೧೨೭ ನೇ ಸರ್ವಪಲ್ಲಿ ರಾಧಕೃಷ್ಣನರವರ ದಿನಾಚರಣೆ ಸಮಾರಂಭ.

ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ೧೨೭ ನೇ ಸರ್ವಪಲ್ಲಿ ರಾಧಕೃಷ್ಣನರವರ ದಿನಾಚರಣೆ ಸಮಾರಂಭ ಶಿಕ್ಷಕ ದಿನಾಚರಣೆಯನ್ನು ಆಚರಿಸಲಾಯಿತು ಸಮಾರಂಭದಲ್ಲಿ ಮುಖ್ಯ ಅತಿಥಿಸ್ಥಾನವನ್ನು ವಹಿಸಿ ಮಾತನಾಡಿದ ಸಂಸ್ಥೆಯ ಉಪನ್ಯಾಸಕರಾದ ಆನಂದರಾವ್ ಮಾತನಾಡಿ  ಸಾಧರಣ ಶಿಕ್ಷಕ ವಿವರಿಸುತ್ತಾನೆ ಉತ್ತಮ ಶಿಕ್ಷಕ ಬೋಧಿಸುತ್ತಾನೆ ಅತ್ಯುತ್ತಮ ಶಿಕ್ಷಕ ವಿದ್ಯಾರ್ಥಿಗಳ ಕಲಿಕೆಗೆ ಪ್ರೇರೆಸಿಸುತ್ತಾನೆ ಅಂತಹ ಶಿಕ್ಷಕರಾಗಿರೆಂದು ವಿದ್ಯಾರ್ಥಿಗಳಿಗೆ ಕರೆನಿಡಿದರು. ಇನೊರ್ವ ಅತಿಥಿಸ್ಥಾನ ವಹಿಸಿ ಮಾತನಾಡಿದ ಸಂಸ್ಥೆಯ ಉಪನ್ಯಾಸಕರಾದ ಎಲ್.ಎಸ್.ಹೊಸಮನಿ ಮಾತನಾಡಿ ವಿದ್ಯಾರ್ಥಿಗಳ ಭವಿಷತನ್ನು ಬೆಳಗಿಸುವಂತಹ ಆದರ್ಶ ಶಿಕ್ಷಕರಾಗಿರೆಂದು ತಿಳಿಸಿದರು. ಪ್ರಶಿಕ್ಷಣಾರ್ಥಿಗಳಾದ ರಮೇಶ.ಝಬೀನಾ.ಲಕ್ಷ್ಮೀಕಾಂತ ಗವಿಸಿದ್ದಪ್ಪ . ಸಂತೋಷ.ಗೀತಾ.ಹಾಗೂ ಕಾಮಾಕ್ಷಿ ಶಿಕ್ಷಕರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಕಾಶ.ಕ.ಬಡಿಗೇರ ಮಾತನಾಡಿ  ಡಾ. ಎ.ಪಿ.ಜೆ ಅಬ್ದಲ್ ಕಲಾಂ ಬೋಧನೆಯೊಂದಿಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅತ್ಯುತ್ತಮ ಶಿಕ್ಷರಾಗಿ ಹೊರಹೊಮ್ಮಿ ಎಂದು ಹೇಳಿದರು ಪ್ರಾರ್ಥನೆ ಅಂದಪ್ಪ ಸಂಗಡಿಗರು.ಸ್ವಾಗತ ಲಕ್ಷ್ಮೀದೇವಿ ನೇರವೆರಿಸಿದರು.ವಂದನಾರ್ಪಣೆಯನ್ನು ಯಮನೂರಪ್ಪ ಮಂತ್ರಿ. ನಿರೂಪಣೆ ಗಾಯತ್ರಿ ಯಲ್ಲಪ್ಪ ನೇರವೆರಿಸಿದರು.   
           
Please follow and like us:
error