ಸಿಪಿಐ(ಎಂಎಲ್) ಪ್ರತಿಭಟನಾ ಧರಣಿ

   ಮಹಿಳೆಯರ ಮೇಲಿನ ಅತ್ಯಾಚಾರ ತಡೆಗಟ್ಟುವಲ್ಲಿ ವಿಫಲವಾದ ರಾಜ್ಯ ಸರಕಾರದ ದುರಾಡಳಿತ ವಿರೋಧಿಸಿ, ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘದ ಕಾರ್ಯಕರ್ತೆಯರನ್ನು ಚಿಕ್ಕಮಗಳೂರಿನಲ್ಲಿ ನಿನ್ನೆ ೦೫-೦೮-೨೦೧೪ ರಂದು ಕಪ್ಪು ಬಾವುಟ ಪ್ರತಿಭಟನೆ ನಡೆಸಿದ್ದಾರೆ. ಸಾಂಕೇತಿಕ ಪ್ರತಿಭಟನೆ ನಡೆಸಿದ್ದನ್ನು ಸಹಿಸಿಕೊಳ್ಳದ ಸತಕಾರ, ಕಾಂ|| ಲತಾ, ಲಲಿತಾ, ಸುಧಾ, ಸಿಂಚನಾ, ಮಂಜುಳಾ, ನಾಗರತ್ನ, ಕೆಂಪಮ್ಮ, ಪಾರ್ವತಿ, ಲಲಿತಾ, ಸುಶೀಲಾ ಸೇರಿದಂತೆ ೧೦ ಜನ ಮಹಿಳಾ ಹೋರಾಟ ಕಾರ್ಯಕರ್ತೆಯರನ್ನು ಬೆಳಿಗ್ಗೆ ಬಂಧಿಸಿ ರಾತ್ರಿವರೆಗೂ ಚಿಕ್ಕಮಗಳೂರು ಪೋಲಿಸ್ ಠಾಣೆಯಲ್ಲಿಟ್ಟಿದೆ. ಮಹಿಳಾ ಹೋರಾಟ ಗಾರ್ತಿಯರ ಅಕ್ರಮ ಬಂಧನ ವಿರೋಧಿಸಿ, ಕೂಡಲೇ ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಬಿ.ರುದ್ರಯ್ಯ ರವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಕೈಗೊಂಡ ಪ್ರತಿಭಟನಾ ಧರಣಿಯ ಮೇಲೆ ಪೋಲಿಸರು ಲಾಠಿ ಚಾರ್ಜ್ ಮಾಡಿದ್ದಾರೆ. ತದನಂತರ ಬಂಧಿಸಿ, ಠಾಣೆಯಲ್ಲಿ ಹಲ್ಲೆ ಮಾಡಿ ೧೦ ಜನ ಮಹಿಳಾ ಸಂಗಾತಿಗಳು  ಹಾಗೂ ಬಿ. ರುದ್ರಯ್ಯ, ಜಗನ್, ಮಹೇಶ್ ಹೆಚ್.ಸಿ., ಉಮೇಶ, ಮಂಜುನಾಥ ಬೈಗೂರು, ಪರಮೇಶ್, ಲೋಕೇಶ್.ಕೆ, ಸಾರ್ಥಿಕ ಎಂ. ಮತ್ತು ಬಸವರಾಜ್ ಸೇರಿದಂತೆ ಒಟ್ಟು ೧೮ ಜನರನ್ನು ಜೈಲಿಗೆ ತಳ್ಳಿದ್ದಾರೆ. ಹೊರಗಡೆ ಹಲವಾರು ಜನ ಗಾಯಗೊಂಡಿದ್ದಾರೆ. ಸರಕಾರದ ಗೂಂಡಾ ಪ್ರವೃತ್ತಿಯನ್ನು. ಹಾಗೆಯೆ, ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕ ಕೇಂದ್ರಗಳಲ್ಲಿ

ಸಿಪಿಐ(ಎಂಎಲ್) ಉಗ್ರವಾಗಿ ಖಂಡಿಸುತ್ತದೆ. ಹಾಗೆಯೇ, ರಾಜ್ಯದ ಎಲ್ಲಾ ಜಿಲ್ಲ ಹಾಗೂ ತಾಲೂಕ ಕೇಂದ್ರಗಳಲ್ಲಿ ಇಂದು ಹಾಗೂ ನಾಳೆ ಗೃಹ ಮಂತ್ರಿ ಜಾರ್ಜ್ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಯಿಸಿ ಈ ಕೆಳಕಂಡ ಒತ್ತಾಯಗಳನ್ನು ಮುಂದಿಡಬೇಕೆಂದು ಈ ಮೂಲಕ ಕರೆ ನೀಡಲಾಗಿದೆ.

