜಿನ ಎಲ್ಲ ಕಬಡ್ಡಿ ಪಂದ್ಯಾವಳಿ ತಂಡಗಳು ಭಾಗವಹಿಸಿದ್ದ.

Please follow and like us:
error