ವಿಧ್ಯಾರ್ಥಿನಿಯರಿಗೆ ಸ್ವರಕ್ಷಣಾ ಕುರಿತು ಕರಾಟೆ ತರಬೇತಿ.

ಕೊಪ್ಪಳ-21- ಇತ್ತೀಚಿಗೆ ತಾಲೂಕಿನ ಹಿರೇಬೊಮ್ಮನಾಳ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಸ್ವರಕ್ಷಣಾ ಕೌಶಲ್ಯಗಳನ್ನು ಆರ್.ಎಂ.ಎಸ್.ಎ ಯೋಜನೆಯಡಿಯಲ್ಲಿ ಕರಾಟೆ ತರಬೇತಿಯನ್ನು ಪ್ರಾರಂಭಿಸಲಾಯಿತು.
ಈ ತರಬೇತಿಯು ವಾರಕ್ಕೆ ೨ ಅವಧಿಯಂತೆ ೨೪ ಅವಧಿಗಳಲ್ಲಿ ೩ ತಿಂಗಳಲ್ಲಿ ತರಬೇತಿ ಮುಗಿಸುವಂತೆ ಕ್ರಮವಹಿಸಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕರಾದ ಪಿ.ಡಿ ರಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಈ ತರಬೇತಿಯಲ್ಲಿ ಕರಾಟೆ ಸಂಸ್ಥೆಯ ಮುಖ್ಯಸ್ಥರಾದ ಮಂಜುನಾಥ ಬೆಟಗೇರಿ ಮತ್ತು ಬಸಮ್ಮ ಹೆಚ್ ತರಬೇತಿಯನ್ನು ನೀಡಿದರು. ಹಿರೇಬೊಮ್ಮನಾಳ ಶಾಲೆಯ ಮುಖ್ಯಶಿಕ್ಷಕರಾದ ಪಿ.ಡಿ ರಂಗಪ್ಪ ದೈಹಿಕ ಶಿಕ್ಷಕರಾದ ಸಿದ್ದಪ್ಪ ಮೇಟಿ ಹಾಗೂ ಶಿಕ್ಷಕರಾದ ಜಿ.ಎಸ್.ಗೌಡರ್, ಜಿ.ಐ ಖಾನಾಪೂರ,  ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Comment