ಟಿಪ್ಪು ಸುಲ್ತಾನ್ ಸರ್ವ ಧರ್ಮಗಳ ರಕ್ಷಕ: ಎಚ್‌ಡಿಕೆ

ಬೆಂಗಳೂರು, ನ.10: ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಸರ್ವಧರ್ಮಗಳಿಗೆ ರಕ್ಷಣೆ ಒದಗಿಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಗುರುವಾರ ನಗರದ ಪಕ್ಷದ ಕೇಂದ್ರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಟಿಪ್ಪು ಸುಲ್ತಾನ್‌ರ 262ನೆ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಟಿಪ್ಪು ಓರ್ವ ಸಮರ್ಥ ಆಡಳಿತಗಾರ ರಾಗಿದ್ದರು. ತನ್ನ ಆಡಳಿತಾವಧಿಯಲ್ಲಿ ಸರ್ವಧರ್ಮಗಳಿಗೂ ರಕ್ಷಣೆ ಒದಗಿಸುವ ಉದ್ದೇಶ ಹೊಂದಿದ್ದರು. ಎಲ್ಲ ಸಮು ದಾಯದ ಅಭಿವೃದ್ಧಿ ಕುರಿತು ವಿಶಿಷ್ಟ ತತ್ವ-ಸಿದ್ಧಾಂತಗಳು ಹಾಗೂ ಚಿಂತನೆಗ ಳನ್ನು ಹೊಂದಿದ್ದರು ಎಂದು ಕುಮಾರಸ್ವಾಮಿ ಶ್ಲಾಘಿಸಿದರು. ಟಿಪ್ಪು ಮತ್ತು ಜೆಡಿಎಸ್ ಪಕ್ಷಕ್ಕೆ ಬಹಳ ಸಂಬಂಧವಿದೆ. ಅವರ ತತ್ವ- ಸಿದ್ಧಾಂತಗಳು ಹಾಗೂ ಪಕ್ಷದ ತತ್ವ- ಸಿದ್ಧಾಂತಗಳಿಗೆ ಹೋಲಿಕೆ ಇದ್ದು, ಸರ್ವಧರ್ಮಗಳ ರಕ್ಷಣೆಯ ಬಗೆಗೆ ಅವರಿಗಿದ್ದ ಚಿಂತನೆಗಳನ್ನು ಪಕ್ಷ ಹೊಂದಿದೆ ಎಂದರು.
ಟಿಪ್ಪುವಿನ ಸ್ವಾಭಿಮಾನ ಮತ್ತು ಕೆಚ್ಚೆದೆಯ ಹೋರಾಟದ ಗುಣಗಳನ್ನು ಪಕ್ಷದ ಅಲ್ಪಸಂಖ್ಯಾತರ ಘಟಕ ಕಾರ್ಯಕರ್ತರು ಅಳವಡಿಸಿಕೊಳ್ಳ ಬೇಕು. ಪಕ್ಷದ ಸಂಘಟನೆಗೆ ಸಂಕಲ್ಪ ತೊಟ್ಟು, ಮುಂದಿನ ಚುನಾವಣೆಯಲ್ಲಿ ಪಕ್ಷದ ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ಕರೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಝಮೀರ್ ಅಹ್ಮದ್ ಖಾನ್, ಅಲ್ಪಸಂಖ್ಯಾತರ ರಕ್ಷಣೆಗೆ ಶ್ರಮಿಸುವ ಏಕೈಕ ಪಕ್ಷ ಜೆಡಿಎಸ್. ದೇವೇಗೌಡರು ದೇಶದ ಪ್ರಧಾನಿಗಳಾಗಿದ್ದಾಗ ಮತ್ತು ಕುಮಾರಸ್ವಾಮಿ ರಾಜ್ಯ ಮುಖ್ಯಮಂತ್ರಿಗಳಾಗಿದ್ದ ವೇಳೆ ಮುಸ್ಲಿಮರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರು. ರಾಜ್ಯಾದ್ಯಂತ ಹಂಚಿ ಹರಿದು ಹೋಗಿದ್ದ ವಕ್ಫ್ ಮಂಡಳಿ ಆಸ್ತಿಯು ಒಂದುಗೂಡಿರುವುದಕ್ಕೆ ಕುಮಾರ ಸ್ವಾಮಿಯೇ ಕಾರಣ ಎಂದು ಶ್ಲಾಘಿಸಿದರು. ರಾಜ್ಯದ ಪ್ರಥಮ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಅವರ ಹೆಸರು ಚಿರಸ್ಥಾಯಿ ಮಾಡುವ ದೃಷ್ಟಿಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ನಾಮಕರಣ ಮಾಡ ಬೇಕು. ವಿಂಡ್ಸನ್ ಮ್ಯಾನರ್ ವೃತ್ತಕ್ಕೆ ಮತ್ತು ವಿಂಡ್ಸನ್ ಮ್ಯಾನರ್ ವೃತ್ತದಿಂದ ವಿಮಾನ ನಿಲ್ದಾಣದವರೆಗಿನ ರಸ್ತೆಗೆ ಟಿಪ್ಪು ಸುಲ್ತಾನ್ ಹೆಸರಿಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಪಕ್ಷ ಒತ್ತಡ ಹೇರಬೇಕು ಎಂದು ಅವರು ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಲೂರು ಬಿಜೆಪಿ ಘಟಕದ ಅಧ್ಯಕ್ಷ, ಕೆ.ಎಸ್. ಮಂಜುನಾಥ್, ನಗರಸಭೆ ಸದಸ್ಯ ಪ್ರದೀಪ್ ರೆಡ್ಡಿ ನೂರಾರು ಬೆಂಬಲಿಗ ರೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯ ಸಮ್ಮ ಖದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಗೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕವು, ಎಚ್.ಡಿ. ಕುಮಾರ ಸ್ವಾಮಿ, ಸಂಸದ ಚಲುವ ರಾಯ ಸ್ವಾಮಿ, ಶಾಸಕ ಝಮೀರ್ ಅಹ್ಮದ್ ಖಾನ್, ತಲಕಾಡು ಚಿಕ್ಕರಂಗೇ ಗೌಡ ಅವರಿಗೆ ಟಿಪ್ಪು ಸುಲ್ತಾನ್ ಪೇಟ ತೊಡಿಸಿ ಸನ್ಮಾನಿಸಲಾಯಿತು
Please follow and like us:

Related posts

Leave a Comment