ರೈಲ್ವೆ ಮುಂಗಡ ಟಿಕೇಟ್ ಕಾಯ್ದಿರಿಸುವ ಕೌಂಟರ್ ಸಮಯ ವಿಸ್ತರಣೆ.

ಕೊಪ್ಪಳ, ಅ.೦೯ (ಕ ವಾ) ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿನ ಮುಂಗಡ ಟಿಕೇಟ್ ಕಾಯ್ದಿರಿಸುವ ಕೌಂಟರ್ ಕಾರ್ಯ ನಿರ್ವಹಣೆ ಸಮಯವನ್ನು ರಾತ್ರಿ ೮ ಗಂಟೆಯವರೆಗೆ ಪ್ರಾಯೋಗಾತ್ಮಕವಾಗಿ ವಿಸ್ತರಿಸಲಾಗಿದೆ.
     ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿನ ಮುಂಗಡ ಟಿಕೇಟ್ ಕಾಯ್ದಿರಿಸುವ ಕೌಂಟರ್ ಕಾರ್ಯ ನಿರ್ವಹಣೆ ಸಮಯವನ್ನು ಇದೇ ಅ. ೦೮ ರಿಂದ ಅ. ೧೭ ರವರೆಗೆ ಪ್ರಾಯೋಗಾತ್ಮಕವಾಗಿ ವಿಸ್ತರಿಸಲಾಗಿದೆ. ಈ ಮೊದಲು, ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಬೆಳಿಗ್ಗೆ ೦೮ ರಿಂದ ಮಧ್ಯಾಹ್ನ ೧೨ ರವರೆಗೆ ಮತ್ತು ಮಧ್ಯಾಹ್ನ ೦೨ ರಿಂದ ಸಂಜೆ ೦೬ ಗಂಟೆಯವರೆಗೆ ಮಾತ್ರ ಮುಂಗಡ ಟಿಕೇಟ್ ಕಾಯ್ದಿರಿಸಲು ಅವಕಾಶವಿದ್ದ ಕಾರಣ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಇದನ್ನು ಮನಗಂಡ ಸಂಸದ ಸಂಗಣ್ಣ ಕರಡಿ ಅವರು ಮುಂಗಡ ಟಿಕೇಟ್ ಕಾಯ್ದಿರಿಸುವಿಕೆಯ ಸಮಯವನ್ನು ವಿಸ್ತರಿಸುವ ಅವಶ್ಯಕತೆ ಕುರಿತು ಕಳೆದ ಸೆ.೧೧ ರಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅವರನ್ನು ಖುದ್ದಾಗಿ ಭೇಟಿ ಮಾಡಿ ವಿವರಣೆ ನೀಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಅವರು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿನ ಮುಂಗಡ ಟಿಕೇಟ್ ಕಾಯ್ದಿರಿಸುವ ಸಮಯವನ್ನು ಬೆಳಿಗ್ಗೆ ೦೮ ರಿಂದ ರಾತ್ರಿ ೦೮ ರವರೆಗೆ ವಿಸ್ತರಿಸಿದ್ದಾರೆ.  ಸಾರ್ವಜನಿಕರು ಅ.೦೮ ರಿಂದ ಅ.೧೭ ರವರೆಗೆ ಪ್ರಯೋಗಾತ್ಮಕವಾಗಿ ವಿಸ್ತರಿಸಲಾಗಿರುವ ಈ ಸಮಯದ ಸದುಪಯೋಗ ಪಡೆದುಕೊಳ್ಳುವಂತೆ ಸಂಸದ ಸಂಗಣ್ಣ ಕರಡಿ ಅವರು ತಿಳಿಸಿದ್ದಾರೆ.
Please follow and like us:
error