೧. ಕಾಮ್ರೇಡ್ ಬಿ.ರುದ್ರಯ್ಯ ಹಾಗೂ ಇತರೆ ಸಂಗಾತಿಗಳನ್ನು ಬಿಡುಗಡೆ ಮಾಡಿ 
೨. ಚಿಕ್ಕಮಗಳೂರು ಎಸ.ಪಿ ಯನ್ನು ಅಮಾನತ್ತುಗೊಳಿಸಿ.
೩.  ಹೋರಾಟಗಳ ಮೇಲೆ ಪೋಲಿಸ್ ಗೂಂಡಾಗಿರಿ ನಿಲ್ಲಲಿ.
          ರಾಜ್ಯಾದ್ಯಂತ ಮಹಿಳೆಯರ ಮೆಲೆ ನಡೆಯುತ್ತಿರುವ ಅತ್ಯಾಚಾರ ದೌರ್ಜನ್ಯವನ್ನು ಖಂಡಿಸಿ ಮತ್ತು ಮಹಿಳೆಯರಿಗೆ ಸೂಕ್ತ ರಕ್ಷಣೆಗಾಗಿ ಒತ್ತಾಯಿಸಿ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ದಿನಾಂಕ: ೧೫-೦೮-೨೦೧೪ ಅಂದರೆ ನಿನ್ನೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳಾ ಮುಖಂಡರನ್ನು ಬಂಧಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರನ್ನು ಬಂಧಿಸಿರುವುದು ಸರ್ಕಾರದ ಸರ್ವಾಧಿಕಾರ ನೀತಿಯನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಲೇ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುವವರನ್ನು ಬಂಧಿಸಿರುವುದು ಇವರ ಡೋಂಘಿ ಸಾಮಾಜಿಕ ನ್ಯಾಯವನ್ನು ಸ್ಪಷ್ಟಪಡಿಸುತ್ತದೆ. ಪ್ರತಿನಿತ್ಯ ಅಪ್ರಾಪ್ತ ಬಾಕೀಯರು ಸೇರಿದಂತೆ ಹತ್ತಾರು ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಮಹಿಳೆಯರಿಗೆ, ದುರ್ಬಲ ಜನರಿಗೆ ರಕ್ಷಣೆ ಕೊಡಲು ವಿಫಲವಾಗಿರುವ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. 
       ಬಂಧಿಸಿದ ಮಹಿಳೆಯರನ್ನು ರಾತ್ರಿ ೧೧ ಘಂಟೆಯಾದರೂ ಬಿಡುಗಡೆಗೊಳಿಸದ ಪೋಲಿಸರ ಕ್ರಮವನ್ನು ಪ್ರಶ್ನೆ ಮಾಡಲು ಹೋದ ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಕಾ. ಬಿ ರುದ್ರಯ್ಯ ಸೇರಿದಂತೆ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ ಪೋಲೀಸರು, ಅತ್ಯಂತ ಕ್ರೂರವಾಗಿ ವರ್ತಿಸಿದ್ದಾರೆ. ಬಂಧಿಸಿದ ಮಹಿಳೆಯರು ಹಾಗೂ ಸಿಪಿಐ(ಎಂಎಲ್) ಮುಖಂಡರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಲು ಒತ್ತಾಯಿಸಿ ಪ್ರತಿಭಟನೆ   ಹೋರಾಟದಲ್ಲಿ ಬಸವರಾಜ್ ಸಿದ್ದಾಪುರ ಕೆಆರ್‌ಎಸ್ ಜಿಲ್ಲಾ ಕಾರ್ಯದರ್ಶಿ, ಅಲಿಬಾಬಾ, ರೈತ ಮುಖಂಡರಾದ ಮೂಕಣ್ಣ ಬಸಾಪುರ, ವಿದ್ಯಾರ್ಥಿ ಮುಖಂಡರಾದ ಹನುಮೇಶ ಪೂಜಾರ್, ಹನುಮಂತ ರೆಡ್ಡಿ, ಹನುಮೇಶ ಕವಿತಾಳ ಸೇರಿದಂತೆ ಹಲವರು ಭಾಗವಹಿಸಿದ್ದರು.
Please follow and like us:
error