ಬೃಹತ್ ದಾಸೋಹ ಮಂಟಪ ಸಿದ್ದಗೊಂಡಿದೆ

ಕೊಪ್ಪಳ :  ಅನ್ನ, ಆಧ್ಯಾತ್ಮ ಹಾಗೂ  ಅಕ್ಷರ  ಈ ತ್ರಿವಿಧ ದಾಸೋಹಗಳಿಂದಾಗಿ ಪ್ರಖ್ಯಾತಿಗೊಂಡಿರುವ ಶ್ರೀಗವಿಮಠವು ನಿರಂತರವಾಗಿ  ಅವುಗಳನ್ನು ನಡೆಸಿಕೊಂಡು ಬರುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಜಾತ್ರಾ ಸಂದರ್ಭದಲ್ಲಿ ಆಗಮಿಸಿದ ಭಕ್ತಸಮೂಹಕ್ಕೆ ವಿಶಿಷ್ಟ ರೀತಿಯಲ್ಲಿ ಅನ್ನದಾಸೋಹವನ್ನು ವ್ಯವಸ್ಥೆಗೊಳಿಸಿದ್ದಾರೆ. ಈಗಾಗಲೇ ಅದಕ್ಕಾಗಿ  ಬೃಹತ್ ದಾಸೋಹ ಮಂಟಪ ಸಿದ್ದಗೊಂಡಿದೆ.  ಅಲ್ಲಿ ವಿಶೇಷ ಒಲೆಗಳನ್ನು ನಿರ್ಮಿಸಿ ಅದರ ಮೇಲೆ ಬೃಹತ್ ಕೊಪ್ಪರಿಕೆ, ಸಾಂಭಾರು ಮಾಡಲಿಕ್ಕಾಗಿ ಆಳೆತ್ತರದ ಕೊಳಗಗಳು, ಸಿಹಿಮಾದಲಿಯನ್ನು ಸಂಗ್ರಹಮಾಡಲು ದೊಡ್ಡ ಕಟ್ಟೆ,  ಬೃಹತ್ ಪಾಕ ಶಾಲೆಗಳು, ಧಾನ್ಯ ಸಂಗ್ರಹ ಕೋಣೆ, ಕಾಯಿಪಲ್ಯ, ರೊಟ್ಟಿ ಸಂಗ್ರಹ ಸ್ಥಳ ಇವುಗನ್ನು  ಆಯೋಜಿಸಲಾಗಿದೆ.  ಪ್ರಸಾದ ತಯಾರಿಕೆಗಾಗಿ ಕೊಪ್ಪರಿಕೆಗಳು, ಕೊಳಗಗಳು, ತಳ್ಳುಬಂಡಿ, ಹೀಗೆ  ದಾಸೋಹಕ್ಕಾಗಿ ಬೇಕಾಗುವ ವಿವಿಧ ಪರಿಕರಗಳನ್ನು ಸಂಗ್ರಹಿಸಲಾಗಿದೆ. ಸಹಸ್ರಾರು ಭಕ್ತರು ಏಕಕಾಲದಲ್ಲೇ  ಪ್ರಸಾದವನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ. ದಾಸೋಹ ಮಂಟಪದಲ್ಲಿ  ಎರಡು ಕ

ಡೆ ನೀರಿನ ಸೌಕರ್ಯ ಕಲ್ಪಿಸಿದೆ. ಜೊತೆಗೆ ಮಹಿಳೆಯರಿಗೆ ಪ್ರಸಾದ ಸ್ವೀಕರಿಸಲು ಪ್ರತೇಕ ವ್ಯವಸ್ಥೆ ಕೈಗೊಳ್ಳಲಾಗಿದೆ.

ಕೊಪ್ಪಳ : ಸಂಸ್ಥಾನ ಶ್ರಿಗವಿಮಠದ ಜಾತ್ರೆಯ ಅಂಗವಾಗಿ ಮಹಾದಾಸೋಹಕ್ಕೆ ಇಂದು ಕುಟುಗನಹಳ್ಳಿ ಗ್ರಾಮದ ಭಕ್ತರಿಂದ ೨೦೦೦ ರೊಟ್ಟಿ, ೮ ಚೀಲ ದವಸಧಾನ್ಯಗಳು ಸಮರ್ಪಣೆಯಾದವು. ದಾನಿಗಳಿಗೆ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.

Leave a Reply