fbpx

ಕಳಪೆ ಕಾಮಗಾರಿ ದುರಂತಕ್ಕೆ ಕಾರಣ.

ಗಂಗಾವತಿ-೦೪ : ಕೆಸರಹಟ್ಟಿ ಗ್ರಾಮದ ಹತ್ತಿರ ತುಂಗಭದ್ರಾ ಎಡದಂಡೆ  ಕಾಲುವೆ ಒಡೆದು ಹೋಗಿರುವುದಕ್ಕೆ ಕಳಪೆ ಕಾಮಗಾರಿ ಕಾರಣ ಎಂದುಜನಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರಾದ ಕೆ. ಗಣೇಶ ನಾಗೇಂದ್ರ ಆರೋಪಿಸಿದ್ದಾರೆ.ಕಾಲುವೆ ದುರಂತದಿಂದ ರೈತರ ಅಪಾರ ಪ್ರಮಾಣದ ಬೆಳೆ ನಾಶಗೊಂಡಿದೆ. ಕಾರಣ ರೈತರಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ  ಈ ಘಟನೆ ನಡೆದಿದ್ದು, ಕಾಲುವೆ ದುರಸ್ಥಿ ಸಂದರ್ಭದಲ್ಲಿ ಪರ್ಸೇಂಟೇಜ್ ವಸೂಲಿ ನೀತಿಯಿಂದ ಇಂಥ ಪ್ರಕರಣಗಳು ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಿ ಅವರ ವೇತನದಲ್ಲಿ ದುರಸ್ತಿ ಕಾಮಗಾರಿ ಮಾಡಿಸಬೇಕೆಂದು ಆಗ್ರಹಿಸಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಗಿ ನೀರಾವರಿ ಇಲಾಖೆಯ ಭ್ರಷ್ಠ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದಾರೆಂದು ಗಣೇಶ ಆರೋಪಿಸಿದ್ದಾರೆ.
Please follow and like us:
error

Leave a Reply

error: Content is protected !!