fbpx

ಯಲಬುರ್ಗಾ : ಇಂದಿನಿಂದ ವಿವಿದೆಡೆ ಗ್ರಾಮೀಣ ಕ್ರೀಡೋತ್ಸವ

 ಕೊಪ್ಪಳ, ಮಾ. ೧೮. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ಗ್ರಾಮ ಪಂಚಾಯತ ಮತ್ತು ಜಿಲ್ಲಾ ಯುವ ಸಂಘಗಳ ಒಕ್ಕೂಟ ಹಾಗೂ ವಿವಿಧ ಯುವ ಸಂಘಗಳ ಆಶ್ರಯದಲ್ಲಿ ಮಾರ್ಚ ೧೯ ರಿಂದ ಮೂರು ದಿನಗಳ ಕಾಲ ಗ್ರಾಮೀಣ ಕ್ರೀಡೋತ್ಸವ ನಡೆಯಲಿದೆ.
ಮಾರ್ಚ್ ೧೯ ರ ಬೆಳಿಗ್ಗೆ ೧೦-೦೦ ಕ್ಕೆ ಯಲಬುರ್ಗಾ ತಾಲೂಕ ಕುಕನೂರ ಹೋಬಳಿ ಕ್ರೀಡಾಕೂಟ ಕುಕನೂರಿನ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕುಕನೂರಿನ ಜೋಡು ಮಾರುತೇಶ್ವರ ಯುವಕ ಸಂಘದ ಆಶ್ರಯದಲ್ಲಿ ನಡೆಯಲಿದ್ದು ಕ್ರೀಡಾಕೂಟವನ್ನು ಶಾಸಕ ಬಸವರಾಜ ರಾಯರೆಡ್ಡಿ ಉದ್ಘಾಟಿಸುವರು. ಕೊಪ್ಪಳ ಸಂಸದ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯತ ಅಧ್ಯಕ್ಷ ಅಮರೇಶ ಕುಳಗಿ, ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಸಾಲೋಣಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅರವಿಂದಗೌಡ ಪಾಟೀಲ, ಕೃಷಿ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪರಸಪ್ಪ ಕತ್ತಿ, ಜಿಲ್ಲಾ ಪಂಚಾಯತ ಸದಸ್ಯ ಈರಪ್ಪ ಕುಡಗುಂಟಿ, ಮಂಗಳೂರು ಜಿ. ಪಂ. ಸದಸ್ಯ ಅಶೋಕ ತೋಟದ, ಎ. ಪಿ. ಎಂ. ಸಿ. ಅಧ್ಯಕ್ಷ ಮಾನಪ್ಪ ಪೂಜಾರ, ಪಿ. ಎಲ್. ಡಿ. ಬ್ಯಾಂಕ್ ಅಧ್ಯಕ್ಷ ಮಹೇಶ ಹಳ್ಳಿ ಮತ್ತು ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯಸ್ವಾಮಿ ಹಿರೇಮಠ, ತಾಲೂಕ ಪಂಚಾಯತಿ ಅಧ್ಯಕ್ಷರು, ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರು ಸೇರಿದಂತೆ ಇತರರು ಭಾಗವಹಿಸುವರು.
ಅದೇ ರೀತಿ ಮಾರ್ಚ್ ೨೦ ರಂದು ಬೆಳಿಗ್ಗೆ ೧೦-೦೦ ಕ್ಕೆ ಯಲಬುರ್ಗಾ ತಾಲೂಕ ಮಂಗಳೂರು ಹೋಬಳಿ ಕ್ರೀಡಾಕೂಟವನ್ನು ಹಿರೇಬೀಡನಾಳ ಸ್ವಾಮಿ ವಿವೇಕಾನಂದ ಯುವಕ ಸಂಘದ ಆಶ್ರಯದಲ್ಲಿ ಹಿರೇಬೀಡನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಮತ್ತು ಮಾರ್ಚ್ ೨೧ ರಂದು ಶನಿವಾರ ಬೆಳಿಗ್ಗೆ ೧೦-೦೦ ಕ್ಕೆ ಯಲಬುರ್ಗಾ ತಾಲೂಕ ಹಿರೇವಂಕಲಕುಂಟಾ ಹೋಬಳಿ ಕ್ರೀಡಾಕೂಟವನ್ನು ಹಿರೇವಂಕಲಕುಂಟಾದಲ್ಲಿ ವಾಲ್ಮೀಕಿ ಯುವಕ ಸಂಘದ ಆಶ್ರಯದಲ್ಲಿ ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ದೇಸಿ ಕ್ರೀಡೆಗಳನ್ನು ಪ್ರಚುರಪಡಿಸಲು ಹಮ್ಮಿಕೊಂಡಿರುವ ಐದು ಪ್ರಕಾರಗಳ ದೇಸಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಾನದಂಡಗಳು ಇರುವದಿಲ್ಲ, ಟಗ್ ಆಫ್ ವಾರ್ (ಗುಂಪು), ಸಾಮೂಹಿಕ ರಸ್ತೆ ಓಟ, ಮ್ಯುಜಿಕಲ್ ಚೇರ್, ಸ್ಲೋ ಸೈಕಲ್ ರೇಸ್ ಸ್ಪರ್ಧೆಗಳನ್ನು ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹಮ್ಮಿಕೊಳ್ಳಲಾಗಿದ್ದು, ಪುರುಷರಿಗೆ ಭಾರ ಎತ್ತುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ಕೊಡಲಾಗುವದು ಆಸಕ್ತರು ಅಂದೇ ಬೆಳಿಗ್ಗೆ ೯ ಕ್ಕೆ ಬಂದು ಹೆಸರು ನೊಂದಾಯಿಸಿಕೊಂಡು ಪಾಲ್ಗೊಳ್ಳಬಹುದು ಎಂದು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಟಿ. ರಾಮಕೃಷ್ಣಯ್ಯ ಮತ್ತು ಜಿಲ್ಲಾ ಯುವ ಒಕ್ಕೂಟದ ಸಂಚಾಲಕರು   ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!