ಕ.ರ.ವೇ ಸ್ವಾಭಿಮಾನಿ ಬಣದಿಂದ ಆನೆಗುಂದಿ ಉತ್ಸವ ಆಚರಿಸಲು ಮನವಿ

 ಕೊಪ್ಪಳ.೧೫ ಈ ಹಿಂದೆ ಹಂಪಿ ಉತ್ಸವದಂತೆ ಆನೆಗುಂದಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನೇರೆವೇರಿಸಲಾಗುತ್ತಿತ್ತು. ನಂತರ ಎರಡು ಉತ್ಸವಗಳನ್ನು ಒಟ್ಟಿಗೆ ನೇರೆವೇರಿಸಿದ್ದು ಸಂತಸದ ಸಂಗತಿ ಆದರೆ ಈ ಭಾರಿ ಹಂಪಿ ಉತ್ಸವವನ್ನು ಬರುವ ೨೦೧೫ ಜನವರಿ ೯, ೧೦ ಮತ್ತು ೧೧ ರಂದು ಆಚರಿಸಲು ತಿರ್ಮಾನಿಸಿ ಘೋಷಿಸಲಾಗಿದೆ, ಆದರೆ ಆನೆಗುಂದಿ ಉತ್ಸವವನ್ನು ನಿರ್ಲಕ್ಷಿಸಿರುವುದು ಎದ್ದು ಕಾಣುತ್ತಿದೆ.
           

ಸರ್ಕಾರ ಈ ಕ್ರಮ ಸರಿಯಲ್ಲವೆಂಬುವುದು ಸಂಘಟನೆ ಅಭಿಪ್ರಾಯ. ಜಿಲ್ಲೆಯ ಆನೆಗುಂದಿ ಕ್ಷೇತ್ರ ಕೂಡ ಅಷ್ಟೇ  ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಸಿದ್ದ ಕ್ಷೇತ್ರವಾಗಿದೆ ಆದ್ದರಿಂದ ಆನೆಗುಂದಿ ಉತ್ಸವವನ್ನು ಹಂಪಿ ಉತ್ಸವದ ಜೊತೆಗೆ ಆಚರಿಸಲು ಮುಂದಾಗಬೇಕು ಹಾಗೂ ಕನಕಗಿರಿ, ಇಟಗಿ, ಇವುಗಳ ಉತ್ಸವದ ದಿನಾಂಕವನ್ನು ಕೂಡಾ ನಿಗದಿ ಗೊಳಿಸಬೇಕು ಇಲ್ಲಾವಾದರೆ ಮುಂದಿನ ದಿನಗಳಲ್ಲಿ ಕ.ರ.ವೇ ಸ್ವಾಭಿಮಾನಿ ಬಣದ ವತಿಯಿಂದ ಉಗ್ರ ಹೊರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಅಧ್ಯಕ್ಷರಾದ ರಾಜೇಶ ಅಂಗಡಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ನಾಗರಾಜ ಹ್ಯಾಟಿ, ತಾ,ಯು, ಘ ಅಧ್ಯಕ್ಷರಾದ ಕೋಟೇಶ ಮ್ಯಾಗಳಮನಿ, ತಾ. ಪ್ರ. ಕಾ. ನೀಲಕಂಠಪ್ಪ ಮೈಲಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Leave a Reply